ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್ ಗೆ ಇಲ್ಲಿದೆ ಉತ್ತರ

|
Google Oneindia Kannada News

ನವದೆಹಲಿ, ಮೇ 3: ಅಭಿವೃದ್ದಿ ಕೆಲಸಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ದ ಹರಿಹಾಯುತ್ತಲೇ ಇರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಮೋದಿ ವಿದ್ಯಾರ್ಹತೆಯ ವಿಚಾರದಲ್ಲಿದ್ದ ಸಂಶಯಕ್ಕೆ ಗುಜರಾತ್ ವಿವಿ ಉತ್ತರ ನೀಡಿದೆ.

ಪ್ರಧಾನಿ ಮೋದಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ (ರಾಜ್ಯಶಾಸ್ತ್ರ) ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಗುಜರಾತ್‌ ವಿಶ್ವವಿದ್ಯಾಲಯ ಬಹಿರಂಗಗೊಳಿಸಿದೆ. (ಪ್ರಧಾನಿ ಉಜ್ವಲ ಯೋಜನೆ)

ನರೇಂದ್ರ ಮೋದಿ ಶಿಕ್ಷಣದ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಅರವಿಂದ್ ಕೇಜ್ರಿವಾಲ್ ವಿವರ ಕೋರಿದ್ದರು. ಕೇಜ್ರಿವಾಲ್ ಕೇಳಿರುವ ವಿವರವನ್ನು ಒದಗಿಸುವಂತೆ ಕೇಂದ್ರೀಯ ಮಾಹಿತಿ ಆಯೋಗದ ಮುಖ್ಯಸ್ಥ ಶ್ರೀಧರ್ ಆಚಾರ್ಯಲು ಪ್ರಧಾನಿ ಕಚೇರಿ ಹಾಗೂ ವಿವಿಗಳಿಗೆ ಸೂಚಿಸಿದ್ದರು.

Narendra Modi got first calss in MA from Gujarat University: VC

ಗುಜರಾತ್ ವಿವಿ ನೀಡಿರುವ ಮಾಹಿತಿ ಪ್ರಕಾರ ಮೋದಿ, ಮೊದಲ ವರ್ಷದ ಎಂಎನಲ್ಲಿ 400ಕ್ಕೆ 237, 2ನೇ ವರ್ಷದಲ್ಲಿ 400ಕ್ಕೆ 262 ಅಂಕ ಪಡೆದು, ಒಟ್ಟಾರೆಯಾಗಿ 800 ಅಂಕಗಳಿಗೆ 499 ಅಂಕಗಳಿಸಿದ್ದಾರೆಂದು ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ಎರಡು ವರ್ಷಗಳ ಸ್ನಾತಕೋತ್ತರ ಪದವಿಯಲ್ಲಿ ಮೋದಿ ರಾಜಕೀಯ ವಿಶ್ಲೇಷಣೆ, ರಾಜಕೀಯ ಮನಃಶಾಸ್ತ್ರ ಐರೋಪ್ಯ ರಾಜಕೀಯದ ವಿಷಯಗಳನ್ನು ಅಭ್ಯಾಸ ಮಾಡಿದ್ದಾರೆಂದು ವಿವಿ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. (ಭೀಕರ ಬರದ ಬಗ್ಗೆ ಪಿಎಂ ಮೋದಿ)

ನರೇಂದ್ರ ಮೋದಿ ವಿದ್ಯಾರ್ಥಿಯಾಗಿದ್ದ ವೇಳೆ, ಹಾಲಿ ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಎರಡನೇ ವರ್ಷದ ಎಂಎಸ್ಸಿ ವಿದ್ಯಾರ್ಥಿನಿಯಾಗಿದ್ದರು ಎನ್ನುವ ಮಾಹಿತಿ ಆರ್ಟಿಐ ವರದಿಯ ವೇಳೆ ಲಭ್ಯವಾಗಿದೆ ಎಂದು ಅಹಮದಾಬಾದ್ ಮಿರರ್ ಪತ್ರಿಕೆ ವರದಿ ಮಾಡಿದೆ.

English summary
In response to Delhi CM Arvind Kejriwal RTI application on PM Narendra Modi’s educational qualification, the Gujarat University shared details of his MA degree saying he scored 62.3 per cent as an external student of the varsity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X