ಕಾರು ನಿಲ್ಲಿಸಿ ಬಾಲಕಿಯನ್ನು ಮಾತನಾಡಿಸಿದ ಪ್ರಧಾನಿ ಮೋದಿ

Posted By:
Subscribe to Oneindia Kannada

ಸೂರತ್, ಏಪ್ರಿಲ್ 17: ನಾಲ್ಕು ವರ್ಷದ ಬಾಲಕಿಯನ್ನು ನೋಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರನ್ನು ನಿಲ್ಲಿಸಿದ ಘಟನೆ ಸೋಮವಾರ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಪ್ರಧಾನಿಯನ್ನು ನೋಡಲು ಸಾಗರೋಪಾದಿಯಲ್ಲಿ ಸೇರಿದ್ದ ಜನರ ಮಧ್ಯೆ ಬಾಲಕಿಯೊಬ್ಬಳು ಗಮನ ಸೆಳೆದಿದ್ದಾಳೆ.

ಎರಡು ದಿನ ಭೇಟಿ ನಂತರ ಸೂರತ್ ನ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಮಧ್ಯೆ ಕೆಲ ಕಾಲ ಕಾರು ನಿಲ್ಲಿಸಿದರು. ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ಆ ಬಾಲಕಿಯನ್ನು ಪ್ರಧಾನಿ ಅವರನ್ನು ಕರೆತಂದರು. ಆಕೆಯನ್ನು ಅಪ್ಪಿಕೊಂಡ ಮೋದಿ, ಕೆಲ ಮಾತನ್ನಾಡಿ ಕಳುಹಿಸಿಕೊಟ್ಟರು.[ಸೂರತ್ ನಲ್ಲಿ ಗೋ ರಕ್ಷಣೆ ಸಂದೇಶ ಸಾರಿದ ಮುದ್ದಾದ ಮಕ್ಕಳು]

PM Narendra Modi Stops Car To Meet 4-Year-old

ಆ ಪುಟ್ಟ ಬಾಲಕಿ ಜತೆಗೆ ಮೋದಿ ಮಾತನಾಡಿದ್ದು ನೋಡಿದ ಗುಂಪು, ಜೋರಾಗಿ 'ಮೋದಿ ಮೋದಿ' ಎಂದು ಕೂಗಿದೆ. ಸೂರತ್ ನಲ್ಲಿ ರೋಡ್ ಷೋ ಕೂಡ ನಡೆಸಿದ್ದರು ಮೋದಿ. ಕಳೆದ 9 ತಿಂಗಳಲ್ಲಿ ನರೇಂದ್ರ ಮೋದಿ 8ನೇ ಬಾರಿಗೆ ಭೇಟಿ ನೀಡಿದ್ದಾರೆ. ಅಂದಹಾಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸತತ ಐದನೇ ಬಾರಿಗೆ ಜಯ ಗಳಿಸುವ ಇರಾದೆಯಲ್ಲಿ ಬಿಜೆಪಿ ತಯಾರಿ ನಡೆಸಿದೆ.

English summary
Prime Minister Narendra Modi stopped his convoy in Gujarat today for a four-year-old who caught his attention from the sea of supporters along the road up to see him off.
Please Wait while comments are loading...