ಪಂಜಾಬ್ ನಲ್ಲಿ ಸೌಂದರ್ಯ ಸ್ಪರ್ಧೆ ಗೆದ್ದ ಶ್ರೀಮತಿಯರಿವರು...

Posted By:
Subscribe to Oneindia Kannada

ಇನ್ನೇನು ಭಾರತ ಮಹಿಳಾ ಕ್ರಿಕೆಟ್ ತಂಡ ಗೆದ್ದು ಬೀಗಿತು ಎಂಬ ಹೆಮ್ಮೆ ಪಡುವಾಗಲೇ ಸೋತುಹೋಯಿತು. ಭಾನುವಾರ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅದೃಷ್ಟ ಕೈಕೊಟ್ಟ ಕ್ಷಣ ಎಂದುಕೊಳ್ಳಬೇಕು. ಅಮೋಘವಾಗಿ ಆಡುತ್ತಾ ಬಂದಿದ್ದ ಮಹಿಳೆಯರು ದೊಡ್ಡ ಸಂಭ್ರಮವಾಗ ಬೇಕಿದ್ದ ಕ್ಷಣದಲ್ಲಿ ಕಣ್ಣೀರಾಗಬೇಕಾಯಿತು.

ಪಶ್ಚಿಮ ಬಂಗಾಲದ ಬಿರ್ಭುಮ್ ಜಿಲ್ಲೆಯಲ್ಲಿ ಭಾರೀ ಮಳೆ. ಅದ್ಯಾವ ಪರಿ ಅಂದರೆ, ಅಲ್ಲಿಂದ ಮಕ್ಕಳನ್ನು ಸ್ಥಳಾಂತರ ಮಾಡಬೇಕಾಯಿತು. ಈ ವೇಳೆ ಆಡು-ಮೇಕೆಗಳನ್ನು ಸಹ ಹೊತ್ತುಕೊಂಡು ಹೋಗುತ್ತಿರುವ ಆ ಪುಟ್ಟ ವಯಸ್ಸಿನ ಹುಡುಗರ ಫೋಟೋ ನೋಡಿದರೆ ಕರುಳು ಕಿವುಚಿದಂತಾಗುತ್ತದೆ.

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಭಾವಪೂರ್ಣ ವಿದಾಯ

ಇನ್ನು ಐದು ವರ್ಷಗಳ ಕಾಲ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದ ಪ್ರಣವ್ ಮುಖರ್ಜಿ ಅವರಿಗೆ ನವದೆಹಲಿಯ ಸಂಸತ್ ನಲ್ಲಿರುವ ಸೆಂಟ್ರಲ್ ಹಾಲ್ ನಲ್ಲಿ ಬೀಳ್ಕೊಡುಗೆ ನೀಡಲಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ವಂದನೆ ಸಲ್ಲಿಸಿದ ಅವರ ಫೋಟೋವೊಂದು ಎಷ್ಟೆಲ್ಲ ಭಾವನೆಯನ್ನು ಹೊರಹಾಕುತ್ತಿದೆ.

ಇನ್ನು ಪಂಜಾಬ್ ನಲ್ಲಿ ವಿವಾಹಿತೆಯರ ಸೌಂದರ್ಯ ಸ್ಪರ್ಧೆ ನಡೆದಿದೆ. ಇನ್ನೂ ಕೆಲ ಸುದ್ದಿ- ಚಿತ್ರಗಳು ಇಲ್ಲಿವೆ.

ಭಾರತ ನಿರಾಸೆ, ಇಂಗ್ಲೆಂಡ್ ಸಂಭ್ರಮ

ಭಾರತ ನಿರಾಸೆ, ಇಂಗ್ಲೆಂಡ್ ಸಂಭ್ರಮ

ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದಾವಳಿಯಲ್ಲಿ ಸೋತ ಮಹಿಳೆಯರ ತಂಡವು ಭಾನುವಾರ ನಿರಾಸೆಯಿಂದ ಕಂಡುಬಂದರೆ, ಇಂಗ್ಲೆಂಡ್ ಆಟಗಾರ್ತಿಯರ ಸಂಭ್ರಮ ಮೇರೆ ಮೀರಿತ್ತು.

ಗೆದ್ದ ಖುಷಿಯಲ್ಲಿ

ಗೆದ್ದ ಖುಷಿಯಲ್ಲಿ

ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯಾವಳಿಯಲ್ಲಿ ಭಾನುವಾರ ಭಾರತದ ವಿರುದ್ಧ ಜಯ ಗಳಿಸಿದ ನಂತರ ಇಂಗ್ಲೆಂಡ್ ನ ಅನ್ಯಾ ಶ್ರುಬ್ ಸೋಲ್ ಇತರ ಆಟಗಾರ್ತಿಯರೊಂದಿಗೆ ಸಂಭ್ರಮಿಸಿದ ಪರಿ ಇದು.

ಫೈನಲ್ ಸೋತರೂ ಮಿಥಾಲಿ ಪಡೆಯ ಸಾಧನೆ ಅಲ್ಲಗಳೆಯುವಂತಿಲ್ಲ!

ಪ್ರವಾಹ ಅನಾಹುತ

ಪ್ರವಾಹ ಅನಾಹುತ

ಪಶ್ಚಿಮ ಬಂಗಾಲದ ಬಿರ್ಭುಮ್ ಜಿಲ್ಲೆಯ ಥಿಬಾ ಎಂಬ ಹಳ್ಳಿಯಲ್ಲಿನ ದೃಶ್ಯವಿದು. ಪ್ರವಾಹ ಪೀಡಿತ ಪ್ರದೇಶದಿಂದ ಮಕ್ಕಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದು, ಜತೆಗೆ ಮೇಕೆ-ಆಡುಗಳನ್ನು ಸಹ ಹೊತ್ತೊಯ್ಯುತ್ತಿದ್ದ ಕ್ಷಣ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ನಿರ್ಗಮಿತ ರಾಷ್ಟ್ರಪತಿಗೆ ಉಡುಗೊರೆ

ನಿರ್ಗಮಿತ ರಾಷ್ಟ್ರಪತಿಗೆ ಉಡುಗೊರೆ

ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಭಾನುವಾರ ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಬೀಳ್ಕೊಡುಗೆ ನೀಡುವ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಕಾಫಿ ಟೇಬಲ್ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು.

ಸುಂದರಿಯರ ಸ್ಪರ್ಧೆ

ಸುಂದರಿಯರ ಸ್ಪರ್ಧೆ

ಪಂಜಾಬ್ ನ ಚಂಡೀಗಢದಲ್ಲಿ ಭಾನುವಾರ ವಿವಾಹಿತೆಯರ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ರಾಜ್ ಬೀರ್ ಕೌರ್ ಅವರನ್ನು ಪ್ರಥಮ ಹಾಗೂ ದ್ವಿತೀಯ ರನ್ನರ್ ಅಪ್ ಆದವರು ಅಭಿನಂದಿಸಿದ್ದು ಹೀಗೆ.

ಎಲ್ಲರಿಗೂ ನಮಸ್ಕಾರ

ಎಲ್ಲರಿಗೂ ನಮಸ್ಕಾರ

ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಭಾನುವಾರ ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಮ್ಮ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಷಣದ ನೀಡಿದ ನಂತರ ವಂದನೆ ಸಲ್ಲಿಸಿದರು.

ದಲಿತರ ಮನೆಯಲ್ಲಿ ಭೋಜನ

ದಲಿತರ ಮನೆಯಲ್ಲಿ ಭೋಜನ

ಮೂರು ದಿನಗಳ ರಾಜಸ್ತಾನ ಭೇಟಿಗಾಗಿ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೈಪುರ್ ನಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ ವೇಳೆ ಅವರ ಜತೆಯಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಅರಸ್ ಕೂಡ ಇದ್ದರು.

Siddaramaiah Missed A Golden Opportunity

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pranab Mukherjee, Rain in West Bengal, Woman cricket other national event represent through PTI photos.
Please Wait while comments are loading...