ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ನರ್ಸರಿ ವಿದ್ಯಾರ್ಥಿ ಅಂದಿದ್ದವರು ಈಗ ಏನಂತಾರೆ?

|
Google Oneindia Kannada News

ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿ ನರ್ಸರಿ ಶಾಲೆಯ ವಿದ್ಯಾರ್ಥಿ, ಪಿಎಚ್ಡಿ ಪದವೀಧರರಂತೆ ವರ್ತಿಸುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿಕೆ ನೀಡಿದ್ದರು.

ಇದೇ ನರ್ಸರಿ ವಿದ್ಯಾರ್ಥಿಯನ್ನು ಭಾರತದ ಮತದಾರರು ಬಹುಮತದಿಂದ ಆಯ್ಕೆಮಾಡಿ, ಮೋದಿ ಪ್ರಧಾನಿಯಾಗಿದ್ದು ಕಾಲ ಹೇಗೆ ಬದಲಾಗುತ್ತದೆ ಎನ್ನುವುದಕ್ಕೆ ಸಾಕ್ಷಿ. (ಇಶ್ರತ್ ಎನ್ಕೌಂಟರ್: ಮೋದಿ ಟೀಕಾಕಾರರು ಬಾಯಿಬಿಡಿ)

ವಿದ್ಯಾರ್ಥಿ, ಶಿಕ್ಷಕ ವೃಂದದ ಜೊತೆ ಮೋದಿ ಸಂವಾದ ನಡೆಸುತ್ತಿರುವುದು, ವಿದ್ಯಾರ್ಥಿಗಳು ನೇರವಾಗಿ ಪ್ರಧಾನಿ ಕಚೇರಿಗೆ ಪತ್ರ ಬರೆದು ಪರಿಹಾರ ಕಂಡುಕೊಳ್ಳುತ್ತಿರುವುದು 'ಮೋದಿ ನರ್ಸರಿ ವಿದ್ಯಾರ್ಥಿಯಾ ಖುರ್ಷಿದ್ ಸಾಹೇಬ್ರೇ' ಎಂದು ಪ್ರಶ್ನಿಸುವಂತಾಗಿದೆ. (ಮಂಗಳೂರು ವಿದ್ಯಾರ್ಥಿಯ ಪತ್ರಕ್ಕೆ ಸ್ಪಂದಿಸಿದ ಮೋದಿ)

ವಿದ್ಯಾರ್ಥಿಗಳೊಂದಿಗಿನ ಸಂವಾದವನ್ನು ರೋಚಕವಾಗಿ, ಅರ್ಥಪೂರ್ಣವಾಗಿ ಹಲವಾರು ಬಾರಿ ನಡೆಸಿಕೊಟ್ಟ ಪ್ರಧಾನಿ ಮೋದಿಗೆ ವಿದ್ಯಾರ್ಥಿ, ಯುವ ಸಮುದಾಯದ ಮೇಲೆ ಹೆಚ್ಚಿನ ಒಲವು. (ಬಜೆಟ್ ಅಧಿವೇಶನ ರಾಡಿ ಹಿಡಿಸಲು ವಿರೋಧಿಗಳು ರೆಡಿ)

ಹಾಗಾಗಿ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ, ಸಂಬಂಧಪಟ್ಟ ಅಧಿಕಾರಿಗಳು, ಸಚಿವರು, ರಾಜ್ಯ ಸರಕಾರವನ್ನು ಬಿಟ್ಟು ನೇರವಾಗಿ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆಯುವುದೋ ಅಥವಾ ಮೋದಿ ಭೇಟಿಯಾಗಲು ಬಯಸಿದ್ದ ಉದಾಹರಣೆಗಳು ನಮ್ಮ ಮುಂದಿವೆ. ಅಂತಹ ಕೆಲವೊಂದು ಸ್ಯಾಂಪಲ್ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮಧ್ಯಪ್ರದೇಶದ ಉನ್ನಾವೋ

ಮಧ್ಯಪ್ರದೇಶದ ಉನ್ನಾವೋ

ಹನ್ನೊಂದು ವರ್ಷದ ವಿದ್ಯಾರ್ಥಿ ನಯನ್ ಸಿನ್ಹಾ, ತನ್ನ ಮನೆಯಿಂದ ಸ್ಕೂಲಿಗೆ ಹೋಗುವ ದಾರಿಯಲ್ಲಿ ಸಿಗುವ ರೈಲ್ವೆ ಕ್ರಾಸಿಂಗ್ ನಿಂದ ತೊಂದರೆ ಅನುಭವಿಸುತ್ತಿದ್ದೇನೆ. ಇದಕ್ಕೊಂದು ಪರಿಹಾರ ಕಂಡುಕೊಡಿ ಎಂದು ಪಿಎಂಓಗೆ ಪತ್ರ ಬರೆದಿದ್ದ. ಕೂಡಲೇ ಸ್ಪಂಧಿಸಿದ ಪ್ರಧಾನಿ, ರೈಲ್ವೆ ಸಚಿವಾಲಯಕ್ಕೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿ ವಿದ್ಯಾರ್ಥಿಗೆ ಈಮೇಲ್ ಮೂಲಕ ಪ್ರಧಾನಿ ಕಚೇರಿಯ ಸಂದೇಶವನ್ನು ರವಾನಿಸಿದ್ದರು.

ಕೇರಳ ಸರಕಾರಕ್ಕೆ ಪತ್ರ

ಕೇರಳ ಸರಕಾರಕ್ಕೆ ಪತ್ರ

ಮಂಗಳೂರು ಕಾಲೇಜು ವಿದ್ಯಾರ್ಥಿ ತನ್ನ ಊರು ಮಂಜೇಶ್ವರದ (ಕಾಸರಗೋಡು ಜಿಲ್ಲೆ, ಕೇರಳ) ಕಳಪೆ ರಸ್ತೆ ಸರಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಿ ಎಂದು ಬರೆದ ಪತ್ರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ರಸ್ತೆ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಕೇರಳ ಸರ್ಕಾರಕ್ಕೆ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ರಾಯಚೂರಿನ ಯುವಕ

ರಾಯಚೂರಿನ ಯುವಕ

ಗೋವಾದಲ್ಲಿ ನಡೆಯುತ್ತಿರುವ ಮೋಜು-ಮಸ್ತಿ ಹಾಗು ಜೂಜಾಟಗಳಿಂದ ಆಗುತ್ತಿರುವ ಹಾನಿ ಕುರಿತು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಯುವಕನೋರ್ವ ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿದ್ದು, ಪ್ರತಿಕ್ರಿಯೆ ಪತ್ರ ಯುವಕನಿಗೆ ತಲುಪಿದ್ದು ವಿಶೇಷ.

ಮೋದಿ ಅಭಿಮಾನಿ ಮೈಸೂರಿನಲ್ಲಿ

ಮೋದಿ ಅಭಿಮಾನಿ ಮೈಸೂರಿನಲ್ಲಿ

ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮೋದಿ ಕಾರಿಗೆ ಯುವಕನೊಬ್ಬ ಅಡ್ದಬಂದಿದ್ದ. ತಕ್ಷಣವೇ ಆತನನ್ನು ವಶಕ್ಕೆ ಪಡೆದ ಭದ್ರತಾಪಡೆ ವಿಚಾರಣೆ ನಡೆಸಿದಾಗ ಆತ ಮೋದಿ ಅಭಿಮಾನಿ ಎಂಬುದು ಖಚಿತವಾಯಿತು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತ, ತಾನು ಸಿದ್ದಪಡಿಸಿದ್ದ ಪ್ರಾಜೆಕ್ಟ್‌ನ್ನು ಮೋದಿ ಅವರಿಗೆ ನೀಡಲು ಈ ತಂತ್ರ ರೂಪಿಸಿದ್ದ.

ಬೆಂಗಳೂರು ಕಸ ಸಮಸ್ಯೆ

ಬೆಂಗಳೂರು ಕಸ ಸಮಸ್ಯೆ

ಬೆಂಗಳೂರಿನ ಕಸದ ಸಮಸ್ಯೆಯ ನಂತರ ಟ್ರಾಫಿಕ್ ಸಮಸ್ಯೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನಗರದ ಎಂಟು ವರ್ಷದ ಬಾಲಕ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನವನ್ನು ಸೆಳೆದಿದ್ದ. ಬಾಲಕನ ಪತ್ರಕ್ಕೆ ಓಗೊಟ್ಟಿರುವ ಪ್ರಧಾನಿ ಅವರು ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಬೆಂಗಳೂರಿನ ಕಸ ಸಮಸ್ಯೆ ಮಾತ್ರ ಹಾಗೇ ಇದೆ!

ರಾಂಚಿಯ ವಿದ್ಯಾರ್ಥಿನಿ

ರಾಂಚಿಯ ವಿದ್ಯಾರ್ಥಿನಿ

ಸಾಮಾಜಿಕ ತಾಣ ಫೇಸ್ ಬುಕ್ ಅನ್ನು ಬಳಸಿಕೊಂಡು ರಾಂಚಿಯ ವಿದ್ಯಾರ್ಥಿನಿ ಪ್ರೇರಣಾ ಶರ್ಮಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ನಾನು ಓದುತ್ತಿರುವ(ದಯಾನಂದ ಸಾಗರ್ ಕಾಲೇಜು ಕುಮಾರಸ್ವಾಮಿ ಲೇಔಟ್) ಕಾಲೇಜಿನ ಹೊರಗಡೆಯೇ ವಿನಾಕಾರಣವಾಗಿ ನನ್ನ ಮೇಲೆ ದೌರ್ಜನ್ಯ ನಡೆದಿದೆ. ಹಲ್ಲೆ ಮಾಡಿ ಕೊಲೆ ಮಾಡಲೂ ಯತ್ನಿಸಿದ್ದಾರೆ. ಇದು ತುಂಬಾ ದೀರ್ಘವಾದ ಪತ್ರ. ಆದರೆ ಇದನ್ನು ನೀವು ಓದುತ್ತೀರಿ ಎಂಬ ನಂಬಿಕೆ ನನಗಿದೆ. ಯಾಕೆಂದರೆ ಹೆಣ್ಣು ಮಕ್ಕಳನ್ನು ಉಳಿಸಿ ಎಂಬ ಅಭಿಯಾನವನ್ನೇ ನೀವು ಆರಂಭಿಸಿದ್ದೀರಿ, ಅದಕ್ಕಾಗಿ ಈ ಪತ್ರ ಬರೆಯುತ್ತಿದ್ದೇನೆಂದು ಸುದೀರ್ಘ ಪತ್ರ ಬರೆದಿದ್ದರು.

ಚಿತ್ರದುರ್ಗದ ಕಾಲೇಜು ವಿದ್ಯಾರ್ಥಿ

ಚಿತ್ರದುರ್ಗದ ಕಾಲೇಜು ವಿದ್ಯಾರ್ಥಿ

ಚಿತ್ರದುರ್ಗ ನಗರದಲ್ಲಿರುವ SRS ಕಾಲೇಜಿನ ಸೈನ್ಸ್ ವಿಭಾಗದ ವಿದ್ಯಾರ್ಥಿನಿ, ಎಪಿಎಎಂಟಿ ಪರೀಕ್ಷಾ ಅರ್ಜಿಯನ್ನು ಆನ್ ಲೈನ್ ನಲ್ಲಿ ತುಂಬುವ ಸಮಯದಲ್ಲಿ ಹೆಣ್ಣು/ಗಂಡು ಕಾಲಂನಲ್ಲಿ ತಪ್ಪಾಗಿ ನಮೂದು ಮಾಡಿದ್ದರಿಂದ ಪರೀಕ್ಷೆ ಬರೆಯುವುದರಿಂದ ವಂಚಿತ ಆಗುವ ಆತಂಕದಲ್ಲಿದ್ದ ವಿದ್ಯಾರ್ಥಿನಿಗೆ ಪ್ರಧಾನಿ ನರೇಂದ್ರ ಮೋದಿ 12ಗಂಟೆಯೊಳಗೆ ಅಭಯನ್ನಿತ್ತ ಘಟನೆ ಎರಡು ದಿನದ ಹಿಂದೆ ನಡೆದಿತ್ತು.

English summary
Prime Minister Narendra Modi office reaction towards students and youths appeal. Some of the examples listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X