ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

By Mahesh
|
Google Oneindia Kannada News

ಡೆಹ್ರಾಡೂನ್ (ಉತ್ತರಾಖಂಡ್), ಮಾರ್ಚ್ 27: ಭಾನುವಾರ(ಮಾರ್ಚ್ 27) ದಿಂದ ಜಾರಿಗೆ ಬರುವಂತೆ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳ್ಳಲಿದೆ.ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಅಸ್ಥಿರತೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಸಂಪುಟ ಸಭೆ ಶನಿವಾರ ರಾತ್ರಿ ಶಿಫಾರಸ್ಸು ಮಾಡಿತ್ತು. ಮೋದಿ ಸಂಪುಟದ ತೀರ್ಮಾನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಅಧಿಕೃತವಾಗಿ ಒಪ್ಪಿಗೆ ಸಿಕ್ಕಿದೆ.

President's Rule imposed in Uttarakhand

ಉತ್ತರಾಖಂಡ್ ರಾಜ್ಯದ ಅಸ್ಥಿರತೆ ಬಗ್ಗೆ ರಾಜ್ಯಪಾಲ ಕೆಕೆ ಪಾಲ್ ಅವರು ಅನೇಕ ವರದಿಗಳನ್ನು ನೀಡಿದ ಬಳಿಕ ಕಳೆದ ರಾತ್ರಿ ಮೋದಿ ಸರ್ಕಾರ ತುರ್ತು ಸಂಪುಟ ಸಭೆ ನಡೆಸಿತು. ['ಕುದುರೆ ಕಾಲು ಮುರಿದಿದ್ರೆ, ನನ್ನ ಕಾಲು ಮುರಿಯಲಿ']

ಮಾರ್ಚ್ 28ರಂದು ಮುಖ್ಯಮಂತ್ರಿ ಹರೀಶ್ ರಾವತ್ ಅವರು ಬಹುಮತ ಸಾಬೀತು ಪಡಿಸಬೇಕಾಗಿತ್ತು. ಇದಕ್ಕೂ ಮುನ್ನ ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ ವಾಲ್ ಅವರು 9 ಬಂಡಾಯ ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಿದ್ದರು.

ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, 'ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆದಿದೆ' ಎಂದಿದೆ.(ಪಿಟಿಐ)

English summary
Uttarakhand was on Sunday, March 27 brought under President's rule by the Centre on grounds of "breakdown of governance" in a controversial decision which comes in the wake of a political crisis triggered by a rebellion in the ruling Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X