ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧೀನಗರದಲ್ಲಿ ಮಹಿಳಾ ದಿನಾಚರಣೆಯಂದು ಮೋದಿ ಹೇಳಿದ್ದೇನು?

|
Google Oneindia Kannada News

ಗಾಂಧೀನಗರ, ಮಾರ್ಚ್ 8: ನಿಜವಾದ ಭಾರತ ಇರುವುದು ಹಳ್ಳಿಗಳಲ್ಲಿ ಎನ್ನುತ್ತಿದ್ದರು ಬಾಪೂ. 2019ರಲ್ಲಿ ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ. ಅದನ್ನು ದಾಖಲಾರ್ಹ ಆಗುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಗುಜರಾತ್ ನ ಗಾಂಧೀನಗರದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

2017ನೇ ಸಾಲಿನ ಸ್ವಚ್ಛ್ ಶಕ್ತಿ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿ, ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಸ್ವಚ್ಛತೆ ಬಹಳ ಮುಖ್ಯ ಎಂದು ಗಾಂಧಿ ಹೇಳಿದ್ದರು. ಸ್ವಚ್ಛತೆ ಬಗ್ಗೆ ಅವರಿಗಿದ್ದ ಬದ್ಧತೆಯೇ ಈ ಮಾತಿನಿಂದ ಅರ್ಥವಾಗುತ್ತದೆ. ಸ್ವಚ್ಛ ಭಾರತ ಅಭಿಯಾನಕ್ಕೆ ಅದ್ಭುತವಾದ ಕೊಡುಗೆ ನೀಡಿದ ಸರ್ ಪಂಚ್ ರನ್ನು ಈ ದಿನ ಗೌರವಿಸುತ್ತಿದ್ದೇವೆ. ನಾವು ಗೌರವಿಸುತ್ತಿರುವ ಈ ಮಹಿಳೆಯರು ಹಲವು ಮಿಥ್ಯೆಗಳನ್ನು ಮುರಿದಿದ್ದಾರೆ ಎಂದರು.[ಮೋದಿಯವರಿಗೆ ವಯಸ್ಸಾಯಿತು ಅಂತ ವ್ಯಂಗ್ಯವಾಡಿದ ರಾಹುಲ್]

PM Narendra Modi gives away Swachh Shakti 2017 awards

ಗ್ರಾಮೀಣ ಭಾರತದಲ್ಲಿ ಸಕಾರಾತ್ಮಕ ಬದಲಾವಣೆ ಹೇಗೆ ಆರಂಭವಾಗುತ್ತದೆ ಎಂಬುದನ್ನು ಇವರು ನಮಗೆ ತೋರಿಸಿದ್ದಾರೆ. ಗುಣಮಟ್ಟದ ಬದಲಾವಣೆ ತರಲು ಯತ್ನಿಸುತ್ತಿರುವ ಅವರ ನಿರ್ಧಾರ ನನಗೆ ಕಾಣಿಸುತ್ತದೆ. ಈ ವೇಳೆ ಮಹಿಳಾ ಸರ್ ಪಂಚ್ ರಲ್ಲಿ ಒಂದು ಮನವಿ ಮಾಡುತ್ತೇನೆ. ಹೆಣ್ಣು ಭ್ರೂಣ ಹತ್ಯೆ ಕೊನೆಯಾಗಲಿ. ಅದಕ್ಕಾಗಿ ಶ್ರಮಿಸಿ. ಹೆಣ್ಣು-ಗಮ್ಡು ಮಕ್ಕಳಿಬ್ಬರಿಗೂ ಸಮಾನವಾಗಿ ಶಿಕ್ಷಣ ದೊರೆಯಬೇಕು ಎಂದು ಹೇಳಿದರು.

English summary
PM Narendra Modi gives away Swachh Shakti 2017 awards at a conclave of women Sarpanchs in Gandhinagar, Gujarat on Wednesday, March 8th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X