ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾದಿ ಆಯೋಗದ ಕ್ಯಾಲೆಂಡರ್ ನಿಂದ ಗಾಂಧಿ ಮಾಯ!

|
Google Oneindia Kannada News

ನವದೆಹಲಿ, ಜನವರಿ 12: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಖಾದಿ ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ವತಿಯಿಂದ ಪ್ರಕಟಿಸಲಾಗುವ ವಾರ್ಷಿಕ ಕ್ಯಾಲೆಂಡರ್ ಹಾಗೂ ಡೈರಿಗಳಲ್ಲಿ ಮಹಾತ್ಮಾ ಗಾಂಧಿಯ ಚಿತ್ರವನ್ನು ರದ್ದುಗೊಳಿಸಿದ್ದಾರೆಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸದಾಗಿ ಪ್ರಿಂಟ್ ಆಗಿ ಬಂದಿರುವ 2017ರ ಕ್ಯಾಲೆಂಡರ್ ಹಾಗೂ ಡೈರಿಗಳ ಮುಖಪುಟವನ್ನು ನೋಡಿದ ಇಲಾಖೆಯ ಸಿಬ್ಬಂದಿಗೆ ಅಚ್ಚರಿ ಕಾದಿತ್ತು. ಈವರೆಗೆ ಗಾಂಧಿಯವರು ಕುಳಿತು ಚರಕದಲ್ಲಿ ನೂಲು ತೆಗೆಯುತ್ತಿರುವ ಚಿತ್ರವನ್ನು ನೋಡಿದ್ದ ಅವರು, ಈ ಬಾರಿ ಪ್ರಧಾನಿಯವರು ಚರಕದ ಮುಂದೆ ಕುಳಿತು ನೂಲು ತೆಗೆಯುತ್ತಿರುವ ಚಿತ್ರವನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಮೋದಿಯವರ ಭಾವ, ಭಂಗಿ ಮಾತ್ರ ಗಾಂಧಿಯದ್ದೇ ಆಗಿದ್ದರೂ ಇದು ವಿವಾದಕ್ಕೆ ಕಾರಣವಾಗುವ ಸಂಭವವೂ ಇದೆ ಎನ್ನಲಾಗಿದೆ.

PM Narendra Modi 'replaces' Mahatma Gandhi in Khadi Udyog's calendar, diary

ಸಿಬ್ಬಂದಿಗಳ ವಿರೋಧ: ಆಯೋಗದ ಹೊಸ ಕ್ಯಾಲೆಂಡರ್, ಡೈರಿಗಳಲ್ಲಿ ಗಾಂಧಿ ಚಿತ್ರವನ್ನು ಕೈಬಿಟ್ಟು ಮೋದಿ ಚಿತ್ರವನ್ನು ಬಳಸಿರುವುದಕ್ಕೆ ಇಲಾಖೆಯ ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆಯೋಗದ ಹಿರಿಯ ಸಿಬ್ಬಂದಿಯೊಬ್ಬರು, "ಸರ್ಕಾರದ ಈ ನಡೆ ನಮಗೆ ಬೇಸರ ತಂದಿದೆ. ಕಳೆದ ವರ್ಷವೇ ಈ ಆಲೋಚನೆಯನ್ನು ಆಯೋಗದ ಆಡಳಿತ ಮಂಡಳಿ ಸಿಬ್ಬಂದಿ ಮುಂದಿಟ್ಟಿತ್ತು. ಆಗ ನಾವೆಲ್ಲರೂ ವಿರೋಧಿಸಿದ್ದೆವು. ಆಗ, ನಮಗೆ ಮಹಾತ್ಮಾ ಗಾಂಧಿ ಚಿತ್ರವನ್ನು ತೆಗೆಯುವುದಿಲ್ಲ ಎಂಬ ಭರವಸೆ ನೀಡಲಾಗಿತ್ತು. ಆದರೀಗ, ಗಾಂಧಿ ಚಿತ್ರವನ್ನು ಕೈಬಿಟ್ಟಿದ್ದಾರೆ. ಇದು ಬೇಸರ ತಂದಿದೆ" ಎಂದಿದ್ದಾರೆ.

ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೆವಿಐಸಿ ಮುಖ್ಯಸ್ಥ ವಿನಯ್ ಕುಮಾರ್ ಸೆಕ್ಸೇನಾ, "ಇದೇನೂ ಸಂಪ್ರದಾಯ ಮುರಿದಂತಲ್ಲ. ಈ ಹಿಂದೆಯೂ ಇಂಥ ಬದಲಾವಣೆಗಳಾದ ಉದಾಹರಣೆ ಇವೆ. ಕ್ಯಾಲೆಂಡರ್, ಡೈರಿಗಳ ಮೇಲೆ ಪ್ರಧಾನಿ ಚಿತ್ರವಿದ್ದರೂ, ಮಹಾತ್ಮಾ ಗಾಂಧಿಯವರು ಖಾದಿ ಗ್ರಾಮೋದ್ಯೋಗದ ಆತ್ಮ. ಅದೆಂದಿಗೂ ಬದಲಾಗುವುದಿಲ್ಲ" ಎಂದಿದ್ದಾರೆ.

ಅಲ್ಲದೆ, ಕೆವಿಐಸಿಯ ಉತ್ಪನ್ನಗಳಲ್ಲಿ ಪ್ರಧಾನಿ ಮೋದಿ ಚಿತ್ರ ಬಳಸಿದರೆ ಅದು ತಪ್ಪಲ್ಲ. ಏಕೆಂದರೆ, ಮೇಕ್ ಇನ್ ಇಂಡಿಯಾದ ಮೂಲಕ ಪ್ರತಿ ಗ್ರಾಮಗಳು ಸ್ವಾವಲಂಬನೆ ಸಾಧಿಸಬೇಕೆಂಬ ಕನಸನ್ನು ಮೋದಿ ಹೊತ್ತಿದ್ದಾರೆ. ಅಲ್ಲದೆ, ತಾವೂ ಖಾದಿ ಧರಿಸುವ ಮೂಲಕ ಆಧುನಿಕ ಭಾರತದಲ್ಲಿ ಖಾದಿಯ ರಾಯಭಾರಿಯಾಗಿದ್ದಾರೆ. ಹಾಗಾಗಿ, ಅವರ ಫೋಟೋ ಬಳಕೆ ತಪ್ಪಲ್ಲ'' ಎಂದಿದ್ದಾರೆ.

English summary
In a surprise development, Prime Minister Narendra Modi has ‘ejected’ Father of the Nation Mahatma Gandhi in the 2017 wall calendar and table diary published by the Khadi Village Industries Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X