ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭರ್ಜರಿ ಗೆಲುವಿನೊಂದಿಗೆ 14ನೇ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಆಯ್ಕೆ

|
Google Oneindia Kannada News

ನವದೆಹಲಿ, ಜುಲೈ 20: ಬಹು ನಿರೀಕ್ಷಿತ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಭರ್ಜರಿ ಜಯ ದಾಖಲಿಸಿದ್ದಾರೆ. ಅವರು ಯುಪಿಎ ಮತ್ತು ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ವಿರುದ್ಧ ವಿಜಯ ಪತಾಕೆ ಹಾರಿಸಿದ್ದಾರೆ.

ರಾಮ್ ನಾಥ್ ಕೋವಿಂದ್ 7,02,044 ಮೌಲ್ಯದ 2,930 ಮತಗಳನ್ನು ಪಡೆದರೆ ಎದುರಾಳಿ ಅಭ್ಯರ್ಥಿ ಮೀರಾ ಕುಮಾರ್ 3,67,314 ಮೌಲ್ಯದ 1,844 ಮತಗಳನ್ನು ಮಾತ್ರ ಪಡೆದುಕೊಂಡಿದ್ದು ಹೀನಾಯವಾಗಿ ಸೋಲುಂಡಿದ್ದಾರೆ. ಕೋವಿಂದ್ ಶೇಕಡಾ 65.6 ಮತಗಳನ್ನು ಗಳಿಸಿದರೆ ಮೀರಾ ಕುಮಾರ್ ಶೇಕಡಾ 34.4 ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು 77 ಮತಗಳು ಅಸಿಂಧುವಾಗಿವೆ.

President of India election 2017: Ramnath kovind 60,000 plus votes ahead to meira Kumar

ರಾಮ್ ನಾಥ್ ಕೋವಿಂದ್ ಗೆಲುವು ಅಧಿಕೃತವಾಗುತ್ತಿದ್ದಂತೆ ಅವರ ಹುಟ್ಟೂರು ಕಾನ್ಪುರ ಮತ್ತು ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.

ಜುಲೈ 24 ರಂದು ಪ್ರಣಬ್ ಮುಖರ್ಜಿ ಅಧಿಕಾರವಧಿ ಕೊನೆಗೊಳ್ಳಲಿದ್ದು, 23ರಂದು ಪ್ರಣಬ್ ಮುಖರ್ಜಿಯವರಿಗೆ ವಿದಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ 25 ರಂದು ನೂತನ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಅಧಿಕಾರ ಸ್ವೀಕರಿಸಲಿದ್ದಾರೆ. ಕೋವಿಂದ್ ರಾಷ್ಟ್ರಪತಿ ಹುದ್ದೆಗೇರಿದ ಕೇವಲ ಎರಡನೇ ದಲಿತ ಸಮುದಾಯದ ವ್ಯಕ್ತಿಯಾಗಲಿದ್ದಾರೆ.


4.15: 'ರಾಮ್ ನಾಥ್ ಕೋವಿಂದ್ ಮುಂದಿನ ರಾಷ್ಟ್ರಪತಿ' ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ. 14ನೇ ರಾಷ್ಟ್ರಪತಿಯಾಗಿ ಜುಲೈ 25 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

3.55: 5,49,442ಕ್ಕಿಂತ ಹೆಚ್ಚಿನ ಮೌಲ್ಯದ ಮತಗಳನ್ನು ರಾಮ್ ನಾಥ್ ಕೋವಿಂದ್ ಗಳಿಸಿದ್ದು ಭರ್ಜರಿ ಜಯ ದಾಖಲಿಸಿದ್ದಾರೆ. ಅಂತಿಮ ಸುತ್ತಿನ ಮತ ಎಣಿಕೆಗೂ ಮೊದಲೇ ಕೋವಿಂದ್ ಅರ್ಧಕ್ಕಿಂತೆ ಹೆಚ್ಚಿನ ಮತಗಳನ್ನು ಪಡೆದು ವಿಜಯಭೇರಿ ಬಾರಿಸಿದ್ದಾರೆ. ಕೋವಿಂದ್ ಜಯಶಾಲಿಯಾಗಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

3.27: ಮೀರಾ ಕುಮಾರ್ ಗಳಿಸಿದ ಮತ ಮೌಲ್ಯ 2,04,594, ರಾಮ್ ನಾಥ್ ಕೋವಿಂದ್ ಗಳಿಸಿರುವ ಮತ ಮೌಲ್ಯ 4,79,585

3.02: 12 ರಾಜ್ಯಗಳು ಮತ್ತು ಸಂಸದರ ಮತ ಎಣಿಕೆ ಅಂತ್ಯ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಮತ ಎಣಿಕೆ ಇನ್ನೂ ಬಾಕಿ.

2.55: 12 ರಾಜ್ಯಗಳ ಮತಎಣಿಕೆಯ ಅಂತ್ಯಕ್ಕೆ ರಾಮ್ ನಾಥ್ ಕೋವಿಂದ್ ಅವರಿಗೆ 1389 ಮತಗಳ ಬಿದ್ದಿವೆ. ಮತಗಳ ಮೌಲ್ಯ 4,79,585. ಮೀರಾ ಕುಮಾರ್ ಅವರಿಗೆ 576 ಮತಗಳು ಬಿದ್ದಿದ್ದು ಅವುಗಳ ಮೌಲ್ಯ 2,05,594 ಆಗಿದೆ. 37 ಮತಗಳು ಅಸಿಂಧುವಾಗಿವೆ.

2.46: ಸದ್ಯಕ್ಕೆ ರಾಮ್ ನಾಥ್ ಕೋವಿಂದ್ 4,79,585 ಮೌಲ್ಯದ ಮತಗಳನ್ನು ಪಡೆದಿದ್ದು ಮೀರಾ ಕುಮಾರ್ 2,04,594 ಮೌಲ್ಯದ ಮತಗಳನ್ನು ಪಡೆದುಕೊಂಡಿದ್ದಾರೆ. ಕೋವಿಂದ್ ಎರಡು ಮುಕ್ಕಾಲು ಲಕ್ಷ ಮೌಲ್ಯದ ಮತಗಳಿಂದ ಮುನ್ನಡೆಯಲಿದ್ದಾರೆ. 5,49,442 ಮೌಲ್ಯದ ಮತಗಳು ಗೆಲುವಿಗೆ ಅವಶ್ಯವಾಗಿದ್ದು ಗೆಲುವಿನತ್ತ ಕೋವಿಂದ್ ದಾಪುಗಾಲು ಹಾಕಿದ್ದಾರೆ.

2.45: ರಾಮ್ ನಾಥ್ ಕೋವಿಂದ್ ಭಾರೀ ಮುನ್ನಡೆ ಸಾಧಿಸಿದ್ದಾರೆ. ಸುಮಾರು 4 ಲಕ್ಷ ಮೌಲ್ಯದ ಮತಗಳನ್ನು ಕೋವಿಂದ್ ಪಡೆದುಕೊಂಡಿದ್ದರೆ. ಮೀರಾ ಕುಮಾರ್ ಕೇವಲ 2 ಲಕ್ಷ ಮೌಲ್ಯದ ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ 2 ಲಕ್ಷ ಮೌಲ್ಯದ ಮತಗಳಿಂದ ಕೋವಿಂದ್ ಮುನ್ನಡೆ ಸಾಧಿಸಿದ್ದಾರೆ.

2.40: "ನಾನು ನಿರಾಸೆಗೊಂಡಿಲ್ಲ. ನಾನ್ಯಾಕೆ ನಿರಾಸೆಗೊಳ್ಳಲಿ? ನಾನೊಬ್ಬಳು ಹೋರಾಟಗಾರ್ತಿ. ನಾನು ನನ್ನ ದೇಶದ ಬಹು ಸಂಖ್ಯಾತ ಮಹಿಳೆಯರು ಮತ್ತು ಪುರುಷರ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಹೋರಾಡಿದ್ದೇನೆ," ಎಂದು ಮೀರಾ ಕುಮಾರ್ ಮತ ಎಣಿಕೆಯಲ್ಲಿ ಹಿನ್ನಡೆಯಾಗುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

2.30 : ನಾಲ್ಕು ರಾಜ್ಯಗಳಲ್ಲಿ ಕೋವಿಂದ್ ಗೆ ಭಾರೀ ಮುನ್ನಡೆ. ಕೋವಿಂದ್ - 60,683, ಮೀರಾ ಕುಮಾರ್ - 22,941

2.15 :ಮಧ್ಯಾಹ್ನದ ಹೊತ್ತಿಗೆ ಎನ್ ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರು ತಮ್ಮ ಪ್ರತಿಸ್ಪರ್ಧಿ, ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರಿಗಿಂತ 60,683 ಮತಗಳ ಅಂತರದಿಂದ ಮುಂದಿದ್ದಾರೆ.

English summary
Official announcement made: NDA's Ram Nath Kovind wins Presidential elections, defeating opposition candidate Meira Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X