ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ದೇಶಗಳ ಪ್ರವಾಸ ಫಲ ನೀಡಿದೆ: ನರೇಂದ್ರ ಮೋದಿ

|
Google Oneindia Kannada News

ವಾಂಕೋವರ್, ಏ.17: ಮೂರು ದೇಶಗಳ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಾಪಸ್ ಹೊರಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ ಮೊದಲು ಕೆನಡಾದ ಪ್ರಧಾನಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಮೂರೂ ದೇಶಗಳಿಗೆ ಭೇಟಿ ನೀಡಿದ್ದ ಮೋದಿ ವಿದೇಶಿ ಸಂಬಂಧ ವೃದ್ಧಿಗೆ ಗಮನ ಹರಿಸಿದ್ದರು. ಮೇಕ್ ಇನ್ ಇಂಡಿಯಾ ಕುರಿತಾಗಿ ಮೂರು ದೇಶದ ಉದ್ಯಮಿಗಳನ್ನು ಮತ್ತು ಎನ್ ಆರ್ ಐ ಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಲ್ಲದೇ ಮೇಕ್ ಇನ್ ಇಂಡಿಯಾದ ಶಕ್ತಿ ಮನವರಿಕೆ ಮಾಡಿಕೊಟ್ಟಿದ್ದರು.[ಕೆನಡಾದಲ್ಲಿ ಮೋದಿ ಭಾಷಣದ ಮುಖ್ಯಾಂಶಗಳು]

modi

ಕೆನಡಾದದಲ್ಲಿನ ದೇವಾಲಯಗಳಿಗೂ ಭೇಟಿ ನೀಡಿದ ಪ್ರಧಾನಿ ಪೂಜೆ ಸಲ್ಲಿಸಿದರು. ಯೋಗವನ್ನು ಜಗತ್ತೇ ಮಾನ್ಯ ಮಾಡಿದೆ. ಹಿಂದುತ್ವ ಎಂಬುದು ಕೇವಲ ಧರ್ಮ ಅಲ್ಲ ಅದೊಂದು ಜೀವನದ ಹಾದಿ ಎಂಬ ಸುಪ್ರೀಂಕೋರ್ಟ್ ಹೇಳಿಕೆಯನ್ನು ನಾನು ನಂಬಿದ್ದೇನೆ. ಹಿಂದುಗಳು ವೈಜ್ಞಾನಿಕವಾಗಿ ಪ್ರಕೃತಿಯಿಂದ ಲಾಭ ಪಡೆಯುವ ಸಲುವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.[ಜರ್ಮನ್ ಹೂಡಿಕೆದಾರರಿಗೆ ಮೋದಿ ಮುಕ್ತ ಆಹ್ವಾನ]

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿವವನ್ನಾಗಿ ಆಚರಿಸಲಾಗುತ್ತಿದೆ. ಇದಕ್ಕೆ ಇಡೀ ಪ್ರಪಂಚವೇ ಒಪ್ಪಿಗೆ ನೀಡಿದೆ. ವಿಶ್ವ ಸಂಸ್ಥೆಗೂ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಏರ್ ಇಂಡಿಯಾ ಸ್ಮಾರಕ ಮತ್ತು ಸಿಖ್ ಗುರುದ್ವಾರಕ್ಕೆ ಭೇಟಿ ನೀಡಿ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿದರು.

English summary
Prime Minister Narendra Modi today visited a gurudwara and a temple in Vancouver in the final leg of this three-day visit to Canada which ends On Friday. He attended an official dinner hosted by his Canadian counterpart Stephen Harper, before departing for India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X