ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ ಲೆಕ್ಕಾಚಾರ: ಬಿಜೆಪಿಗೆ ಎಷ್ಟು, ಇತರರಿಗೆ ಎಷ್ಟು?

ರಾಷ್ಟ್ರಪತಿ ಹುದ್ದೆಗೆ ನಡೆಯಲಿರುವ ಚುನಾವಣೆಯಲ್ಲಿ ಸದ್ಯದ ಪರಿಸ್ಥಿತಿಯ ಲೆಕ್ಕಾಚಾರ ನೋಡುವುದಾದರೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಗೆಲುವು ನಿಶ್ಚಿತ.

|
Google Oneindia Kannada News

ದೇಶದ ಸರ್ವೋನ್ನತ ಸಂವಿಧಾನಿಕ ಹುದ್ದೆಗೆ ನಡೆಯಲಿರುವ ಚುನಾವಣೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿನ ಲೆಕ್ಕಾಚಾರ ನೋಡುವುದಾದರೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಗೆಲುವು ನಿಶ್ಚಿತ.

ಆದರೆ, ಎರಡೂ ಕಡೆ ದಲಿತ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಜೊತೆಗೆ ಜಾತಿ ಲೆಕ್ಕಾಚಾರ ಮಹತ್ವ ಪಡೆದುಕೊಂಡಿರುವುದರಿಂದ, ಎರಡು ಅಭ್ಯರ್ಥಿಗಳಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡಲು ನಮ್ಮ ರಾಜಕೀಯ ಪಕ್ಷಗಳಿಗೆ, ರಾಷ್ಟ್ರಪತಿ ಚುನಾವಣೆಯಾದರೇನು, ಇನ್ನೊಂದಾದರೇನು?

ಬಿಜೆಪಿ ಮೈತ್ರಿಕೂಟಕ್ಕೆ ಮೊದಲ ಹಿನ್ನಡೆಬಿಜೆಪಿ ಮೈತ್ರಿಕೂಟಕ್ಕೆ ಮೊದಲ ಹಿನ್ನಡೆ

ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಯಲ್ಲಿ, ನಾಮ ನಿರ್ದೇಶನಗೊಂಡ ಸದಸ್ಯರನ್ನು ಹೊರತು ಪಡಿಸಿ ಎಲ್ಲಾ ಜನಪ್ರತಿನಿಧಿಗಳು ಮತ ಚಲಾಯಿಸಬಹುದಾಗಿದೆ. ಎಲ್ಲಾ ರಾಜ್ಯಗಳ ಶಾಸಕರು, ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. ಒಂದು ಮತಕ್ಕೆ ಮೌಲ್ಯ ನಿಗದಿ ಪಡಿಸಲಾಗುತ್ತದೆ.

ಮತ ಚಲಾಯಿಸುವ ಶಾಸಕರ ಮೌಲ್ಯ, ಆಯಾಯ ರಾಜ್ಯಗಳ ಜನಸಂಖ್ಯೆಯನ್ನು ಒಟ್ಟು ಅಸೆಂಬ್ಲಿ ಕ್ಷೇತ್ರದಿಂದ ಭಾಗಿಸಿ ನಂತರ ಮತ್ತೆ ಒಂದು ಸಾವಿರದಿಂದ ಭಾಗಿಸಿ ನಿರ್ಧರಿಸಲಾಗುತ್ತದೆ. ರಾಜ್ಯಗಳ ಜನಸಂಖ್ಯೆ 1971ರ ಸೆನ್ಸಸ್ ಆಧರಿಸಿ ಲೆಕ್ಕಹಾಕಲಾಗುತ್ತದೆ. 2026ರ ವರೆಗೆ ಇದೇ ಸೆನ್ಸಸ್ ಪದ್ದತಿ ಜಾರಿಯಲ್ಲಿ ಇರಲಿದೆ.

ಉದಾಹರಣೆಗೆ 1971ರ ಸೆನ್ಸಸ್ ನಲ್ಲಿ ಕರ್ನಾಟಕದ ಜನಸಂಖ್ಯೆ ನಾಲ್ಕು ಕೋಟಿಯಿದ್ದು, 224 ಅಸೆಂಬ್ಲಿ ಕ್ಷೇತ್ರವನ್ನು ಹೊಂದಿದ್ದರೆ - 4,00,00,000/224=1,78,571/1000= 179, ಇದು ಕರ್ನಾಟಕದ ಒಂದು ಶಾಸಕರ ಮತದ ಮೌಲ್ಯ. ಮುಂದೆ ಓದಿ..

ಸಂಸದರ ಮತದ ಮೌಲ್ಯ

ಸಂಸದರ ಮತದ ಮೌಲ್ಯ

ಅದೇ ರೀತಿ ಸಂಸದರ ಮತದ ಮೌಲ್ಯವನ್ನು ಯಾವರೀತಿ ಲೆಕ್ಕಾಚಾರ ಹಾಕಲಾಗುತ್ತದೆಯೆಂದರೆ, ಇಡೀ ದೇಶದ ಶಾಸಕರ ಮತಮೌಲ್ಯವನ್ನು, ದೇಶದ ಒಟ್ಟು ಸಂಸದರಿಂದ (ಲೋಕಸಭೆ ಮತ್ತು ರಾಜ್ಯಸಭೆ) ಭಾಗಿಸಿ, ಬರುವ ಮೌಲ್ಯ, ಪ್ರತೀ ಸಂಸದರದ್ದಾಗಿರುತ್ತದೆ.

ಜುಲೈ 17ರಂದು ರಾಷ್ಟ್ರಪತಿ ಚುನಾವಣೆ

ಜುಲೈ 17ರಂದು ರಾಷ್ಟ್ರಪತಿ ಚುನಾವಣೆ

ಸಂವಿಧಾನದ 54ರ ವಿಧಿ ಪ್ರಕಾರ ನಡೆಯುವ ರಾಷ್ಟ್ರಪತಿ ಚುನಾವಣೆ ಜುಲೈ 17ರಂದು ನಡೆಯಲಿದ್ದು, ಜುಲೈ 20ರಂದು ಫಲಿತಾಂಶ ಹೊರಬೀಳಲಿದೆ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ 50 ಮಂದಿ ಮತದಾರರು ಸೂಚಕರಾಗಿ, 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ.

ಪ್ರಾದೇಶಿಕ ಪಕ್ಷಗಳ ಮತ ನಿರ್ಣಾಯಕ

ಪ್ರಾದೇಶಿಕ ಪಕ್ಷಗಳ ಮತ ನಿರ್ಣಾಯಕ

ಪ್ರಾದೇಶಿಕ ಪಕ್ಷಗಳಾದ ಎಐಎಡಿಎಂಕೆ, ಬಿಜೆಡಿ, ಟಿಆರ್ಎಸ್, ವೈಎಸ್ಆರ್ ಕಾಂಗ್ರೆಸ್, ಆಮ್ ಆದ್ಮಿ ಮತ್ತು ಹರ್ಯಾಣದ INLD, ಈ ಆರು ಪಕ್ಷಗಳು ರಾಷ್ಟ್ರಪತಿ ಚುನಾವಣೆಯ ಎಲೆಕ್ಟೋರಲ್ ಕಾಲೇಜಿನಲ್ಲಿ ಶೇ. 13ರಷ್ಟು ಮತವನ್ನು ಹೊಂದಿರುವುದರಿಂದ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಈ ಎಲ್ಲಾ ಪಕ್ಷಗಳು ನಿರ್ಣಾಯಕ.

ಟೋಟಲ್ ಮತಗಳು ಎಷ್ಟು

ಟೋಟಲ್ ಮತಗಳು ಎಷ್ಟು

ಒಟ್ಟು ಶಾಸಕರು : 4,114
ಒಟ್ಟು ಸಂಸದರು: 794
ಒಟ್ಟು ಅಸೆಂಬ್ಲಿ ವೋಟ್: 5,49,474
ಒಟ್ಟು ಪಾರ್ಲಿಮೆಂಟ್ ವೋಟ್: 5,55,072
ಟೋಟಲ್: 11,04,546

ಇಕಾನಮಿಕ್ ಟೈಮ್ಸ್ ವರದಿ

ಇಕಾನಮಿಕ್ ಟೈಮ್ಸ್ ವರದಿ

ಇಕಾನಮಿಕ್ ಟೈಮ್ಸ್ ವರದಿಯ ಪ್ರಕಾರ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಬಲಾಬಲ ಇಂತಿದೆ.
ಒಟ್ಟು ಶಾಸಕರು : 1,691
ಒಟ್ಟು ಸಂಸದರು: 418
ಒಟ್ಟು ಅಸೆಂಬ್ಲಿ ವೋಟ್: 2,41,757
ಒಟ್ಟು ಪಾರ್ಲಿಮೆಂಟ್ ವೋಟ್: 2,95,944
ಟೋಟಲ್: 5,37,683

ಯುಪಿಎ ಮೈತ್ರಿಕೂಟದ ಬಲಾಬಲ

ಯುಪಿಎ ಮೈತ್ರಿಕೂಟದ ಬಲಾಬಲ

ಇಕಾನಮಿಕ್ ಟೈಮ್ಸ್ ವರದಿಯ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಬಲಾಬಲ ಇಂತಿದೆ.
ಒಟ್ಟು ಶಾಸಕರು : 1,710
ಒಟ್ಟು ಸಂಸದರು: 244
ಒಟ್ಟು ಅಸೆಂಬ್ಲಿ ವೋಟ್: 2,18,987
ಒಟ್ಟು ಪಾರ್ಲಿಮೆಂಟ್ ವೋಟ್: 1,73,640
ಟೋಟಲ್: 3,91,739

ಕೊರತೆಯಾಗಿರುವ ಮತ

ಕೊರತೆಯಾಗಿರುವ ಮತ

ನಿತೀಶ್ ಕುಮಾರ್ ಅವರ ಜೆಡಿಯು, ದೇವೇಗೌಡರ ಜೆಡಿಎಸ್ ಇನ್ನೂ ತಮ್ಮ ಅಂತಿಮ ನಿರ್ಧಾರ ಪ್ರಕಟಿಸದಿದ್ದರೂ, ಆ ಎರಡು ಪಕ್ಷಗಳ ಮತವನ್ನು ಯುಪಿಎ ಮೈತ್ರಿಕೂಟದ ಪಟ್ಟಿಗೆ ಸೇರಿಸಲಾಗಿದೆ. ಆ ಪ್ರಕಾರ ಎನ್ಡಿಎ ಅಭ್ಯರ್ಥಿಗೆ ಕೊರತೆಯಾಗಿರುವ ಮತ ಸುಮಾರು 22-26 ಸಾವಿರ ಮತ.

ಪಟ್ಟಿಯಲ್ಲಿ ಪ್ರಾದೇಶಿಕ ಪಕ್ಷಗಳ ಹೆಸರು ಸೇರಿಸಿಲ್ಲ

ಪಟ್ಟಿಯಲ್ಲಿ ಪ್ರಾದೇಶಿಕ ಪಕ್ಷಗಳ ಹೆಸರು ಸೇರಿಸಿಲ್ಲ

ಎಐಎಡಿಎಂಕೆ, ಬಿಜೆಡಿ, ಟಿಆರ್ಎಸ್, ವೈಎಸ್ಆರ್ ಕಾಂಗ್ರೆಸ್, ಆಪ್, INLD ಪಕ್ಷಗಳ ಅಂಕಿಅಂಶವನ್ನು ಯಾವ ಮೈತ್ರಿಕೂಟದ ಪಟ್ಟಿಯಲ್ಲೂ ಸೇರಿಸಲಾಗಿಲ್ಲ. ಅದರಲ್ಲಿ ಆಪ್ ಹೊರತು ಪಡಿಸಿ ಮಿಕ್ಕೆಲ್ಲಾ ಪಕ್ಷಗಳ ಬೆಂಬಲ ಎನ್ಡಿಎ ಮೈತ್ರಿಕೂಟಕ್ಕೆ ನಿಶ್ಚಿತವಾಗಿರುವುದರಿಂದ ರಾಮ್ ನಾಥ್ ಕೋವಿಂದ್ ಗೆಲುವು ಬಹುತೇಕ ಖಚಿತ.

English summary
Indian Presidential elections 2017 in numbers: Calculations show a certain win for BJP led NDA nominee Ram Nath Kovind. Elected MPs and MLAs of all the states, whose vote has a defined weight-age depending on size of the population, here is the calculation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X