ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ರಾಜಕೀಯ ಸಂಘರ್ಷ: ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ

ಕೋಝಿಕ್ಕೋಡ್ ಆರ್.ಎಸ್.ಎಸ್ ಕಚೇರಿ ಮೇಲೆ ಕಚ್ಚಾ ಬಾಂಬ್ ಎಸೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಈ ಕುರಿತು ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.

By ಅನುಶಾ ರವಿ
|
Google Oneindia Kannada News

ಕೋಝಿಕ್ಕೋಡ್, ಮಾರ್ಚ್ 3: ಕೋಝಿಕ್ಕೋಡ್ ಆರ್.ಎಸ್.ಎಸ್ ಕಚೇರಿ ಮೇಲೆ ಕಚ್ಚಾ ಬಾಂಬ್ ಎಸೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಈ ಕುರಿತು ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ಅಷ್ಟೇ ಅಲ್ಲದೆ ಕೋಝಿಕ್ಕೋಡ್ ಸಿಪಿಐಎಂ ಕಚೇರಿಗೂ ದುಷ್ಕರ್ಮಿಗಳು ಗುರುವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ. ಆರ್.ಎಸ್.ಎಸ್ ಕಚೇರಿ ಮೇಲಿನ ದಾಳಿಗೆ ಈ ರೀತಿ ಪ್ರತೀಕಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.[ಪಿಣರಾಯಿ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ ಆರ್.ಎಸ್.ಎಸ್ ನಾಯಕ!]

Political violence continues in Kerala: DYFI activists hacked

ಪಿಣರಾಯಿ ವಿಜಯನ್ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಆರ್.ಎಸ್.ಎಸ್ ನಾಯಕ ಕುಂದನ್ ಚಂದ್ರಾವತ್ ಘೋಷಿಸಿದ ಬೆನ್ನಿಗೆ ಕೋಝಿಕ್ಕೋಡ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಮೇಲೆ ಬಾಂಬ್ ಎಸೆಯಲಾಗಿತ್ತು. ಘಟನೆಯಲ್ಲಿ ಮೂವರು ಆರ್.ಎಸ್.ಎಸ್ ನಾಯಕರು ಗಾಯಗೊಂಡಿದ್ದರು. ಗಾಯಗೊಂಡವರು ಸದ್ಯ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಕೇರಳ: ಆರ್ ಎಸ್ಎಸ್ ಕಛೇರಿ ಬಳಿ ಬಾಂಬ್ ಸ್ಫೋಟ; ನಾಲ್ವರಿಗೆ ಗಾಯ]

ಕಚೇರಿ ಮೇಲಿನ ಬಾಂಬ್ ದಾಳಿಯಿಂದ ಆರ್.ಎಸ್.ಎಸ್ ಪ್ರತೀಕಾರ ತೆಗೆದುಕೊಳ್ಳಲು ಹೊರಟಿರುವಂತೆ ಕಾಣಿಸುತ್ತಿದ್ದು ಸಿಪಿಐಎಂ ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ.

ಕೇರಳದಲ್ಲಿ ತಮ್ಮ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿ ವಿರೋಧಿಸಿ ಆರ್.ಎಸ್.ಎಸ್ ಇದೀಗ ರಾಷ್ಟ್ರದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಳಿಗ್ಗೆ ಹೈದರಾಬಾದಿನಲ್ಲಿ ಒಂದು ಗುಂಪು ಪ್ರತಿಭಟನೆಯನ್ನೂ ನಡೆಸಿದೆ. ಕೇರಳ ಸರಕಾರ ಇಷ್ಟೆಲ್ಲಾ ಕೊಲೆ ನಡೆದಾಗ ಬೇಕೆಂದೇ ಮೌನವಾಗಿದೆ ಎಂದು ಆರ್.ಎಸ್.ಎಸ್ ಆರೋಪಿಸಿದೆ. (ಒನ್ ಇಂಡಿಯಾ ಸುದ್ದಿ)

English summary
Hours, after a crude bomb was hurled at an RSS office in Kozhikode, two activists of democratic youth federation of India, were hacked by miscreants. The duo was hacked in Palakkad district, Kerala on Thursday night even as a CPI(M) office in Kozhikode was set ablaze.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X