ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯ ಅಂಕಿತಾಳಿಗೆ ಬ್ಲಡ್ ಕ್ಯಾನ್ಸರ್, ಹಣ ಸಹಾಯ ಮಾಡಿ

Google Oneindia Kannada News

ನಮ್ಮ 13 ವರ್ಷದ ಮಗಳು ಅಂಕಿತಾಗೆ ಬ್ಲಡ್ ಕ್ಯಾನ್ಸರ್. ಕಳೆದ ನಲವತ್ತೈದು ದಿನಗಳಿಗೆ ಅವಳ ಚಿಕಿತ್ಸೆ ನಡೆಯುತ್ತಿದ್ದು, ನಮ್ಮ ಜಗತ್ತೇ ಅಲುಗಾಡಿದಂತಾಗಿದೆ. ಆದರೆ ನನ್ನ ಹೆಂಡತಿ ಹಾಗೂ ನನಗೆ ಈ ವಿಚಾರವನ್ನು ಅಂಕಿತಾಗೆ ಹೇಳುವ ಧೈರ್ಯ ಹಾಗೂ ಮನಸ್ಸು ಇಲ್ಲ.

ಆಕೆಗೆ ಏನು ಹೇಳೋದು, ತಾನು ಸತ್ತು ಹೋಗ್ತೀನಾ ಅಂದರೆ ಯಾವ ಉತ್ತರ ಹೇಳೋದು. ನನ್ನ ದೇಹದ ನರ-ನಾಡಿಗಳಿಂದ ಪ್ರಯತ್ನ ಪಡುತ್ತಿರುವುದು ಸಾವಿನ ಆಲೋಚನೆಯೇ ಅಂಕಿತಾಗೆ ಬರಬಾರದು ಅಂತಲ್ಲವಾ?

ನನ್ನ ಹೆಸರು ಬಸವರಾಜ್ ಪಂಚ್ ಕಾವೇರಿ. ನಾಲ್ವರು ಮಕ್ಕಳು ತಂದೆ. ಆ ಪೈಕಿ ಹಿರಿಯ ಮಗಳು ಅಂಕಿತಾಗೆ ಬ್ಲಡ್ ಕ್ಯಾನ್ಸರ್. ಬೆಳಗಾವಿಯ ಹತ್ತಿರದ ಹಳ್ಳಿ ನಮ್ಮದು. ಇನ್ನು ಮೂವತ್ತು ದಿನಗಳಲ್ಲಿ ಹದಿನೆಂಟು ಲಕ್ಷ ರುಪಾಯಿಯನ್ನು ಹೊಂದಿಸಬೇಕಾಗಿದೆ. ಇಲ್ಲದಿದ್ದರೆ ಅಂಕಿತಾಳನ್ನು ಕ್ಯಾನ್ಸರ್ ನಿಂದ ಉಳಿಸಿಕೊಳ್ಳುವುದಕ್ಕೆ ಆಗಲ್ಲ. ದೇಣಿಗೆ ರೂಪದಲ್ಲಿನ ನಿಮ್ಮ ಸಹಾಯದಿಂದ ನಮ್ಮ ಮಗಳ ಚಿಕಿತ್ಸೆಗೆ ಅನುಕೂಲವಾಗುತ್ತದೆ.

ಕೆಲ ದಿನಗಳ ಹಿಂದಿನವರೆಗೂ ಮನೆಯಿಂದ ನೂರಾರು ಕಿಲೋಮೀಟರ್ ದೂರದ ಬೆಂಗಳೂರಿಗೆ ಬಂದು ಕೂತು ಆಸ್ಪತ್ರೆಯ ಮಂಚದ ಮೇಲೆ ಮಗಳು ಮಲಗಿರುವುದನ್ನು ನೋಡುತ್ತಾ ಕೂರಬೇಕಾಗುತ್ತದೆ ಎಂದು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆಕೆಯ ಜೀವ ಉಳಿಸಲು.

Please help this girl to save from blood cancer

ದಾರಿಗಳನ್ನು ಯೋಚಿಸುತ್ತಿದ್ದೇನೆ.

ಈ ಆಸ್ಪತ್ರೆಗೆ ಬರುವ ಮುಂಚೆ ಅಂಕಿತಾ ಬೇರೆಯ ರೀತಿ ವ್ಯಕ್ತಿಯಾಗಿದ್ದಳು. ತುಂಬ ಚಟುವಟಿಕೆಯಿಂದ ಓಡಾಡಿಕೊಂಡಿದ್ದಳು. ಮನೆ ಹತ್ತಿರದಲ್ಲಿರುವ ಫಾರ್ಮ್ ನಲ್ಲಿನ ಪ್ರಾಣಿಗಳೆಂದರೆ ಆಕೆಗೆ ಬಲು ಇಷ್ಟ. ಶಾಲೆಗೆ ರಜಾ ಇರುವ ದಿನಗಳಲ್ಲಿ ಅಲ್ಲಿಯೇ ಅಂಕಿತಾ ಆಟವಾಡುತ್ತಿದ್ದಳು. ಯಾವಾಗಲೂ ಅವಳು ಆಟ ಆಡಿಕೊಂಡಿರುತ್ತಿದ್ದದ್ದನ್ನೇ ನೋಡುತ್ತಿದ್ದೆ. ಖುಷಿಯಿಂದ ಕಾಣುತ್ತಿದ್ದ ಆಕೆಯೀಗ ವೈದ್ಯರು, ನರ್ಸ್ ಗಳು ಹಾಗೂ ಮಗುಮ್ಮಾದ ಆಸ್ಪತ್ರೆ ವಾತಾವರಣದಲ್ಲಿ ಮೌನವಾಗಿದ್ದಾಳೆ.

ಆ ಭಯಂಕರ ದಿನದ ನೆನಪು ನನಗೆ ಈಗಲೂ ಇದೆ. ಜೂನ್ ಹತ್ತೊಂಬತ್ತರಂದು ಸಂಜೆ ಶಾಲೆ ಮುಗಿಸಿ ಬಂದ ಅಂಕಿತಾ ತನಗೆ ಕಾಲು ಮತ್ತು ಹೊಟ್ಟೆ ನೋವು ಅಂದಳು. ಹಣೆಯನ್ನು ಮುಟ್ಟಿ ನೋಡಿದಾಗ ಕೆಂಡದಂಥ ಜ್ವರ ಇರುವುದು ಕಂಡಬಂದಿತು.

ಆ ಜ್ವರದಿಂದ ಆರಂಭವಾದದ್ದು ಎಚ್ ಸಿಜಿ ಆಸ್ಪತ್ರೆಯ ವೈದ್ಯ ಅಮಿತ್ ಅವರ ಮುಂದೆ ಕೂರಿಸಿತು. ಅಲ್ಲಿ ಗೊತ್ತಾಗಿದ್ದೇನೆಂದರೆ ಅಂಕಿತಾಗೆ ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಇದೆ ಎಂಬ ಸಂಗತಿ. ನಾನು ವೃತ್ತಿಯಿಂದ ಕೃಷಿಕ. ಹೀಗಂದರೆ ಬ್ಲಡ್ ಕ್ಯಾನ್ಸರ್ ಎಂಬ ವಿಚಾರ ಕೂಡ ಗೊತ್ತಿರಲಿಲ್ಲ. ಅದೂ ವೈದ್ಯರು ಹೇಳಿದ ನಂತರ.

Please help this girl to save from blood cancer

ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಎಂಬುದು ಒಂದು ವಿಧದ ಬ್ಲಡ್ ಕ್ಯಾನ್ಸರ್. ಅದರಿಂದ ಕೆಂಪು ಹಾಗೂ ಬಿಳಿ ರಕ್ತಕಣಗಳು, ಅಸ್ಥಿ ಮಜ್ಜೆಯಲ್ಲಿ ಪ್ಲೇಟ್ ಲೆಟ್ ಗಳಿಗೆ ಹಾನಿಯಾಗಿ, ಉತ್ಪಾದನಯೇ ಕಡಿಮೆಯಾಗುತ್ತದೆ. ಆ ನಂತರ ಆರೋಗ್ಯವಂತ ಅಂಗಗಳಿಗೂ ಹಬ್ಬಿ ಸಾವು ಸಂಭವಿಸುತ್ತದೆ.

ಈ ಬಗೆಯ ಕ್ಯಾನ್ಸರ್ ಗೆ ತಕ್ಷಣ ಚಿಕಿತ್ಸೆ ಆರಂಭಿಸದಿದ್ದರೆ ಪರಿಸ್ಥಿತಿ ಬಹಳ ಬೇಗ ಹದಗೆಡುತ್ತದೆ. ಅಂಕಿತಾಳನ್ನು ಉಳಿಸಿಕೊಳ್ಳಲು ತಕ್ಷಣವೇ ಕಿಮೋಥೆರಪಿ ಆರಂಭಿಸಬೇಕು. ಈ ಹಂತದಲ್ಲಿ ನನ್ನ ಹೃದಯದ ಬಡಿತವೇ ತುಸು ನಿಧಾನವಾಗಿದೆ. ಈ ಕಷ್ಟದಿಂದ ಹೊರಬರಲು ದಾರಿಯಿದೆ ಎಂದು ಗೊತ್ತಾದ ಮೇಲೆ ಸ್ವಲ್ಪ ನಿರಾಳವಾದೆ.

ಆದರೆ, ಆ ನಂತರ ಗೊತ್ತಾದ ಸಂಗತಿಯಿಂದ ಪೂರ್ತಿಯಾಗಿ ಅಸಹಾಯಕನಾದೆ. ಈ ಚಿಕಿತ್ಸೆಗಾಗಿ ನಮ್ಮ ಹತ್ತಿರ ಇರುವ, ದುಡಿದಿದ್ದೆಲ್ಲವನ್ನೂ ತಂದಿಡಬೇಕು. ನನ್ನ ಮಗಳನ್ನು ಉಳಿಸಿಕೊಳ್ಳಲು ಹದಿನೆಂಟು ಲಕ್ಷ ಬೇಕಿದೆ. ಈ ಮಾತು ಕೇಳಿ ಅವಾಕ್ಕಾದೆ. ಆ ನಂತರ ವೈದ್ಯರು ಹೇಳಿದ ಯಾವ ವಿಷಯವೂ ನನ್ನ ಮನಸ್ಸಿನಲ್ಲಿ ಉಳಿಯಲಿಲ್ಲ. ನನ್ನ ಮಗಳಿಗೆ ಕ್ಯಾನ್ಸರ್ ಇದೆ. ಆಕೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ಗೊತ್ತಾಗಲಿಲ್ಲ.

Please help this girl to save from blood cancer

ಇದು ತುಂಬ ಕಷ್ಟದ ಸಮಯ. ಇಂಥ ಸನ್ನಿವೇಶದಲ್ಲಿ ಜನರ ಬೆಂಬಲ ಮಾತ್ರ ಏನಾದರೂ ನಿರ್ಧರಿಸಬಲ್ಲದು. ಆ ವಿಷಯದಲ್ಲಿ ನಾನು ಅದೃಷ್ಟವಂತ. ಸಂಬಂಧಿಕರು ಹಾಗೂ ಹಿತೈಷಿಗಳು ತಮ್ಮಿಂದ ಆದ ಧನ ಸಹಾಯ ಮಾಡಿದರು. ಅವರು ಎಷ್ಟೇ ಹೃದಯ ವೈಶಾಲ್ಯದಿಂದ ಸಹಾಯ ಮಾಡಿದರೂ ಆ ಎಲ್ಲವೂ ಸೇರಿ ಬಿಲ್ ಮೊತ್ತಕ್ಕೆ ಸರಿಹೋಗಲಿಲ್ಲ.

ನಾನು ತಿಂಗಳಿಗೆ ಎರಡು ಸಾವಿರ ಸಂಪಾದನೆ ಮಾಡುತ್ತಿದ್ದೆ. ನಾನೀಗ ಮಗಳ ಜತೆಗೆ ಬೆಂಗಳೂರಿನಲ್ಲಿ ಇರಬೇಕಾಗಿರುವುದರಿಂದ ಅದು ಕೂಡ ನಿಂತುಹೋಗಿದೆ. ನಮ್ಮ ಬಳಿಯಿದ್ದ ಚಿನ್ನ, ಬೆಲೆ ಬಾಳುವ ವಸ್ತುಗಳನ್ನೆಲ್ಲ ಈಗಾಗಲೇ ಮಾರಿದ್ದೇವೆ. ನನ್ನ ಪತ್ನಿ ಸಣ್ಣ ಮಟ್ಟದ ಕೇಟರಿಂಗ ಮಾಡುತ್ತಾರೆ. ವಾರಕ್ಕೆ ಮುನ್ನೂರು ರುಪಾಯಿ ದುಡಿಯುತ್ತಾರೆ. ಅದರಿಂದ ಸ್ವಲ್ಪ ಮಟ್ಟಿಗಿನ ಖರ್ಚು ಕಳೆಯುತ್ತಿತ್ತು.

ಬೆಂಗಳೂರಿನಲ್ಲಿ ಆಸ್ಪತ್ರೆ ಇರುವುದರಿಂದ ನಾನು- ನನ್ನ ಹೆಂಡತಿ ಸಣ್ಣದೊಂದು ರೂಮು ಮಾಡಿಕೊಂಡಿದ್ದೇವೆ. ಅದಕ್ಕೆ ದಿನಕ್ಕೆ ಮುನ್ನೂರು ರುಪಾಯಿ ಬಾಡಿಗೆ ಕೊಡಬೇಕು. ಇನ್ನೂ ಕೆಲ ತಿಂಗಳು ಬೆಂಗಳೂರಿನಲ್ಲೇ ಇರಬೇಕು ಅಂತ ವೈದ್ಯರು ಹೇಳಿದ್ದಾರೆ. ನಮ್ಮ ಖರ್ಚಿನ ಜತೆಗೆ ಅದೂ ಸೇರಿಕೊಳ್ಳುತ್ತದೆ.

Please help this girl to save from blood cancer

ಈ ವರೆಗೂ ಹೇಗೋ ಕಷ್ಟಪಟ್ಟು ನಾಲ್ಕು ಲಕ್ಷ ಒಟ್ಟು ಮಾಡಿದ್ದೇವೆ. ನನ್ನಿಂದ ಗರಿಷ್ಠವಾಗಿ ಏನು ಮಾಡುವುದಕ್ಕೆ ಸಾಧ್ಯವೋ ಮಾಡಿದ್ದೇನೆ. ಇದರಿಂದ ನಮಗೆ ಅಗತ್ಯ ಇರುವ ಮೊತ್ತದ ಅರ್ಧದಷ್ಟು ಕೂಡ ಸೇರಿಸಲು ಆಗಿಲ್ಲ. ನಮ್ಮ ಎಲ್ಲ ಮೂಗಳು ಮುಗಿದುಹೋಗಿವೆ.

ನಾನೀಗ ಏನು ಮಾಡಬಹುದು? ನನ್ನ ಮಗಳನ್ನು ಉಳಿಸಿಕೊಳ್ಳಲು ಹಣ ಎಲ್ಲಿಂದ ತರಲಿ? ಅವಳ ಸೋದರ-ಸೋದರಿಯರನ್ನು ಮನೆಗೆ ವಾಪಸ್ ಹೋದಾಗ ಹೇಗೆ ಎದುರುಗೊಳ್ಳಲಿ?

ಪ್ರತಿ ರಾತ್ರಿ ಮಲಗುವ ಮುನ್ನ ಏನಾದರೂ ಪವಾಡ ಆಗಲಿ ಎಂದು ಆ ದೇವರನ್ನು ಕೇಳಿಕೊಳ್ಳುತ್ತೀನಿ. ಆಕೆಯ ಕ್ಯಾನ್ಸರ್ ಗುಣಪಡಿಸು ಅಥವಾ ಆಕೆಯ ಚಿಕಿತ್ಸೆಗಾಗಿ ಹಣವನ್ನು ನೀಡು ಎಂದು ಕೇಳಿಕೊಳ್ಳುತ್ತೀನಿ. ಅಕಿತಾಳ ಹತ್ತಿರ ಇದ್ದು, ಕಣ್ಣೀರನ್ನು ತಡೆದುಕೊಳ್ಳುವುದು ಬಹಳ ಬಹಳ ಕಷ್ಟ. ಅವಳಿಗೆ ಮತ್ತೆ ಶಾಲೆಗೆ ಹೋಗಬೇಕು, ಅವಳ ತಮ್ಮ-ತಂಗಿಯರ ಜತೆ ಸಮಯ ಕಳೆಯಬೇಕು.

ನೆಚ್ಚಿನ ಗೆಳತಿಯರ ಕೂಡ ಆಡಬೇಕು. ಆದರೆ ಅದರ ಬದಲು ತುಂಬ ನೋವಿನ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದಾಳೆ. ಜಠರ ಸೋಂಕಿನ ದೀರ್ಘವಾದ ಚಿಕಿತ್ಸೆ ಕೊನೆಯಾಗುವುದನ್ನು ಕಾಯುತ್ತಿದ್ದೇವೆ.

ನನಗೆ ಏನನಿಸುತ್ತಿದೆ ಅಂದರೆ ಆಕೆಯ ತಂದೆಯಾಗಿ ವಿಫಲನಾಗಿದ್ದೇನೆ. ಸರಿಯಾದ ಸಮಯಕ್ಕೆ ಹಣ ಹೊಂದಿಸಲಿಲ್ಲ ಅಂದರೆ ಆಕೆಯನ್ನು ಕಳೆದುಕೊಳ್ಳುತ್ತೀನಿ. ನನಗೆ ಎಷ್ಟು ಸಮಯ ಅಂಕಿತಾ ಜತೆಗೆ ಇರಲು ಸಾಧ್ಯವೋ ಅಷ್ಟು ಹೊತ್ತು ಇದ್ದೇನೆ. ಆದರೆ ನಾನೀಗ ಏನು ಮಾಡಲಿ?

ಒಟ್ಟುಗೂಡಿಸಲು ಸಾಧ್ಯವೇ ಇಲ್ಲದ ಮೊತ್ತವನ್ನು ಆಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಬೆನ್ನಟ್ಟಿ ಹೊರಡಲಾ ಅಥವಾ ಆಕೆಯ ಪಾಲಿಗಿರುವ ಅತ್ಯಂತ ಕಡಿಮೆ ಸಮಯವನು ಜತೆಗೆ ಕಳೆಯಲಾ?

ನೀವು ದೇಣಿಗೆ ನೀಡುವ ಮೂಲಕ ಬಸವರಾಜ್ ಗೆ ನೆರವಾಗಬಹುದು. ಕೆಟ್ಟೊ ಮೂಲಕ ದೇಣಿಗೆಯನ್ನು ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X