ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತರನ್ನು ಪೀಡಿಸಿದ್ದ ವಿಡಿಯೋ ಬಹಿರಂಗ, ಪೊಲೀಸ್ ಬಂಧನ

By Prasad
|
Google Oneindia Kannada News

ಲಕ್ನೋ, ಜೂನ್ 05 : ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆಯೆಂದು ದೂರು ನೀಡಲು ಬಂದ ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ಕಾನ್‌ಸ್ಟೇಬಲ್ ನನ್ನು ಸೋಮವಾರ ಬಂಧಿಸಲಾಗಿದೆ.

ಉತ್ತರಪ್ರದೇಶದ ಮೇನ್ಪುರಿಯಲ್ಲಿ ಈ ಹೇಯ ಕೃತ್ಯ ಜರುಗಿದ್ದು, ಆ ದುರುಳ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಶ್ವರಿ ಪ್ರಸಾದ್ ಎಂಬಾತನನ್ನು ಬಂಧಿಸಲಾಗಿದೆ. ಹೆಣ್ಣುಮಕ್ಕಳಿಬ್ಬರು 220 ಕಿ.ಮೀ. ದೂರದಿಂದ ದೂರು ನೀಡಲು ಬಂದಿದ್ದರು.[ದೌರ್ಜನ್ಯ ಆರೋಪ: ನೌಕಾಧಿಕಾರಿಗೆ ದೆಹಲಿಯಲ್ಲಿ ಕೋರ್ಟ್ ಮಾರ್ಶಲ್]

Police molesting girls video goes viral, cop arrested in Uttar Pradesh

ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಹತ್ತಿಕ್ಕಲು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರ ಆ್ಯಂಟಿ ರೋಮಿಯೋ ತಂಡವನ್ನು ರಚಿಸಿ, ಕಾಮುಕರನ್ನು ಹೆಡೆಮುರಿಕಟ್ಟಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಇಂಥ ಸಮಯದಲ್ಲಿ ಪೊಲೀಸ್ ಠಾಣೆಯಲ್ಲೇ ಈ ಕೃತ್ಯ ನಡೆದಿರುವುದು ನಿಜಕ್ಕೂ ಶೋಚನೀಯ.

ಮಹಿಳೆಯರ ಮೇಲೆ, ಅದರಲ್ಲೂ ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ಯಾವತ್ತೂ ಸಹಿಸುವುದಿಲ್ಲ ಎಂದು ಪೊಲೀಸ್ ಸುಪರಿಂಟೆಂಡೆಂಟ್ ರಾಜೇಶ್ ಎಸ್ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಆಧಾರದ ಮೇಲೆ ಈಶ್ವರಿ ಪ್ರಸಾದ್ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸನ್ನು ದಾಖಲಿಸಲಾಗಿದೆ.[ಬೆಳಗಾವಿಯ ಕುಡಚಿ ಠಾಣೆ ಪಿಎಸ್ ಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ]

ಈ ಘಟನೆಯನ್ನು ಈಶ್ವರಿ ಪ್ರಸಾದ್ ನಿರಾಕರಿಸಿದ್ದು, ನಾನು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಲ್ಲ. ಅವರು ಅಷ್ಟು ದೂರದಿಂದ ಬಂದಿದ್ದರಿಂದ ಅವರ ಕೈಹಿಡಿದು ಮನೆಗೆ ವಾಪಸ್ ಹೋಗೆಂದು ಹೇಳಿದೆನಷ್ಟೆ. ಅವರನ್ನು ಕಾಡಿಸಿ ಪೀಡಿಸಿಲ್ಲ ಎಂದು ಸಮಜಾಯಿಷಿ ನೀಡಿದ್ದಾನೆ. ಈತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಕಳೆದ ವಾರವಷ್ಟೇ ಉತ್ತರಪ್ರದೇಶದ ರಾಂಪುರದಲ್ಲಿ ಇಬ್ಬರು ಯುವತಿಯರ ಮೇಲೆ 14 ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅದನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಿದ್ದರು.

English summary
A police constable has been suspended and arrested in Uttar Pradesh for molesting two minor girls, who had come to give complaint against sexual harassment suffered. The incident was caught on camera and went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X