ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಬಾರದ ಮಾತಾಡಿ ತಪರಾಕಿ ಬಿದ್ದ ಮೇಲೆ ಕೈ ಜೋಡಿಸಿದಳೆ ರಾಖಿ!

|
Google Oneindia Kannada News

ತಮಿಳುನಾಡಿನಲ್ಲಿ ಉಪ ಚುನಾವಣೆ ರಂಗೇರಿದೆ ಜಯಲಲಿತಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಎಐಎಡಿಎಂಕೆಯಲ್ಲಿ ಎರಡು ಬಣವಾಗಿ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಬಣದಿಂದ ಪ್ರತ್ಯೇಕವಾಗಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅದರಲ್ಲೂ ಒಪಿಎಸ್ ಬಣದವರು ಜಯಲಲಿತಾ ಪಾರ್ಥಿವ ಶರೀರದ ಪ್ರತಿಕೃತಿ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ.

ಇನ್ನು ವಾಲ್ಮೀಕಿ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡಿದ್ದ ಬಾಲಿವುಡ್ ನಟಿ ಗುರುವಾರ ಮುಂಬೈನಲ್ಲಿ ಮಾಧ್ಯಮದವರ ಎದುರು ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಬಾಲಿವುಡ್ ಚಿತ್ರಗಳ ನಿರ್ಮಾಪಕಿ ಏಕ್ತಾ ಕಪೂರ್ ತನ್ನ ತಂದೆ ಜತೆಗೂಡಿ ಅಜ್ಮೇರ್ ನ ಖ್ವಾಜಾ ಮೊಯಿನುದ್ದೀನ್ ದರ್ಗಾಕ್ಕೆ ಭೇಟಿ ನೀಡಿದ್ದಾರೆ.[ನಟಿ ರಾಖಿ ಸಾವಂತ್ ಬಂಧಿಸಿದ ಪಂಜಾಬ್ ಪೊಲೀಸರು]

ಉತ್ತರಪ್ರದೇಶದಲ್ಲಿ ವರ್ಷಾನುಗಟ್ಟಲೆ ಮಂಗಗಳ ಜತೆಗೆ ವಾಸವಿದ್ದು, ಅವುಗಳ ಗುಣಾವಳಿಗಳೇ ರೂಢಿಸಿಕೊಂಡಿದ್ದ ಎಂಟು ವರ್ಷದ ಬಾಲಕಿಯ ರಕ್ಷಣೆ ಮಾಡಲಾಗಿದೆ. ಪಾಪ, ಆಕೆ ಮಾತೇ ಬರುತ್ತಿರಲಿಲ್ಲವಂತೆ. ಕೈ-ಕಾಲು ಎರಡೂ ಬಳಸಿ ನಡೆದಾಡುತ್ತಿದ್ದವಳಿಗೆ ಈಗ ಮನುಷ್ಯರಂತೆ ಬದುಕುವ ತರಬೇತಿ ಕೊಡಲಾಗುತ್ತಿದೆ.

ಇವುಗಳ ಜತೆಗೆ ಎಲ್ ಕೆ ಅಡ್ವಾಣಿ ಹಾಗೂ ದಲೈ ಲಾಮಾರ ಫೋಟೋಗಳು ಇವೆ. ಇವುಗಳು ಹೇಗಿವೆ ಎಂಬುದನ್ನು ತಿಳಿಸಿ.[ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪುನರ್ ಪರಿಶೀಲನೆಗೆ ಸಿಬಿಐ ಮನವಿ]

ಮಂಗಗಳ ಜತೆಗೆ ಇದ್ದವಳ ರಕ್ಷಣೆ

ಮಂಗಗಳ ಜತೆಗೆ ಇದ್ದವಳ ರಕ್ಷಣೆ

ಉತ್ತರ ಪ್ರದೇಶದಲ್ಲಿ ಈ ಎಂಟು ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಯ್ಯೋ, ರಕ್ಷಣೆ ಮಾಡುವಂಥದ್ದು ಏನಾಯಿತು ಅಂತೀರಾ? ಕಟಾರ್ನಿಘಾಟ್ ಸಂರಕ್ಷಿತಾರಣ್ಯದ ಮೋಟಿಪುರ್ ಭಾಗದಲ್ಲಿ ಈಕೆ ಮಂಗಗಳ ಗುಂಪಿನೊಂದಿಗೆ ಇರುವಾಗ ಪೊಲಿಸರಿಗೆ ಕಂಡುಬಂದಿದ್ದಾಳೆ. ಅವುಗಳ ಜತೆಗೆ ವಾಸವಿದ್ದ ಈ ಬಾಲಕಿಗೆ ಮಾತು ಸಹ ಬರುತ್ತಿಲ್ಲ.

ಅಜ್ಮೇರ್ ದರ್ಗಾದಲ್ಲಿ ಏಕ್ತಾ ಕಪೂರ್

ಅಜ್ಮೇರ್ ದರ್ಗಾದಲ್ಲಿ ಏಕ್ತಾ ಕಪೂರ್

ಹಿಂದಿ ಚಿತ್ರನಟ ಜಿತೇಂದ್ರ ತಮ್ಮ ಮಗಳು ಏಕ್ತಾ ಕಪೂರ್ ಜತೆಗೆ ಅಜ್ಮೇರ್ ನ ಹಜರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾಗೆ ಗುರುವಾರ ಭೇಟಿ ನೀಡಿದಾಗ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರವಿದು.

ರಾಖಿ ಸಾವಂತ್ ನಮಸ್ಕಾರ

ರಾಖಿ ಸಾವಂತ್ ನಮಸ್ಕಾರ

ವಾಲ್ಮೀಕಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ, ಸುದ್ದಿಯಾಗಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಗುರುವಾರ ಮಾಧ್ಯಮದವರ ಎದುರು ಕೈ ಮುಗಿಯುತ್ತಾ ಕಂಡುಬಂದಿದ್ದು ಹೀಗೆ.

ಚುನಾವಣೆ ಪ್ರಚಾರ ಹೀಗೂ ಮಾಡ್ತಾರೆ

ಚುನಾವಣೆ ಪ್ರಚಾರ ಹೀಗೂ ಮಾಡ್ತಾರೆ

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಹೋಲುವಂಥ ಪ್ರತಿಕೃತಿಯನ್ನು ಇಟ್ಟುಕೊಂಡು ಒ ಪನ್ನೀರ್ ಸೆಲ್ವಂ ಬಣ ಆರ್ ಕೆ ನಗರ್ ಉಪಚುನಾವಣೆಯಲ್ಲಿ ಪ್ರಚಾರ ನಡೆಸುತ್ತಿದೆ.

ಹೃಷಿಕೇಶದಲ್ಲಿ ಪೂಜೆ

ಹೃಷಿಕೇಶದಲ್ಲಿ ಪೂಜೆ

ಹೃಷಿಕೇಶದ ಪರಮಾರ್ಥ್ ನಿಕೇತನದಲ್ಲಿ ಗುರುವಾರ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಸ್ವಾಮಿ ಚಿದಾನಂದ ಸರಸ್ವತಿಜೀ ಜತೆಗೂಡಿ ಪೂಜೆ ಸಲ್ಲಿಸಿದರು.

ದಲೈ ಲಾಮಾ ಅಧ್ಯಾತ್ಮ

ದಲೈ ಲಾಮಾ ಅಧ್ಯಾತ್ಮ

ಟಿಬೆಟನ್ ಧರ್ಮ ಗುರು ದಲೈ ಲಾಮಾ ಅವರು ಅರುಣಾಚಲ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಂಡುಬಂದಿದ್ದು ಹೀಗೆ.

English summary
Various national events such as Tamil Nadu be election represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X