ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಳಿದವರ ನಾಡಲ್ಲೇ ಆಳ್ವಿಕೆ, ಪೋರ್ಚುಗಲ್ ಪ್ರಧಾನಿ ಗೋವೆ ನಂಟು

ಪೋರ್ಚುಗಲ್ ಪ್ರಧಾನಿ ಬೆಂಗಳೂರಿನಲ್ಲಿ ನಡೆದ ಪ್ರವಾಸಿ ದಿವಸ್ ನ ಪ್ರಮುಖ ಆಕರ್ಷಣೆಯಾಗಿದ್ದರು. ಅದಕ್ಕೆ ಕಾರಣವಾಗಿದ್ದು ಅವರ ಮೂಲ ಗೋವಾ ಎಂಬುದು. ಇದರ ಜೊತೆಗೆ, ನಾನು ಈ ಮಣ್ಣಿನವನು ಎಂಬುದು ಹೆಮ್ಮೆಯ ವಿಚಾರ ಎಂದ ಕಾರಣಕ್ಕೆ ಮತ್ತಷ್ಟು ಇಷ್ಟವಾದರು

By ಕಿಶೋರ್ ನಾರಾಯಣ್
|
Google Oneindia Kannada News

ಭಾರತದ ಪ್ರವಾಸದಲ್ಲಿರುವ ಪೋರ್ಚುಗಲ್ ಪ್ರಧಾನ ಮಂತ್ರಿ ಅಂಟೊನಿಯೊ ಕೋಸ್ಟಾ 3 ದಿನಗಳ ಹಿಂದೆ, "ನನ್ನ ತಂದೆಯ ದೇಶಕ್ಕೆ ಮರಳಲು ಅತ್ಯಂತ ಸಂತಸವಾಗಿದೆ" ಎಂದು ಟ್ವೀಟಿಸಿದ್ದರು. ಅವರಿಗೂ ಭಾರತಕ್ಕೂ ಇರುವ ನಂಟು ಏನು ಎಂಬುದನ್ನು ತಿಳಿಯ ಬೇಕೆ? ಅವರ ಮೂಲ ನಮ್ಮ ಗೋವಾ ಅಂತೆ. ಅವರನ್ನು ಕೊಂಕಣಿ ಭಾಷೆಯಲ್ಲಿ ಬಾಬು ಷ್ ಅಂತಿದ್ದರಂತೆ. ಹಾಗೆಂದರೆ 'ಹುಡುಗ' ಎಂದರ್ಥ.

ಪೋರ್ಚುಗಲ್ ದೇಶದ ಪ್ರಧಾನಿ ಅಂಟೊನಿಯೊ ಕೋಸ್ಟಾ ಅವರಂತೂ 7 ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಭೇಟಿಯಲ್ಲಿ ಕೋಸ್ಟಾ ಅವರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತವನ್ನು ಕೋರಲಾಗಿದೆ. ಆ ನಂತರ ಭದ್ರತೆ, ರಕ್ಷಣೆ, ತಂತ್ರಜ್ಞಾನ, ವ್ಯಾಪಾರ ಮುಂತಾದ ವಲಯಗಳ ಬಗ್ಗೆ ಸುದೀರ್ಘವಾದ ಚರ್ಚೆಗಳು ನಡೆದಿವೆ.[ಪ್ರವಾಸಿ ಭಾರತೀಯ ದಿವಸ: ಮೋದಿ ಭಾಷಣದ ಮುಖ್ಯಾಂಶ]

ಇದೆಲ್ಲದರ ನಂತರ ಕೋಸ್ಟಾ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸದ ಸಮಾರಂಭದಲ್ಲಿ ಪ್ರಮುಖ ಅತಿಥಿಯಾಗಿದ್ದರು. ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸ್ ನ ಕಾರ್ಯಕ್ರಮ ಮುಗಿಸಿಕೊಂಡ ನಂತರ ಕೋಸ್ಟಾ ಅವರು ಗೋವಾಕ್ಕೆ 2 ದಿನಗಳ ಭೇಟಿಗಾಗಿ ತೆರಳಲಿದ್ದಾರೆ.

ಕಾದಂಬರಿಕಾರ ತಂದೆ ಓರ್ಲಾಂಡೊ ಡ ಕೋಸ್ಟಾ

ಕಾದಂಬರಿಕಾರ ತಂದೆ ಓರ್ಲಾಂಡೊ ಡ ಕೋಸ್ಟಾ

ಕೋಸ್ಟಾ ಅವರ ತಂದೆ ಓರ್ಲಾಂಡೋ ಡ ಕೋಸ್ಟಾ ನಮ್ಮ ಗೋವಾದವರು. ಆಗ ಗೋವಾ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ಓರ್ಲಾಂಡೊ ಅವರು ತಮ್ಮ 18ನೇ ವಯಸ್ಸಿನವರೆಗೂ ಗೋವಾದ ಮಡಗಾಂವ್ ನಲ್ಲಿ ಕಳೆದಿದ್ದರು. ನಂತರ ಪೋರ್ಚುಗಲ್ ರಾಜಧಾನಿ ಲಿಸ್ಬೋನ್ ಗೆ ತೆರಳಿ ಅಲ್ಲಿನ ಪೌರರಾದರು. ಓರ್ಲಾಂಡೊ ಅವರು ಪೋರ್ಚುಗೀಸ್ ಭಾಷೆಯ ಜನಪ್ರಿಯ ಕಾದಂಬರಿಕಾರ ಹಾಗೂ ಕವಿ. ಅವರ ಅನೇಕ ಕೃತಿಗಳಿಗೆ ಬಹಳಷ್ಟು ಪುರಸ್ಕಾರಗಳೂ ಸಂದಿವೆ. ರವೀಂದ್ರನಾಥ ಠಾಗೂರರ ಪ್ರಭಾವ ಗಾಢವಾಗಿದ್ದ ಕಾರಣ ಓರ್ಲಾಂಡೊ ಅವರು ಠಾಗೂರರ ಬಗ್ಗೆ ಅನೇಕ ಪ್ರಬಂಧಗಳನ್ನೂ ಬರೆದಿದ್ದಾರೆ.

ಬಾಬುಷ್

ಬಾಬುಷ್

ಪ್ರಧಾನ ಮಂತ್ರಿ ಕೋಸ್ಟಾ ಅವರು ಮಡಗಾಂವಿನಲ್ಲಿ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಗೋವಾದಲ್ಲಿರುವ ಪೋರ್ಚುಗಲ್ ದೇಶದ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಕೋಸ್ಟಾ ಅವರನ್ನು ಈಗಲೂ ಬಾಬುಷ್ ಎಂದು ಕರೆಯುತ್ತಾರೆ. ಬಾಬುಷ್ ಎಂದರೆ ಕೊಂಕಣಿ ಭಾಷೆಯಲ್ಲಿ ಹುಡುಗ ಎಂದು ಅರ್ಥ.

ಭಾರತೀಯ ಮೂಲದ ಪ್ರಧಾನ ಮಂತ್ರಿಗಳು ಅನೇಕರಿದ್ದಾರೆ

ಭಾರತೀಯ ಮೂಲದ ಪ್ರಧಾನ ಮಂತ್ರಿಗಳು ಅನೇಕರಿದ್ದಾರೆ

ಭಾರತೀಯ ಮೂಲದ ವ್ಯಕ್ತಿಯೊಬ್ಬ ಮತ್ತೊಂದು ದೇಶದ ಪ್ರಧಾನ ಮಂತ್ರಿಯಾಗಿರುವುದು ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ. ಇತಿಹಾಸದ ಪುಟಗಳನ್ನು ತಿರುಗಿಸಿದರೆ ಭಾರತೀಯರು ಪ್ರಪಂಚದ ಅನೇಕ ಕಡೆಗೆ ವಲಸೆ ಹೋಗಿ ನೆಲೆಸಿರುವುದು ನಮಗೆ ಕಾಣಸಿಗುತ್ತದೆ. ಆಗ್ನೇಯ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕಾ ದೇಶಗಳಲ್ಲದೆ ಶಾಂತ ಮಹಾಸಾಗರದಲ್ಲಿರುವ ಅನೇಕ ದ್ವೀಪಗಳಲ್ಲಿ ಭಾರತೀಯ ಮೂಲದವರು ಪ್ರಧಾನ ಮಂತ್ರಿಗಳಾಗಿದ್ದಾರೆ.

ನಮ್ಮನ್ನು ಆಳಿದವರನ್ನೇ ನಾವು ಹೋಗಿ ಆಳುವುದು

ನಮ್ಮನ್ನು ಆಳಿದವರನ್ನೇ ನಾವು ಹೋಗಿ ಆಳುವುದು

ಗೋವಾವನ್ನು ಆಳಿದ ಪೋರ್ಚುಗಲ್ ದೇಶಕ್ಕೇ ಹೋಗಿ ಆ ದೇಶವನ್ನು ಆಳುವುದು ವಿಶೇಷ. ಇದೇ ರೀತಿ ಮುಂದೊಂದು ದಿನ ಭಾರತ ಮೂಲದವರು ಫ್ರಾನ್ಸ್ ದೇಶದ ಅಥವಾ ಬ್ರಿಟನ್ ದೇಶದ ಪ್ರಧಾನ ಮಂತ್ರಿಯಾಗುವುದು ಬಾಕಿ ಇದೆ. ನಮ್ಮನ್ನು ಆಳಿದ ದೇಶವನ್ನೇ ನಾವು ಹೋಗಿ ಆಳಿದರೆ ಹೇಗಿರುತ್ತದೆ?

English summary
Portuguese Prime Minister Antonio Costa is currently on a 7-day visit to India. He will be heading to Goa for a 2-day visit to visit his ancestral house in Margao and meet his relatives there. This is the first time that an Indian origin person has become a PM of a European nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X