ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ಮಂದಿಯ ತಾಯಿ-ದೇವರಿಗೆ 110, ಸಿದ್ದಗಂಗೆಯಲ್ಲಿ ಸಿದ್ದರಾಮಯ್ಯ

|
Google Oneindia Kannada News

ಅಂಥ ನಗು ನೋಡಲಿಕ್ಕೆ ಸಿಗುವುದೇ ಅಪರೂಪ. ದಲೈ ಲಾಮಾ ಅವರ ಮುಖದ ಮೇಲೆ ಆ ಚಂದದ ನಗೆ ಕಂಡಾಗ ನೋಡುಗರ ಮನಸ್ಸೇ ಪ್ರಫುಲ್ಲವಾಗುತ್ತದೆ. ಭಾನುವಾರ ಅಸ್ಸಾಂನ ಗುವಾಹತಿಯಲ್ಲಿ ನಮಾಮಿ ಬ್ರಹ್ಮಪುತ್ರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 1959ರಲ್ಲಿ ಟಿಬೆಟ್ ನಿಂದ ತಪ್ಪಿಸಿಕೊಂಡು ಬಂದ ದಲೈ ಲಾಮಾ ಅವರನ್ನು ಬರಮಾಡಿಕೊಂಡ ಏಳು ಭಾರತೀಯ ಅಧಿಕಾರಿಗಳ ಪೈಕಿ ಈಗ ಬದುಕಿರುವವರು 5 ಅಸ್ಸಾಂ ರೈಫಲ್ಸ್ ನ ನಿವೃತ್ತ ಹವಾಲ್ದಾರ್ ನರೇನ್ ಚಂದ್ರ ದಾಸ್ ಮಾತ್ರ.

ಅವರನ್ನು ಭಾನುವಾರ ದಲೈ ಲಾಮಾ ಅಪ್ಪಿಕೊಂಡ ಅಪರೂಪದ ಫೋಟೋ ಇಲ್ಲಿದೆ. ಇನ್ನು ಕೇರಳದಲ್ಲಿ ವಿಶು ಹಬ್ಬದ ಸಂಭ್ರಮದ ಆಸುಪಾಸಿನಲ್ಲಿ ಅರಳುವ ಚೆಂದದ ಹೂವಿನ ಮರದ ಎದುರು ತಾಯಿ-ಮಗುವಿನ ಚಿತ್ರ ಕಣ್ಣಿಗೆ ಹಬ್ಬದಂತಿದೆ. ಕುಸ್ತಿಪಟುಗಳಾದ ಸಾಕ್ಷಿ ಮಲಿಕ್-ಸತ್ಯವರ್ತ್ ಕದಿಯನ್ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಇನ್ನು ಪಿವಿ ಸಿಂಧುವಿನ ಗೆಲುವಿನ ಸಂಭ್ರಮಾಚರಣೆ ಕೂಡ ಕಡಿಮೆ ಖುಷಿಯ ವಿಚಾರವಲ್ಲ. ಬಾಲಿವುಡ್ ನಟಿ ಕೈನಾತ್ ಅರೋರಾ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋ ನೋಡಿದ್ರಾ? ನಡೆದಾಡುವ ದೇವರು ಅಂದಾಕ್ಷಣ ಸಿದ್ದಗಂಗಾ ಮಠ, ಶಿವಕುಮಾರ ಸ್ವಾಮೀಜಿ ಕಣ್ಣೆದುರು ಬರುವುದು ನಿಜ. ಅವರ 110ನೇ ವರ್ಧಂತಿಯದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ಸಲ್ಲಿಸಿದರು.

ನಡೆದಾಡುವ ದೇವರಿಗೆ ಗೌರವಾರ್ಪಣೆ

ನಡೆದಾಡುವ ದೇವರಿಗೆ ಗೌರವಾರ್ಪಣೆ

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (ಎಡ ಭಾಗದಲ್ಲಿರುವವರು), ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ 110ನೇ ವರ್ಧಂತಿಯಂದು ಗೌರವ ಅರ್ಪಿಸಿದರು.

ವಿಶು ಸಂಭ್ರಮದ ಆಸುಪಾಸು

ವಿಶು ಸಂಭ್ರಮದ ಆಸುಪಾಸು

ಕೇರಳದಲ್ಲಿ ವಿಶು ಹಬ್ಬ ಬಹಳ ಪ್ರಮುಖವಾದದ್ದು. ಹಬ್ಬದ ಆಸುಪಾಸಿನಲ್ಲಿ 'ಕನಿಕೊಣ್ಣ' ಮರದ ಹೂವು ಅರಳಿ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಆ ಮರದ ಬಳಿ ತಾಯಿ-ಮಗಳು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

ಕುಸ್ತಿಪಟುಗಳ ವಿವಾಹ

ಕುಸ್ತಿಪಟುಗಳ ವಿವಾಹ

ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್ ಹಾಗೂ ಸತ್ಯವರ್ತ್ ಕದಿಯನ್ ಅವರು ಭಾನುವಾರ ರೋಹ್ಟಕ್ ನಲ್ಲಿ ವಿವಾಹವಾದರು.

ಅಂತಿಮ ನಮನ

ಅಂತಿಮ ನಮನ

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ನಡೆದ ಸ್ಫೋಟದಲ್ಲಿ ಹುತಾತ್ಮರಾದ ಜೆಸಿಒ ನಯೀಬ್ ಸುಬೇದಾರ್ ಸನಾಯೈಮಾ ಕೋಮ್ ಅವರಿಗೆ ಭಾರತೀಯ ಸೇನೆ ಅಧಿಕಾರಿಗಳು ಹಾಗೂ ಸೈನಿಕರು ಅಂತಿಮ ನಮನ ಸಲ್ಲಿಸಿದರು.

ಗೆದ್ದ ಖುಷಿಯಲ್ಲಿ

ಗೆದ್ದ ಖುಷಿಯಲ್ಲಿ

ನವದೆಹಲಿಯಲ್ಲಿ ಭಾನುವಾರ ಯೊನೆಕ್ಸ್-ಸನ್ ರೈಸ್ ಇಂಡಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಪಿ.ವಿ.ಸಿಂಧು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

ಸೆಲ್ಫಿ ಚೆಲುವೆ

ಸೆಲ್ಫಿ ಚೆಲುವೆ

ಪ್ರಚಾರ ಕಾರ್ಯಕ್ರಮದಲ್ಲಿ ಮೀರತ್ ನ ಶಾಲೆಯೊಂದರಲ್ಲಿ ಬಾಲಿವುಡ್ ನಟಿ ಕೈನಾತ್ ಅರೋರಾ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಜಿಯೋ ಬ್ಯುಜಿ.

ನೆನಪಿನ ಅಪ್ಪುಗೆ

ನೆನಪಿನ ಅಪ್ಪುಗೆ

ಗುವಾಹತಿಯಲ್ಲಿ ಭಾನುವಾರ ನಡೆದ ನಮಾಮಿ ಬ್ರಹ್ಮಪುತ್ರ ಹಬ್ಬದಲ್ಲಿ ಟಿಬೆಟನ್ ಧರ್ಮಗುರು ದಲೈಲಾಮಾ ಅವರು 5 ಅಸ್ಸಾಂ ರೈಫಲ್ಸ್ ನ ನಿವೃತ್ತ ಹವಾಲ್ದಾರ್ ನರೇನ್ ಚಂದ್ರ ದಾಸ್ ನ ಅಪ್ಪಿಕೊಂಡ ಕ್ಷಣ. 1959ರಲ್ಲಿ ಟಿಬೆಟ್ ನಿಂದ ತಪ್ಪಿಸಿಕೊಂಡು ಬಂದು ದಲೈ ಲಾಮಾ ಅವರನ್ನು ಬರಮಾಡಿಕೊಂಡ ಏಳು ಮಂದಿ ಭಾರತೀಯ ಅಧಿಕಾರಿಗಳ ಪೈಕಿ ಸದ್ಯಕ್ಕೆ ಬದುಕಿರುವವರು ನರೇನ್ ಚಂದ್ರ ದಾಸ್ ಒಬ್ಬರೇ.[ದಲೈ ಲಾಮಾ ವಿಚಾರದಲ್ಲಿ ಭಾರತ ಸರ್ಕಾರಕ್ಕೆ ಚೀನಾ ವಾರ್ನಿಂಗ್]

ಬರದ ನಡಿಗೆ

ಬರದ ನಡಿಗೆ

ಮಹಾರಾಷ್ಟ್ರದ ಉಂದಳೆ ಕೆರೆ ಒಣಗಿ ಹೋಗಿದೆ. ಅದರ ಮೇಲೆ ನಡೆದು ಹೋಗುತ್ತಿದ್ದ ಕುರುಗಾಹಿಯೊಬ್ಬರು ಕಂಡುಬಂದಿದ್ದು ಹೀಗೆ.

English summary
National events represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X