ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ವರ್ತಕರು ಒಟ್ಟಾಗಿ ಜಿಎಸ್ ಟಿ ಜಾರಿಗೆ ಸಿಟ್ಟು

|
Google Oneindia Kannada News

ಜುಲೈ ಒಂದಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಬರಲಿದೆ. ಇಡೀ ದೇಶದಲ್ಲಿ ಈ ಬಗ್ಗೆ ಕುತೂಹಲ ಇದೆ. ಜಾರಿಯಾದ ನಂತರ ಏನೆಲ್ಲ ಬದಲಾವಣೆಗಳು ಆಗಲಿವೆ, ಅಗತ್ಯ ವಸ್ತುಗಳ ಬೆಲೆಯಲ್ಲಿ ಯಾವ ರೀತಿ ಏರಿಳಿತ ಆಗಬಹುದು ಎಂಬ ಬಗ್ಗೆ ಜನರಲ್ಲಿ ಕಾತರ ಹಾಗೂ ನಿರೀಕ್ಷೆಗಳಿವೆ.

ಜುಲೈ ಒಂದರಿಂದ ಜಿಎಸ್ ಟಿ ಹೊರತಾಗಿ ಬದಲಾಗುವ ಎಷ್ಟೊಂದು ಸಂಗತಿಗಳಿವೆ!ಜುಲೈ ಒಂದರಿಂದ ಜಿಎಸ್ ಟಿ ಹೊರತಾಗಿ ಬದಲಾಗುವ ಎಷ್ಟೊಂದು ಸಂಗತಿಗಳಿವೆ!

ಈ ಮಧ್ಯೆ ಜಿಎಸ್ ಟಿ ಜಾರಿಗೆ ನಾನಾ ವ್ಯಾಪಾರ ವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ. ಬೆಲೆ ಏರಿಕೆ ಆಗುತ್ತದೆ ಎಂಬುದು ಸೇರಿದಂತೆ ಏಕ ರೂಪ ತೆರಿಗೆಗೆ ಸರಕಾರ ತಂದಿರುವ ನಿಯಮಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಅಸಮಾಧಾನವನ್ನು ತೋರಿಸಿಕೊಳ್ಳುವುದಕ್ಕೆ ಬಂದ್, ಪ್ರತಿಭಟನೆಗಳನ್ನು ಸಹ ಮಾಡುತ್ತಿದ್ದಾರೆ.

ಇಲ್ಲಿ ಕೆಲವು ಫೋಟೋಗಳಿವೆ ರಾಜಸ್ತಾನದ ಬಿಕಾನೇರ್ ನಲ್ಲಿ ಟೆಕ್ಸ್ ಟೈಲ್ಸ್ ವರ್ತಕರಿಂದ ಮೊದಲುಗೊಂಡು ನವದೆಹಲಿಯ ಪೀಠೋಪಕರಣ ಮಾರುಕಟ್ಟೆಯ ವರ್ತಕರು, ಕೋಲ್ಕತ್ತಾದಲ್ಲಿ ಮಳಿಗೆಗಳನ್ನು ಬಂದ್ ಮಾಡಿರುವ ವರ್ತಕರು, ಔಷಧಗಳ ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಖರೀದಿಗೆ ಮುಂದಾಗಿರುವ ಗ್ರಾಹಕರು... ಹೀಗೆ ವಿವಿಧ ಫೋಟೋಗಳು ಇಲ್ಲಿವೆ.

ಬಿಕಾನೇರ್ ಟೆಕ್ಸ್ ಟೈಲ್ ವರ್ತಕರ ಆಕ್ರೋಶ

ಬಿಕಾನೇರ್ ಟೆಕ್ಸ್ ಟೈಲ್ ವರ್ತಕರ ಆಕ್ರೋಶ

ರಾಜಸ್ತಾನದ ಬಿಕಾನೇರ್ ನ ಟೆಕ್ಸ್ ಟೈಲ್ ವರ್ತಕರು ಜಿಎಸ್ ಟಿ ಜಾರಿ ವಿರುದ್ಧ ಬಾಯಿಗೆ ಬೀಗ ಹಾಕಿಕೊಂಡು ಪ್ರತಿಭಟನೆ ನಡೆಸಿದರು.

ಭೂತದಹನ

ಭೂತದಹನ

ನವದೆಹಲಿಯ ಕೀರ್ತಿ ನಗರದಲ್ಲಿರುವ ಪೀಠೋಪಕರಣಗಳ ಮಾರುಕಟ್ಟೆಯಲ್ಲಿ ಜಿಎಸ್ ಟಿ ಜಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಭೂತದಹನ ಮಾಡಲಾಯಿತು.

ಔಷಧ ಬೆಲೆ ಏರಿಕೆ ಸಾಧ್ಯತೆ

ಔಷಧ ಬೆಲೆ ಏರಿಕೆ ಸಾಧ್ಯತೆ

ಜಿಎಸ್ ಟಿ ಜಾರಿಯಾದ ನಂತರ ಔಷಧಗಳ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇರುವುದರಿಂದ ಕೋಲ್ಕತ್ತಾದಲ್ಲಿ ಜನರು ಖರೀದಿಗಾಗಿ ಮೆಡಿಕಲ್ ಶಾಪ್ ಮುಂದೆ ನಿಂತ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ.

ಜೈಪುರ್ ನಲ್ಲಿ ಅಂಗಡಿ ಬಂದ್

ಜೈಪುರ್ ನಲ್ಲಿ ಅಂಗಡಿ ಬಂದ್

ಜಿಎಸ್ ಟಿ ಜಾರಿ ವಿರೋಧಿಸಿ ರಾಜಸ್ತಾನದ ಜೈಪುರ್ ನಲ್ಲಿ ಅಂಗಡಿಗಳನ್ನು ಮುಚ್ಚಿ ಬಂದ್ ನಡೆಸಿದ ವೇಳೆ ತಳ್ಳು ಗಾಡಿಯೊಂದನ್ನು ನೂಕಿಕೊಂಡು ಹೋಗುತ್ತಿದ್ದ ವ್ಯಾಪಾರಿಯೊಬ್ಬರು ಕಂಡು ಬಂದಿದ್ದು ಹೀಗೆ.

ಮೂರು ದಿನ ಬೀಗ

ಮೂರು ದಿನ ಬೀಗ

ಕೋಲ್ಕತ್ತಾದ ಬುರಾ ಬಜಾರ್ ನಲ್ಲಿ ಜಿಎಸ್ ಟಿ ವಿರುದ್ಧದ ಬಂದ್ ವೇಳೆ ಕಂಡು ಬಂದ ದೃಶ್ಯವಿದು.

ಅಹ್ಮದಾಬಾದ್ ನಲ್ಲೂ ಆಕ್ರೋಶ

ಅಹ್ಮದಾಬಾದ್ ನಲ್ಲೂ ಆಕ್ರೋಶ

ಜುಲೈ ಒಂದರಿಂದ ಜಿಎಸ್ ಟಿ ಜಾರಿಯಾಗುವ ಹಿನ್ನೆಲೆಯಲ್ಲಿ ಅಹ್ಮದಾಬಾದ್ ನಲ್ಲಿ ನಡೆದ ಬಂದ್ ವೇಳೆ ಅಂಗಡಿಯೊಂದಕ್ಕೆ ಬೀಗ ಹಾಕಲಾಗಿತ್ತು.

English summary
Traders and businessmen opposing to GST implementation. Here is the photo feature about strike and protest against GST implementation with PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X