ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಿಕಲ್ ಸ್ಟ್ರೈಕ್ ನಂತರ 20ಕ್ಕೂ ಹೆಚ್ಚು ದಾಳಿ,24ಕ್ಕೂ ಹೆಚ್ಚು ಸಾವು

ಭಾರತೀಯ ಸೇನೆ ಸೆಪ್ಟೆಂಬರ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಈ ವರೆಗೆ ಅಂದರೆ ನವೆಂಬರ್ 29ರ ವರೆಗೆ ಪಾಕಿಸ್ತಾನ ಸೇನೆ ಹಾಗೂ ಉಗ್ರರಿಂದ ಇಪ್ಪತ್ತಕ್ಕೂ ಹೆಚ್ಚು ದಾಳಿಗಳು ನಡೆದಿವೆ.

By ವಿಕಾಸ್ ನಂಜಪ್ಪ
|
Google Oneindia Kannada News

ಶ್ರೀನಗರ್, ನವೆಂಬರ್ 30: ಗಡಿ ನಿಯಂತ್ರಣ ರೇಖೆ ಆಚೆಗೆ ಭಾರತೀಯ ಸೇನೆ ಸೆಪ್ಟೆಂಬರ್ 29ರಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಪರಿಸ್ಥಿತಿ ಹೇಗಿದೆ? ಇದು ಪಾಕಿಸ್ತಾನಕ್ಕೆ ನೀಡಿದ ಸಂದೇಶ ಎಂದೇ ಆಗ ಹೇಳಲಾಯಿತು. ಆದರೆ ಗುಪ್ತಚರ ಇಲಾಖೆ ಸತತವಾಗಿ ಎಚ್ಚರಿಸುತ್ತಲೇ ಇದೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ತರಿದು ಹಾಕದಿದ್ದರೆ ಕಷ್ಟ ಎಂದಿದೆ.

ಸರ್ಜಿಕಲ್ ಸ್ಟ್ರೈಕ್ ನಂತರ ಉಗ್ರರ ದಾಳಿ, ಕದನ ವಿರಾಮ ಉಲ್ಲಂಘನೆಯೂ ಸೇರಿ ಇಪ್ಪತ್ತಕ್ಕೂ ಹೆಚ್ಚು ಘಟನೆಗಳು ಸಂಭವಿಸಿವೆ. ಇದರಲ್ಲಿ ಇಪ್ಪತ್ನಾಲ್ಕಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಂತರ ಪ್ರತಿ ದಿನವೂ ಉಗ್ರರ ದಾಳಿ ನಡೆದಿದೆ. ಮಂಗಳವಾರ ರಾಮ್ ಘರ್, ನಗ್ರೋಟಾದಲ್ಲಿ ದಾಳಿ ನಡೆದಿದೆ.[ನಗ್ರೋಟಾ ಸೇನಾ ನೆಲೆ ಮೇಲೆ ಉಗ್ರರ ದಾಳಿ: 7 ಯೋಧರು ಹುತಾತ್ಮ]

Uri attack

ನವೆಂಬರ್ 29- ನಗ್ರೋಟಾದಲ್ಲಿ ದಾಳಿ ಏಳು ಯೋಧರು ಹುತಾತ್ಮ. ಸಾಂಬಾ ವಲಯದಲ್ಲಿ ದೇಶದ ಒಳನುಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಿದ ಬಿಎಸ್ ಎಫ್ ಯೋಧರು.

ನವೆಂಬರ್ 25- ಬಂಡೀಪೋರ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಸೇನಾ ಯೋಧ ಹಾಗೂ ಇಬ್ಬರು ಉಗ್ರರ ಸಾವು

ನವೆಂಬರ್ 22- ಬಂಡೀಪೋರ್ ನಲ್ಲಿ ಇಬ್ಬರು ಉಗ್ರರ ಹತ್ಯೆ

ನವೆಂಬರ್ 16- ಸೋಪೋರ್ ನಲ್ಲಿ ಉಗ್ರರಿಂದ ಪೊಲೀಸ್ ಹತ್ಯೆ

ನವೆಂಬರ್ 9- ಮಚ್ಚಾಲ್ ವಲಯದಲ್ಲಿ ಪಾಕ್ ಸೇನೆ ಗುಂಡಿನ ದಾಳಿಗೆ ಭಾರತೀಯ ಯೋಧ ಹುತಾತ್ಮ

ನವೆಂಬರ್ 8- ನೌಶೆರಾ ವಲಯದಲ್ಲಿ ಪಾಕ್ ಗುಂಡಿನ ದಾಳಿಗೆ ಸೇನಾ ಯೋಧ ಸಾವು, ಇಬ್ಬರಿಗೆ ಗಾಯ

ನವೆಂಬರ್ 7- ಸೋಪೋರ್ ನಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ, ಇಬ್ಬರು ಸೇನಾ ಯೋಧರಿಗೆ ಗಾಯ

ನವೆಂಬರ್ 1- ಅರ್ನಿಯಾ ಹಾಗೂ ರಜೌರಿಯಲ್ಲಿ ಮಾರ್ಟರ್ ದಾಳಿಗೆ ಎಂಟು ನಾಗರಿಕರ ಸಾವು. ಬಿಎಸ್ ಎಫ್ ನಿಂದ ಹದಿನಾಲ್ಕು ಪಾಕ್ ನೆಲೆ ನಾಶ

ಅಕ್ಟೋಬರ್ 30- ಕುಪ್ವಾರದಲ್ಲಿ ಸೇನೆ ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ. ಗುಪ್ತಚರ ಇಲಾಖೆ ಎಚ್ಚರಿಕೆ, ಸೇನಾ ಕಾರ್ಯಾಚರಣೆ

ಅಕ್ಟೋಬರ್ 10- ಜಮ್ಮು-ಕಾಶ್ಮೀರದ ಸೆಂಪೋರಾ ಪ್ರದೇಶದ ಪಾಂಪೋರ್ ನ ಎಂಟರ್ ಪ್ರೆನ್ಯೂರ್ ಷಿಪ್ ಡೆವೆಲಪ್ ಮೆಂಟ್ ಇನ್ ಸ್ಟಿಟ್ಯೂಟ್ ನಲ್ಲಿ ಉಗ್ರರು

ಅಕ್ಟೋಬರ್ 8- ಶೋಪಿಯಾನ್ ವಲಯದಲ್ಲಿ ಉಗ್ರರಿಂದ ಪೊಲೀಸ್ ಹತ್ಯೆ. ಪೂಂಛ್ ವಲಯದಲ್ಲಿ ಪಾಕಿಸ್ತಾನದಿಂದ ಗುಂಡಿನ ದಾಳಿ

ಅಕ್ಟೋಬರ್ 7- ಪಾಕ್ ಸೇನೆಯಿಂದ ಪೂಂಛ್ ವಲಯದಲ್ಲಿ ಭಾರೀ ಗುಂಡಿನ ದಾಳಿ

ಅಕ್ಟೋಬರ್ 6- ಕುಪ್ವಾರದ ಲಾಂಗೆಟ್ ನ ಭಾರತೀಯ ಸೇನಾ ನೆಲೆ ಮೇಲೆ ಉಗ್ರರ ಗುಂಡಿನ ದಾಳಿ, ಮೂವರು ಉಗ್ರರ ಹತ್ಯೆ

ಅಕ್ಟೋಬರ್ 5- ಪೂಂಛ್, ರಜೌರಿ ಹಾಗೂ ಕುಪ್ವಾರದಲ್ಲಿ ಪಾಕ್ ನಿಂದ ನಾಲ್ಕು ಬಾರಿ ಕದನ ವಿರಾಮ ಉಲ್ಲಂಘನೆ

ಅಕ್ಟೋಬರ್ 4- ಜಮ್ಮು ಕಾಶ್ಮೀರದ ಯಾರಿಪೋರಾ, ಕುಲ್ಗಾಂ ಪೊಲೀಸ್ ಠಾಣೆಗಳ ಮೇಲೆ ಉಗ್ರರ ದಾಳಿ. ನೌಶೆರಾದಲ್ಲಿ ಪಾಕ್ ಸೇನೆ ಗುಂಡಿನ ದಾಳಿ. ಬಾರಾಮುಲ್ಲಾ ಪಟ್ಟಣದಲ್ಲಿ ಬಿಎಸ್ ಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ.

ಅಕ್ಟೋಬರ್ 3- ಪೂಂಛ್ ವಲಯದಲ್ಲಿ ಒಂದೇ ದಿನ ಪಾಕಿಸ್ತಾನದಿಂದ ನಾಲ್ಕು ಬಾರಿ ಕದನ ವಿರಾಮ ಉಲ್ಲಂಘನೆ

ಅಕ್ಟೋಬರ್ 2- ಜಮ್ಮು ಕಾಶ್ಮೀರದ ಪಲ್ಲಾನ್ ವಾಲಾ ವಲಯದಲ್ಲಿ ಗುಂಡಿನ ದಾಳಿ

ಅಕ್ಟೋಬರ್ 1- ಗಡಿ ನಿಯಂತ್ರಣ ರೇಖೆ ಬಳಿಯ ಪಲ್ಲಾನ್ ವಾಲಾ ವಲಯದ ಅಖ್ನೂರ್ ನಲ್ಲಿ ಪಾಕ್ ನಿಂದ ಮಾರ್ಟರ್ ಶೆಲ್ಲಿಂಗ್

ಸೆಪ್ಟೆಂಬರ್ 29: ಅಖ್ನೂರ್ ವಲಯದ ಚಪ್ರಿಯಾಲ್ ಮತ್ತ ಸಂವಾನ್ ನಲ್ಲಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ

English summary
Since the surgical strike there have been over 20 incidents involving terrorist attacks and violations along the border. Moreover India has lost a little over 24 of its army personnel in such attacks. Since the surgical strikes were conducted, there has been a terrorist strike almost everyday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X