ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್ ಕೀ ಬಾತ್ ನಲ್ಲಿ ಮೋದಿ ಹೇಳಿದ ಗಾಯತ್ರಿಗೊಂದು ಸಲಾಂ

ಯಾವುದೋ ಗ್ರಾಮದ ಹೆಣ್ಣುಮಗಳೊಬ್ಬಳ ಹೆಸರನ್ನು ಭಾರತ ದೇಶದ ಪ್ರಧಾನಿ ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ಹೇಳ್ತಾರೆ ಎಂಬ ಸಂಗತಿ ಎಂಥ ಬೆರಗಿನ ವಿಚಾರ ಅಲ್ಲವಾ? ಉತ್ತರಾಖಂಡದ ಗಾಯತ್ರಿ ಈಗ ದಿಗ್ಭ್ರಮೆಯಲ್ಲಿರಬಹುದು.

|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಸ್ತಾವ ಮಾಡಿದ ಹುಡುಗಿ ಉತ್ತರಾಖಂಡದ ಗಾಯತ್ರಿಯ ಉದ್ದೇಶ ಹಾಗೂ ಆಕೆಯ ನೇರವಂತಿಕೆ ಮೆಚ್ಚಲೇ ಬೇಕು. ಕಸದ ಬಗ್ಗೆ ಜನರೂ ಅರಿವು ಮೂಡಿಸಿಕೊಳ್ಳಬೇಕು ಎಂಬ ಆಕೆ ಮಾತಿಗೊಂದು ಸಲಾಂ.

ಇಂಥ ಸಂಗತಿಗಳು ದೇಶದ ಜನರಲ್ಲಿ ಒಂದು ಆತ್ಮವಿಶ್ವಾಸ ಮೂಡಿಸುತ್ತದೆ. ನಮ್ಮ ಧ್ವನಿ ಕೇಳಬೇಕಾದವರು ಕೇಳುತ್ತಾರೆ ಎಂಬುದೊಂದು ನಂಬಿಕೆ ಮೂಡುತ್ತದೆ. ಆ ಹುಡುಗಿಯ ಫೋಟೋ ಇಲ್ಲಿದೆ.

ಇನ್ನು ಬಿಎಸ್ ಎಫ್ ಗೆ ಕಮ್ಯಾಂಡೆಂಟ್ ಆದ ಮೊದಲ ಮಹಿಳೆ ತನುಶ್ರೀ ಪರ್ತೀಕ್ ರನ್ನು ರಾಜಸ್ತಾನದ ಬಿಕನೇರ್ ನಲ್ಲಿ ಸ್ವಾಗತಿಸಿದ ಬಗೆ ನೋಡಿದರೆ ಎಂಥವರಿಗೂ ಹೆಮ್ಮೆ ಮೂಡುತ್ತದೆ. ಭಾನುವಾರವಷ್ಟೇ ಹದಿಮೂರು ವರ್ಷದ ಬಾಲಕಿ ಮೇಲೆ ಬಿಕನೇರ್ ನ ಶಿಕ್ಷಕರು ನಿರಂತರ ಅತ್ಯಾಚಾರ ನಡೆಸಿದ್ದ ಸುದ್ದಿ ಬೆಳಕಿಗೆ ಬಂದಿತ್ತು. ಆದರೆ ಬಿಕನೇರ್ ಈಗ ಒಳ್ಳೆ ಕಾರಣಕ್ಕೆ ಸುದ್ದಿಯಾಗಿದೆ.[ವಿಶೇಷ ಲೇಖನ: ರಂಗಭೂಮಿ ಹಾಗೂ ಅಂತರ್ಜಾಲ ಬಳಕೆ]

ಉತ್ತರಪ್ರದೇಶದ ಮುಖ್ಯಮಂತ್ರಿ ಸ್ವಾಮಿ ಆದಿತ್ಯನಾಥ್ ಗೆ ಗೋರಖ್ ನಾಥ್ ಮಂದಿರದಲ್ಲಿ ಸನ್ಮಾನ ಮಾಡಲಾಗಿದೆ. ಆ ನಂತರ ಅಮೆರಿಕದಲ್ಲಿ ಹೋಲಿ ಸಂಭ್ರಮ, ಹಾಂಕಾಂಗ್ ನಲ್ಲಿ ಆಕಾಶದೆತ್ತರದ ಕಟ್ಟಡಗಳಿಗೆ ಮಂಜು ಮುಸುಕಿದ ಫೋಟೋಗಳು ನಿಮ್ಮೆದುರು ಇವೆ. ಅದರಲ್ಲೂ ಹೆಣ್ಣುಮಕ್ಕಳ ಸಾಧನೆಯೇ ಹೆಚ್ಚಾಗಿರುವುದು ಖುಷಿಯ ಸಂಗತಿ.

ಸಂಭ್ರಮದ ಸ್ವಾಗತ

ಸಂಭ್ರಮದ ಸ್ವಾಗತ

ಬಿಎಸ್ ಎಫ್ ಕಮ್ಯಾಂಡೆಂಟ್ ಆಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾದ ತನುಶ್ರೀ ಪರ್ತೀಕ್ ಅವರನ್ನು ಭಾನುವಾರ ರಾಜಸ್ತಾನದ ಬಿಕನೇರ್ ನಲ್ಲಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಹೋಲಿಯ ಖುಷಿ

ಹೋಲಿಯ ಖುಷಿ

ಬೌಲಿಂಗ್ ಗ್ರೀನ್ ನ ಕರುಣಾ ರೆಡ್ಡಿ ಅಮೆರಿಕಾದಲ್ಲಿ ಹೋಲಿ ಸಂಭ್ರಮ ಆಚರಿಸುವಾಗ ಗೆಳತಿಯ ತಲೆಗೂದಲಿಗೆ ಬಣ್ಣದ ಪುಡಿ ಹಾಕುವ ಜೋಶ್ ನಲ್ಲಿ ಕಂಡುಬಂದಿದ್ದು ಹೀಗೆ.

ಮಂಜು ತಬ್ಬಿದ ಕಟ್ಟಡ

ಮಂಜು ತಬ್ಬಿದ ಕಟ್ಟಡ

ಹಾಂಕಾಂಗ್ ನಲ್ಲಿ ಆಕಾಶ ಮುತ್ತಿಡುವಂಥ ಕಟ್ಟಡಗಳನ್ನು ಬಾಚಿ ತಬ್ಬಿಕೊಂಡಿದ್ದ ಮಂಜು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ. ಮಂಜಿನ ಕಾರಣಕ್ಕೆ ವಿಮಾನ ಯಾನ, ಸಮುದ್ರ ಯಾನದ ಮೇಲೂ ಆಗುತ್ತಿದೆ.

ರಕ್ತ ಬರುವ ಹಾಗೆ ಹೊಡೆದಾಟ

ರಕ್ತ ಬರುವ ಹಾಗೆ ಹೊಡೆದಾಟ

ಉತ್ತರಪ್ರದೇಶದ ಫತೇಘರ್ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಅಧಿಕಾರಿಗಳೊಂದಿಗೆ ಭಾನುವಾರ ಹೊಡೆದಾಟ ನಡೆಸಿದರು. ಈ ವೇಳೆ ಗಾಯಗೊಂಡ ಕೈದಿಯೊಬ್ಬನನ್ನು ಚಿಕಿತ್ಸೆಗಾಗಿ ಕರೆದೊಯ್ಯುವಾಗ ಕಂಡುಬಂದಿದ್ದು ಹೀಗೆ.

ಮನ್ ಕೀ ಬಾತ್ ಹೆಣ್ಣುಮಗಳು

ಮನ್ ಕೀ ಬಾತ್ ಹೆಣ್ಣುಮಗಳು

ಉತ್ತರಾಖಂಡದ ಡೆಹ್ರಾಡೂನ್ ನ ಹನ್ನೊಂದನೇ ತರಗತಿ ವಿದ್ಯಾರ್ಥಿ ಗಾಯತ್ರಿ (ಕುಳಿತಿರುವವಳು) ಕಸದ ಸಮಸ್ಯೆಯಿಂದ ಆಗುವ ತೊಮ್ದರೆ ಬಗ್ಗೆ ಪ್ರಧಾನಿ ಗಮನ ಸೆಳೆದಿದ್ದಳು. ಈ ಹುಡುಗಿಯ ಕಾಳಜಿ ಬಗ್ಗೆ ಪ್ರಧಾನಿ ಮೋದಿ ಭಾನುವಾರ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. ಅದಕ್ಕಾಗಿ ಗಾಯತ್ರಿ ಧನ್ಯವಾದ ತಿಳಿಸಿದ್ದಾಳೆ.

ಆದಿತ್ಯ ನಾಥ್ ಗೆ ಗೋರಖ್ ನಾಥ್ ಮಂದಿರದಲ್ಲಿ ಸನ್ಮಾನ

ಆದಿತ್ಯ ನಾಥ್ ಗೆ ಗೋರಖ್ ನಾಥ್ ಮಂದಿರದಲ್ಲಿ ಸನ್ಮಾನ

ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯ ನಾಥ್ ರನ್ನು ಗೋರಖ್ ನಾಥ್ ಮಂದಿರದಲ್ಲಿ ಭಾನುವಾರ ಸನ್ಮಾನಿಸಲಾಯಿತು.

English summary
National and International events represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X