ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮನ್ ಕಿ ಬಾತ್ ನಲ್ಲಿ ಇಸ್ರೋ, ಕ್ಷಿಪಣಿ, ಡಿಜಿಟಲ್ ಮನಿ, ಕೃಷಿ

ಪ್ರಧಾನಿ ನರೇಂದ್ರ ಮೋದಿ ಅವರ 29ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾನುವಾರದಂದು ಇಸ್ರೋ, ಕ್ಷಿಪಣಿ, ಡಿಜಿಟಲ್ ಮನಿ, ಕೃಷಿ, ಆಹಾರ ಉತ್ಪಾದನೆ ಬಗ್ಗೆ ಮಾತನಾಡಿದರು.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 26: ಪ್ರಧಾನಿ ನರೇಂದ್ರ ಮೋದಿ ಭಾನುವಾರ(ಫೆಬ್ರವರಿ 26)ದಂದು ತಮ್ಮ 29ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಇಸ್ರೋ ಸಾಧನೆ, ಕ್ಷಿಪಣಿಗಳ ಪರೀಕ್ಷೆ ಯಶಸ್ವಿ, ಡಿಜಿಟಲ್ ಮನಿ ವ್ಯವಸ್ಥೆ, ಕೃಷಿ ಮಹತ್ವ, ಆಹಾರ ಉತ್ಪಾದನೆ ಬಗ್ಗೆ ಮಾತನಾಡಿದರು.

ಲಕ್ಕಿ ಗ್ರಾಹಜ ಯೋಜನೆಯಡಿಯಲ್ಲಿ ಪುರಸ್ಕಾರ ಪಡೆದ ಮೈಸೂರಿನ ಸಂತೋಷ್, ದೆಹಲಿಯ ಶಬೀರ್ ಅವರ ಬಗ್ಗೆ ಉಲ್ಲೇಖಿಸಿದ ಮೋದಿ ಅವರು ಡಿಜಿಟಲ್ ವ್ಯವಹಾರ ಮೂಲಕ ಲಕ್ಷ ರುಪಾಯಿ ಬಹುಮಾನ ನೀಡಲಾಗಿದೆ.

ಆದರೆ, ಬಹುಮಾನಕ್ಕಿಂತ ಈ ವ್ಯವಸ್ಥೆ ಪ್ರಯೋಜನ ಎಲ್ಲರಿಗೂ ಸಿಗಬೇಕಿದೆ. ಡಿಜಿಧನ್ ಯೋಜನೆಯಲ್ಲಿ ಬಹುಮಾನ ಗೆದ್ದವರು ಯೋಜನೆಯ ಕುರಿತು ಪ್ರಚಾರ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿ ಕನಿಷ್ಠ 125 ಜನರಿಗೆ ಡಿಜಿಟಲ್ ಪಾವತಿಯ ಕುರಿತು ಅರಿವು ಮೂಡಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮೋದಿ ಕರೆ ನೀಡಿದರು.

Prime Minister Narendra Modi's 29th Mann Ki Baat Speech To The Nation: Highlights

ಡಿಜಿಧನ್ ಯೋಜನೆಯ ಭಾಗವಾಗಿ ಭೀಮ್ ಆಪ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅತ್ಯಲ್ಪ ಅವಧಿಯಲ್ಲೇ ಈ ಆಪ್​ಅನ್ನು 1.7 ಕೋಟಿ ಜನರು ಡೌನ್​ಲೋಡ್ ಮಾಡಿಕೊಂಡಿದ್ದಾರೆ ಎಂದು ಮೋದಿ ತಿಳಿಸಿದರು.

ಫೆಬ್ರವರಿ 15 ರಂದು ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಇತಿಹಾಸ ನಿರ್ಮಿಸಿದೆ. ನಮ್ಮ ವಿಜ್ಞಾನಿಗಳು ದೇಶದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ್ದಾರೆ.


ಇದೇ ಸಂದರ್ಭದಲ್ಲಿ ಭಾರತ ಖಂಡಾಂತರ ಕ್ಷಿಪಣಿ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನೂ ಸಹ ಯಶಸ್ವಿಯಾಗಿ ನಡೆಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ ಎಂದರು.
ಇಸ್ರೋ ಸಾಧನೆ:
* ಫೆಬ್ರವರಿ 15, 2017 ರಂದು ಭಾರತದ ಹೆಮ್ಮೆಯ ದಿನ ಎನ್ನಬಹುದು.
* ಮಂಗಳಯಾನದ ಯಶಸ್ಸಿನ ನಂತರ, 104 ಉಪಗ್ರಹದ ಉಡಾವಣೆ ಒಂದೇ ರಾಕೆಟ್ ಮೂಲಕ ಆಗಿದ್ದು, ಇಸ್ರೋ ಗರಿಮೆಯ ಸಾಕ್ಷಿ.
* ಪಿಎಸ್ ಎಲ್ ವಿಯ 38ನೇ ಯೋಜನೆ ಯಶಸ್ವಿಯಾಗಿದ್ದು, ವಿಶ್ವದಾಖಲೆಯಾಗಿದೆ.
* ಕಾರ್ಟೋ ಸ್ಯಾಟ್ 2ಡಿ ಉಪಗ್ರಹ ಕಾರ್ಯಾರಂಭ ಮಾಡಲು ಆರಂಭಿಸುತ್ತಿದ್ದಂತೆ ರೈತರ ಮಿತ್ರನಾಗಲಿದೆ.

ಖಂಡಾಂತರ ಕ್ಷಿಪಣಿ:
ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದ್ದು ಮತ್ತೊಂದು ಸಂತಸದ ವಿಚಾರ. ಕೇವಲ ಐದಾರು ರಾಷ್ಟ್ರಗಳು ಈ ಮಾದರಿ ಕ್ಷಿಪಣಿ ಹೊಂದಿದ್ದು, ವೈರಿಯ ಕ್ಷಿಪಣಿಯನ್ನು ಆಗಸದಲ್ಲೇ ತುಂಡರಿಸುವ ಸಾಮರ್ಥ್ಯ ಹೊಂದಿದೆ.

ವಿಜ್ಞಾನ:
ಯುವ ಜನಾಂಗದಲ್ಲಿ ಹೆಚ್ಚೆಚ್ಚು ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಗಾಂಧೀಜಿ ಹೇಳಿದಂತೆ, ವಿಜ್ಞಾನ ಏನೋ ಆಕಾಶದಿಂದ ಉದುರಿಲ್ಲ, ಎಲ್ಲವೂ ಅನುಭವ ಹಾಗೂ ಪ್ರಯೋಗದಿಂದ ಬೆಳೆದಿದೆ.
ಮನುಷ್ಯರ ಅಗತ್ಯಕ್ಕೆ ತಕ್ಕಂತೆ ವಿಜ್ಞಾನ ಕೂಡಾ ಬೆಳೆಯುತ್ತಿದೆ.
ಮುಂಬೈನ ಜಲ ಪ್ರಳಯದಿಂದ ಮನೆ ಕಳೆದುಕೊಂಡವರ ನೆರವಿಗಾಗಿ ವಿಶಿಷ್ಟವಾದ ಮನೆ ನಿರ್ಮಾಣ ಸಾಧ್ಯವಾಗಿದ್ದು ತಂತ್ರಜ್ಞಾನದ ನೆರವಿನಿಂದ ಎಂಬುದನ್ನು ಮರೆಯುವಂತಿಲ್ಲ.

English summary
Prime Minister Narendra Modi addressed the nation through his monthly 'Mann Ki Baat' radio programme. This is the 29th episode of his broadcast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X