ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

OMG: ದಾಖಲೆ ಮೊತ್ತಕ್ಕೆ ಹರಾಜಾಯಿತು ಮೋದಿ ಸೂಟ್

|
Google Oneindia Kannada News

ಸೂರತ್, ಫೆ 21: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನವರಿ 26ರಂದು ಧರಿಸಿದ್ದ ಸೂಟ್ ದಾಖಲೆ ಮೊತ್ತಕ್ಕೆ ಹರಾಜಾಗಿದೆ.

ಸೂರತ್ ಮೂಲದ ವಜ್ರಾಭರಣ ವ್ಯಾಪಾರಿ ಹಿತೇಶ್ ಲಾಲ್ಜಿಭಾಯ್ ಪಟೇಲ್ 4.31 ಕೋಟಿ ರೂಪಾಯಿಗೆ ಬಿಡ್ ನಲ್ಲಿ ಮೋದಿ ಸೂಟನ್ನು ಖರೀದಿಸಿದ್ದಾರೆ.

ಮೋದಿ ಧರಿಸಿದ್ದ ಸೂಟನ್ನು ನಮ್ಮ ಕಚೇರಿಯಲ್ಲಿ ಇಡಲಿದ್ದೇವೆ. ಹರಾಜಿನಲ್ಲಿ ಬಂದ ಹಣವನ್ನು ಗಂಗಾ ನದಿ ಶುದ್ದೀಕರಣಕ್ಕಾಗಿ ಬಳಸುತ್ತಿರುವುದರಿಂದ ಈ ಸೂಟನ್ನು ನಾವು ಖರೀದಿಸಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಪಟೇಲ್ ಹೇಳಿದ್ದಾರೆ. (ಮೋದಿ ಸೂಟ್ ಹರಾಜು ಪ್ರಕ್ರಿಯೆ ಆರಂಭ)

PM Modi prinstripe suit auctioned for 4.31 crore

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವದ ನಿಮಿತ್ತ ಭಾರತಕ್ಕೆ ಬಂದಿದ್ದಾಗ ತನ್ನ ಹೆಸರಿನಲ್ಲಿ ಕಸೂತಿಯಾಗಿದ್ದ ಸೂಟನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದರು.

ಮಿತವ್ಯಯ, ಸ್ವದೇಶಿ ಮಂತ್ರ ಜಪಿಸುವ ಮೋದಿ, 10 ಲಕ್ಷ ರೂಪಾಯಿ ಬೆಲೆಬಾಳುವ ಸೂಟ್ ಧರಿಸಿದ್ದಾರೆಂದು ವಿರೋಧ ಪಕ್ಷಗಳು ಟೀಕಾ ಪ್ರಹಾರ ನಡೆಸಿದ್ದವು.

ಗುಜರಾತಿನ ಸೂರತ್ ನಲ್ಲಿ ಬುಧವಾರ (ಫೆ 18) ಬಿಡ್ ಪ್ರಕ್ರಿಯೆ ಆರಂಭವಾಗಿತ್ತು ಮತ್ತು ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಗುಜರಾತ್ ಮೂಲದ ಅನಿವಾಸಿ ಭಾರತೀಯ ಉದ್ಯಮಿ ರಮೇಶ್ ಕುಮಾರ್ ಭೀಕಾಭಾಯ್ ವಿರಾನಿ ಎನ್ನುವವರು ಈ ಸೂಟನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದರು.

ಮಾಧ್ಯಮದಲ್ಲಿ ವರದಿಯಾದಂತೆ ಸೂಟಿನ ಬೆಲೆ ಅಷ್ಟೇನೂ ಇಲ್ಲ, ಅಷ್ಟು ಮೊತ್ತ ಖರ್ಚು ಮಾಡಲು ನನ್ನ ಮಗನಿಗೂ ಧೈರ್ಯವಿಲ್ಲ ಎಂದು ಉದ್ಯಮಿ ವಿರಾನಿ ಈ ಸೂಟ್ ವಿವಾದಕ್ಕೊಳಗಾಗಿದ್ದ ವೇಳೆ ಸ್ಪಷ್ಟನೆ ನೀಡಿದ್ದರು.

ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡ ಸಮಯದಲ್ಲಿ ಮತ್ತು ಇತರ ವಿದೇಶಿ ಅತಿಥಿಗಳು ದೆಹಲಿಗೆ ಭೇಟಿ ನೀಡಿದ್ದ ವೇಳೆ ನೀಡಿದ್ದ ಸುಮಾರು 450 ವಿವಿಧ ಉಡುಗೊರೆಗಳನ್ನೂ ಹರಾಜಿಗೆ ಹಾಕಲಾಗಿದೆ.

ಹರಾಜಿನ ಮೂಲಕ ಬಂದ ಹಣವನ್ನು 'ನಮಾಮಿ ಗಂಗೆ ಟ್ರಸ್ಟ್' ಮೂಲಕ ಗಂಗಾನದಿ ಶುದ್ದೀಕರಣಕ್ಕೆ ದೇಣಿಗೆ ರೂಪದಲ್ಲಿ ನೀಡಲು ಪ್ರಧಾನಮಂತ್ರಿ ಕಾರ್ಯಾಲಯ ನಿರ್ಧರಿಸಿದೆ.

English summary
Prime Minister Narendra Modi's suit with his name woven into it in gold pinstripes finally went to Hitesh Laljibhai Patel, a Surat-based diamond merchant for 4.31 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X