ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ದಿನಾಚರಣೆ : ಯೋಧರಿಗೆ ಶುಭಕೋರಿ ಟ್ವೀಟ್ ಮಾಡಿದ ಮೋದಿ

ಭಾರತೀಯ ಭೂ ಸೇನೆಗೆ ಭಾನುವಾರ (ಜನವರಿ 15) ರಂದು ಹುಟ್ಟು ಹಬ್ಬದ ಸಂಭ್ರಮ. ಈ ದಿನದಂದು ಹುತಾತ್ಮರ ವೀರಗಾಥೆಯನ್ನು ವಿಶೇಷವಾಗಿ ಸ್ಮರಿಸಲಾಗುತ್ತದೆ. ಪ್ರಧಾನಿ ಮೋದಿ ಅವರು ಸೇನಾ ದಿನಾಚರಣೆ ಅಂಗವಾಗಿ ಎಲ್ಲಾ ಯೋಧರಿಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ

By Mahesh
|
Google Oneindia Kannada News

ನವದೆಹಲಿ, ಜನವರಿ 15: ಪ್ರಧಾನಿ ಮೋದಿ ಅವರು ಸೇನಾ ದಿನಾಚರಣೆ ಅಂಗವಾಗಿ ಎಲ್ಲಾ ಯೋಧರು, ಮಾಜಿ ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯ ಸಲ್ಲಿಸುತ್ತೇನೆ. ಭಾರತೀಯ ಸೇನೆಗೆ ಅವರು ಸಲ್ಲಿಸುತ್ತಿರುವ ಅಮೂಲ್ಯ ಸೇವೆಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತೀಯ ಭೂ ಸೇನೆಗೆ ಭಾನುವಾರ (ಜನವರಿ 15) ರಂದು ಹುಟ್ಟು ಹಬ್ಬದ ಸಂಭ್ರಮ. ಈ ದಿನದಂದು ಹುತಾತ್ಮರ ವೀರಗಾಥೆಯನ್ನು ವಿಶೇಷವಾಗಿ ಸ್ಮರಿಸಲಾಗುತ್ತದೆ.

Narendra Modi greets soldiers on Army Day

ದೇಶದ ಗಡಿರಕ್ಷಣೆ, ರಾಷ್ಟ್ರದ ಸಾರ್ವಭೌಮತ್ವದ ಹಿತರಕ್ಷಣೆ ಹಾಗೂ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನಾಗರಿಕರ ಅಮೂಲ್ಯ ಪ್ರಾಣ ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಿಸುವಲ್ಲಿ ನಮ್ಮ ಸೇನೆ ಸದಾ ಮುಂಚೂಣಿಯಲ್ಲಿದೆ.


125 ಕೋಟಿ ಜನ ನೆಮ್ಮದಿಯಿಂದ ದಿನ ನಿತ್ಯ ಜೀವನ ಸಾಗಿಸಲು ನಿಮ್ಮಿಂದ ಸಾಧ್ಯವಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರತಿ ವರ್ಷ ಜನವರಿ 15 ರಂದು ಭೂ ಸೇನಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಕೊಡಗಿನ ಹೆಮ್ಮೆಯ ಪುತ್ರ ಲೆಫ್ಟಿನೆಂಟ್ ಜನರಲ್(ನಂತರ ಫೀಲ್ಡ್ ಮಾರ್ಷಲ್) ಕೆಎಂ ಕಾರ್ಯಪ್ಪ ಅವರು ಭೂ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿದ ದಿನ ಇದಾಗಿದೆ.

English summary
Prime minister Narendra Modi on Sunday(January 15) greeted all soldiers, veterans and families of those in the Indian army on Army Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X