ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಶೈಕ್ಷಣಿಕ ಪದವಿ ದಾಖಲೆ ಬಿಡುಗಡೆ: ಮಾಹಿತಿ ಆಯೋಗ

|
Google Oneindia Kannada News

ನವದೆಹಲಿ, ಜ. 9: ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ವಿಶ್ವವಿದ್ಯಾಲಯದಿಂದ 1978ರಲ್ಲಿ ಪಡೆದಿರುವ ಕಲಾ ವಿಭಾಗದ ಪದವಿಯ ದಾಖಲೆಗಳನ್ನು ಶೀಘ್ರವೇ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಈ ಕುರಿತಂತೆ ಆರ್ ಟಿಐ ಕಾರ್ಯಕರ್ತ ನೀರಜ್ ಶರ್ಮಾ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಆಯೋಗ, ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದ ದೆಹಲಿ ವಿಶ್ವವಿದ್ಯಾಲಯವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಶೀಘ್ರವೇ ದಾಖಲೆ ಬಿಡುಗಡೆಗೆ ಸೂಚನೆ ನೀಡಿದೆ.

PM Modi's degree details may release soon

ಏನಿದು ಪ್ರಕರಣ?: ಆಮ್ ಆದ್ಮಿ ಪಕ್ಷದ ಬೆಂಬಲಿಗ ಎಂದು ಹೇಳಲ್ಪಟ್ಟಿರುವ ಮಾಹಿತಿ ಹಕ್ಕು ಕಾರ್ಯಕರ್ತರಾದ ನೀರಜ್ ಶರ್ಮಾ ಎಂಬುವರು ಕೆಲ ದಿನಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯಕ್ಕೆ ಮಾಹಿತಿ ಹಕ್ಕು ನಿಯಮಗಳ ಅಡಿ ಅರ್ಜಿಯನ್ನು ಸಲ್ಲಿಸಿ, 1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ನೀಡುವಂತೆ ಕೇಳಿದ್ದರು. ಮೋದಿಯವರು ಅದೇ ವರ್ಷ ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ಬಗ್ಗೆ ದೆಹಲಿ ವಿಶ್ವವಿದ್ಯಾಲಯ ಈ ಹಿಂದೆ ಹೇಳಿತ್ತು. ಹಾಗಾಗಿ, ನೀರಜ್ ಅರ್ಜಿ ಸಲ್ಲಿಸಿದ್ದರು.

ಆದರೆ, ದೆಹಲಿ ವಿಶ್ವವಿದ್ಯಾಲಯ ನೀರಜ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅರ್ಜಿಗೆ ಉತ್ತರಿಸಿದ್ದ ವಿಶ್ವವಿದ್ಯಾಲಯದ ಮಾಹಿತಿ ಅಧಿಕಾರಿ ಮೀನಾಕ್ಷಿ ಸಹಾಯ್ ಅವರು, ನೀರಜ್ ಕೇಳುತ್ತಿರುವ ಮಾಹಿತಿ ಖಾಸಗಿಯಾಗಿರುವುದರಿಂದ ಆ ಬಗ್ಗೆ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದಿದ್ದರು.

ಹಾಗಾಗಿ, ನೀರಜ್ ಶರ್ಮಾ ಅವರು ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಆಯೋಗವು ಸೋಮವಾರ ತನ್ನ ತೀರ್ಪನ್ನು ಹೊರಹಾಕಿದೆ. ನೀರಜ್ ಅವರ ಉದ್ದೇಶವನ್ನು ಮನಗಂಡಿರುವ ಆಯೋಗ, ಪ್ರಧಾನಿ ಅವರ ಪದವಿ ಮಾಹಿತಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು ಎಂಬ ಭರವಸೆ ನೀಡಿದೆಯಲ್ಲದೆ, ಮಾಹಿತಿ ನೀಡಲು ನಿರಾಕರಿಸುವ ಮೂಲಕ ಮಾಹಿತಿ ಹಕ್ಕು ನಿಯಮಗಳ ಉಲ್ಲಂಘನೆ ಮಾಡಿರುವ ಮೀನಾಕ್ಷಿ ಅವರಿಗೆ 25 ಸಾವಿರ ರು. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕಳೆದ ವರ್ಷ, ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಪದವಿ ವಿಚಾರ ಚರ್ಚೆಗೆ ಬಂದಿತ್ತಲ್ಲದೆ, ಇದು, ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The information commission has assured that PM Modi's degree details will get released soon. On hearing the RTI activist Neeraj Sharma's petition, the commission has assured about the reveal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X