ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಳ ವ್ಯಕ್ತಿತ್ವದ ಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 28 : 'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಇನ್ನು ನೆನಪು ಮಾತ್ರ. ರಾಷ್ಟ್ರಪತಿಯಾದರೂ ಜನಸಾಮಾನ್ಯರ ಜೊತೆ ಬೆರೆತು, ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ ಅಬ್ದುಲ್ ಕಲಾಂ ಅವರ ಸರಳ ಬದುಕು ಹಲವಾರು ಎಲ್ಲರಿಗೂ ಮಾದರಿ. [ಡಾ.ಕಲಾಂ ಸ್ಫೂರ್ತಿ ತುಂಬುವ ಹೇಳಿಕೆಗಳು]

ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು ಅವುಲ್‌ ಪಕೀರ್‌ ಜೈನುಲಾಬ್ದಿನ್‌ ಅಬ್ದುಲ್‌ ಕಲಾಂ. ಕಲಾಂ 1931ರಲ್ಲಿ ತಮಿಳುನಾಡಿನ ರಾಮೇಶ್ವರದಲ್ಲಿ ಹುಟ್ಟಿದರು. ತಂದೆ ಮೀನುಗಾರಿಕಾ ಬೋಟ್ ಇಟ್ಟುಕೊಂಡಿದ್ದರು. ತಾಯಿ ಗೃಹಿಣಿ, ಮನೆಯಲ್ಲಿ ಬಡತನವಿತ್ತು. ['ಕ್ಷಿಪಣಿ ಮಾನವ' ಎಪಿಜೆ ಅಬ್ದುಲ್ ಕಲಾಂ ವಿಧಿವಶ']

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಅಬ್ದುಲ್ ಕಲಾಂ ರಾಮೇಶ್ವರದಲ್ಲಿಯೇ ಪೂರ್ಣಗೊಳಿಸಿದರು. ಮದ್ರಾಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಕಲಾಂ ಅವರು ಇಸ್ರೋ ಮತ್ತು ಡಿಆರ್‌ಡಿಒದಲ್ಲಿ ಕಾರ್ಯನಿರ್ವಹಿಸಿದರು.

abdul kalam

ಜು.1980ರಲ್ಲಿ ಭಾರತದ ಮೊದಲ ಉಪಗ್ರಹ ರೋಹಿಣಿಯನ್ನು ಕಕ್ಷೆ ಸೇರಿದಾದ ಅದರ ಹಿಂದೆ ಅಬ್ದುಲ್ ಕಲಾಂ ಅವರ ಶ್ರಮವಿತ್ತು. ಇಸ್ರೋದ ಪಿಎಸ್‌ಎಲ್‌ವಿ ಕಾರ್ಯಯೋಜನೆಯ ರೂವಾರಿ ಕಲಾಂ. ಡಿಆರ್‌ಡಿಒದಲ್ಲಿ ಸ್ವದೇಶೀ ತಂತ್ರಜ್ಞಾನದ ಕ್ಷಿಪಣಿ ತಯಾರಿಸುವ ತಂಡದ ಮುಖ್ಯಸ್ಥರಾಗಿದ್ದರು. [ಕಲಾಂ ಆಶಯದಂತೆ ಸರ್ಕಾರಿ ರಜೆ ಇಲ್ಲ]

ಅಬ್ದುಲ್ ಕಲಾಂ 1992ರಿಂದ 1999ರ ವರೆಗೆ ರಕ್ಷಣಾ ಸಚಿವರ ಸಲಹೆಗಾರರಾಗಿದ್ದರು. ಅಣುಶಕ್ತಿ ಆಯೋಗದ ಸಹಭಾಗಿತ್ವದಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಯ ನೇತೃತ್ವ ವಹಿಸಿದ್ದರು. ಹಗುರ ಯುದ್ಧ ವಿಮಾನಗಳ ನಿರ್ಮಾಣ ಯೋಜನೆಗೂ ಕಲಾಂ ಅವರ ಕೊಡುಗೆ ಅಪಾರವಾಗಿದೆ.

ವಿಷನ್‌ 2020 : 2020ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿರ ರಾಷ್ಟ್ರವಾಗಿ ಮಾಡಬೇಕು ಎಂಬುದು ಕಲಾಂ ಅವರ ಕನಸಾಗಿತ್ತು. 500 ತಜ್ಞರ ಸಮಿತಿಯ ಮುಖ್ಯಸ್ಥರಾಗಿ ಅವರು ರೂಪಿಸಿದ ವಿಷನ್‌ 2020 ಯೋಜನೆ ಅನೇಕ ಕಾರ್ಯಕ್ರಮಗಳನ್ನು ಒಳಗೊಂಡಿದೆ.

ಅಬ್ದುಲ್ ಕಲಾಂ ಭಾರತದ 11ನೇ ರಾಷ್ಟ್ರಪತಿಯಾಗಿ ಜುಲೈ 22, 2002ರಂದು ಆಯ್ಕೆಯಾದರು. ಲೇಖಕರಾಗಿದ್ದ ಕಲಾಂ ಅವರು 'ವಿಂಗ್ಸ್ ಆಫ್ ಫೈರ್' ಸೇರಿದಂತೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಜೀವನದ ಬಗ್ಗೆ ಅಬ್ದುಲ್ ಕಲಾಂ ಅವರು ಹೇಳಿದ ಮಾತುಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿ ತುಂಬುತ್ತಿವೆ.

ಕಲಾಂ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ 1981ರಲ್ಲಿ ಪದ್ಮಭೂಷಣ, 1990ರಲ್ಲಿ ಪದ್ಮ ವಿಭೂಷಣ, 1997ರಲ್ಲಿ ದೇಶದ ಅತ್ಯುನ್ನುತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಸುಮಾರು ಮೂವತ್ತು ವಿಶ್ವವಿದ್ಯಾಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ.

English summary
Dr. Avul Pakir Jainulabdeen Abdul Kalam is no more. Dr. Kalam became the 11th President of India on 25th July 2002. His focus is on transforming India into a developed nation by 2020. Here is a brief profile of Dr. Kalam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X