ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಮೇಲಿನ ಸಿಟ್ಟು ಬಟ್ಟೆ ಮೇಲೆ ಯಾಕೆ ಚೆಲುವೆ?

|
Google Oneindia Kannada News

ಡೊನಾಲ್ಡ್ ಟ್ರಂಪ್ ಅಂದರೆ ಹೆಣ್ಣುಮಕ್ಕಳಿಗೆ ಯಾಕೆ ಈ ಪಾಟಿ ಸಿಟ್ಟೋ? ಬರೀ ಅಮೆರಿಕಾದಲ್ಲಿ ಅಲ್ಲ, ಸ್ಪೇನ್ ನಲ್ಲೂ ಆತನ ಮೇಣದ ಪ್ರತಿಕೃತಿ ಉದ್ಘಾಟನೆ ವೇಳೆ ಯುವತಿಯೊಬ್ಬಳು ಪ್ರತಿಭಟನೆ ಮಾಡಿದ್ದಾಳೆ. ಅದೂ ಅರೆಬೆತ್ತಲೆ ಪ್ರತಿಭಟನೆ. ಮ್ಯಾಡ್ರಿಡ್ ನಲ್ಲಿ ನಡೆದ 'ಆಕ್ರೋಶ್ ದಿವಸ್' ನ ಚಿತ್ರ ಇಲ್ಲಿದೆ.

ಇನ್ನು 2015ರಲ್ಲಿ ಜಾರ್ಜಿಯಾದಲ್ಲಿ ಆದ ಅನಾಹುತ ನಿಮಗೆ ನೆನಪಿಸಬೇಕು. ಅಲ್ಲಿ ಪ್ರವಾಹ ಏರ್ಪಟ್ಟು ನೂರಾರು ಪ್ರಾಣಿಗಳು ಸತ್ತುಹೋದವು. ಆ ನಂತರ ಅಂದರೆ ಕಳೆದ ವರ್ಷ ಜಗತ್ತಿನ ನಾನಾ ಭಾಗದಿಂದ ಅಲ್ಲಿನ ಮೃಗಾಲಯಕ್ಕೆ ಪ್ರಾಣಿಗಳನ್ನು ನೀಡಿದ್ದಾರೆ. ಆ ಮೃಗಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿಂಹಗಳ ಕುಟುಂಬವೊಂದರ ಫೋಟೋ ಸೊಗಸಾಗಿದೆ.[2016ರಲ್ಲಿ ಗಮನ ಸೆಳೆದ 24 ಚಿತ್ರಗಳು]

ಸಲ್ಮಾನ್ ಖಾನ್ ಕೇಸೊಂದು ಖುಲಾಸೆಯಾಯಿತು ಗೊತ್ತಾಯ್ತಾ? ಯಾವ ಕೇಸು ಅದು ಅಂತ ಕೇಳುವ ಕುತೂಹಲವೂ ಕಳೆದುಕೊಂಡಿದ್ದೀರಾ? ಹೌದಲ್ವಾ, ವರ್ಷಾನುಗಟ್ಟಾಲೆಯಿಂದ ಒಂದಲ್ಲಾ ಒಂದು ಕೇಸಲ್ಲಿ ಅವರು ಕೋರ್ಟ್ ಗೆ ಬಂದು ಹೋಗುತ್ತಲೇ ಇದ್ದಾರೆ ಅಂತೀರಾ? ಈಗ ಹೇಳುತ್ತಿರುವುದು ಜೋಧ್ ಪುರ್ ನ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ. ವಿಮಾನ ನಿಲ್ದಾಣದಲ್ಲಿ ಸಲ್ಲೂ ಅದೇ ಹೀರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರಂಪ್ ಪ್ರತಿಕೃತಿ ಉದ್ಘಾಟನೆಗೆ ಅರೆಬೆತ್ತಲೆ ಪ್ರತಿಭಟನೆ

ಟ್ರಂಪ್ ಪ್ರತಿಕೃತಿ ಉದ್ಘಾಟನೆಗೆ ಅರೆಬೆತ್ತಲೆ ಪ್ರತಿಭಟನೆ

ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ಒಂದು ಪ್ರತಿಭಟನೆ ಆಗಿದೆ. ಅದು ಯಾವಾಗ ಗೊತ್ತೆ? ಅಲ್ಲಿನ ಸಂಗ್ರಹಾಲಯದಲ್ಲಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಮೇಣದ ಪ್ರತಿಕೃತಿ ಉದ್ಘಾಟನೆ ಮಾಡುವ ವೇಳೆಯಲ್ಲಿ. ಹೆಣ್ಣುಮಗಳೊಬ್ಬಳು ಸಿಟ್ಟಿಗೆದ್ದು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾಳೆ.

ಮೃಗಾಲಯದಲ್ಲಿ ಸಿಂಹ ವಿಶ್ರಾಂತಿ

ಮೃಗಾಲಯದಲ್ಲಿ ಸಿಂಹ ವಿಶ್ರಾಂತಿ

ಜಾರ್ಜಿಯಾದ ಬಿಲಿಸಿಯಲ್ಲಿರುವ ಮೃಗಾಲಯಕ್ಕೆ ಜಗತ್ತಿನ ನಾನಾ ಭಾಗಗಳಿಂದ ಕಳೆದ ವರ್ಷ ಪ್ರಾಣಿಗಳನ್ನು ಸ್ವೀಕರಿಸಲಾಗಿದೆ. 2015ನೇ ಇಸವಿಯಲ್ಲಿ ಪ್ರವಾಹದಿಂದ ನೂರಾರು ಪ್ರಾಣಿಗಳು ಮೃತಪಟ್ಟಿದ್ದವು. ಇದೀಗ ಬಂದಿರುವ ಪ್ರಾಣಿಗಳ ಪೈಕಿ ಸಿಂಹದ ಕುಟುಂಬವೊಂದು ಮೃಗಾಲಯದಲ್ಲಿ ವಿಶ್ರಾಂತಿ ಪಡೆಯುವಾಗ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರುವುದು ಹೀಗೆ.

ಸಿನಿಮಾದ ಪುಸ್ತಕ ಮತ್ತು ಜೀವಂತ ದಂತಕಥೆ

ಸಿನಿಮಾದ ಪುಸ್ತಕ ಮತ್ತು ಜೀವಂತ ದಂತಕಥೆ

ಭಾವನಾ ಸೋಮಯ್ಯ ಅವರು ಬರೆದಿರುವ 'ಒನ್ಸ್ ಅಪಾನ್ ಎ ಟೈಮ್ ಇನ್ ಇಂಡಿಯಾ-ಸೆಂಚುರಿ ಆಫ್ ಇಂಡಿಯನ್ ಸಿನಿಮಾ' ಪುಸ್ತಕವನ್ನು ಚಿತ್ರ ನಟ ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಬಿಡುಗಡೆ ಮಾಡಿದರು.

ಅತಿರಥ- ಮಹಾರಥರು

ಅತಿರಥ- ಮಹಾರಥರು

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಅಜಿತ್ ವಾಡೇಕರ್, ಕಪಿಲ್ ದೇವ್, ಸುನೀಲ್ ಗವಾಸ್ಕರ್ ಮತ್ತು ನಾರಿ ಕಾಂಟ್ರಾಕ್ಟರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಹಿಮ್ಮತ್ ನಗರದಲ್ಲಿ ಹಾರ್ದಿಕ್

ಹಿಮ್ಮತ್ ನಗರದಲ್ಲಿ ಹಾರ್ದಿಕ್

ಗುಜರಾತ್ ನ ಹಿಮ್ಮತ್ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಟಿದಾರ್ ಅನಾಮತ್ ಆಂದೋಲನ್ ಸಮಿತಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಅವರನ್ನು ಅಭಿಮಾನಿಯೊಬ್ಬರು ಖುಷಿಯಿಂದ ತಬ್ಬಿ ಹಿಡಿದ ಕ್ಷಣ.

ಗಾಯಕಿ ಶಕೀರಾ ದಾವೋಸ್ ನಲ್ಲಿ

ಗಾಯಕಿ ಶಕೀರಾ ದಾವೋಸ್ ನಲ್ಲಿ

ಕೊಲಂಬಿಯನ್ ಗಾಯಕಿ ಶಕೀರಾ ಈಕೆ. ಸ್ವಿಟ್ಜರ್ ಲೆಂಡ್ ನ ದಾವೋಸ್ ನಲ್ಲಿ ಮಂಗಳವಾರ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಆಕೆ ಕಂಡುಬಂದಿದ್ದು ಹೀಗೆ. ಅದೇನು ಎಕನಾಮಿಕ್ಸೋ, ಅಲ್ಲಿ ಈ ಶಕೀರಾ ಯಾಕೋ ನಮಗಂತೂ ಗೊತ್ತಾಗ್ತಿಲ್ಲ.

ಸಲ್ಮಾನ್ ಖುಲಾಸೆ

ಸಲ್ಮಾನ್ ಖುಲಾಸೆ

ಜೋಧ್ ಪುರ್ ವಿಮಾನ ನಿಲ್ದಾಣಕ್ಕೆ ಬಂದ ಸಲ್ಮಾನ್ ಖಾನ್ ಮಂಗಳವಾರ ದುಗುಡದಿಂದಲೇ ಇದ್ದರು. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 1998ರಲ್ಲಿ ಜೋಧ್ ಪುರ್ ನಲ್ಲಿ ಸಲ್ಮಾನ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಖುಲಾಸೆಯಾದ ವಿ‌ಚಾರ ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ.

ಸೆಲ್ಫಿ ಸುಂದರಿ

ಸೆಲ್ಫಿ ಸುಂದರಿ

ಭುವನೇಶ್ವರದಲ್ಲಿ ಹೊಸದಾಗಿ ಬಿಡುಗಡೆಯಾದ ಸ್ಯಾಮ್ಸಂಗ್ ಮೊಬೈಲ್ ಫೋನ್ ನಿಂದ ಸೆಲ್ಫಿ ತೆಗೆದುಕೊಳ್ಳುತ್ತಿರುವ ಈಕೆ ಹಿಂದಿ ಚಿತ್ರ ನಟಿ ಪ್ರಾಚಿ ದೇಸಾಯಿ. ಹುಡುಗಿ ನೀನು ನೋಡಿಕೊಳ್ಳುವ ಕನ್ನಡಿ ನಾನಾಗ್ತೀನಿ ಎಂಬ ಸಾಲುಗಳಿರುವ ಕನ್ನಡದ ಹಾಡೊಂದನ್ನು ಕೇಳಿದ್ದೀರಾ? ಅದೇ ರೀತಿ ನೀನು ಸೆಲ್ಫಿ ತೆಗೆದುಕೊಳ್ಳುವಾಗ ನಾನು ಮೊಬೈಲ್ ಫೋನ್ ಆಗ್ತೀನಿ, ಅನ್ನಬೌದಾ?

English summary
Various national and international event photos represnt through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X