ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಬೇಸಿಗೆ ರಜೆ ಆರಂಭವಾಯಿತು. ಪ್ರವಾಸ ಹೋಗೋಣ ಎಂದು ಮಕ್ಕಳು ಹಠ ಹಿಡಿದು ಕುಳಿತಿದ್ದಾರೆ. ದೂರದ ಊರಿಗೆ ಪ್ರವಾಸಕ್ಕೆ ಹೋಗಲು ಕೆಲಸದ ನಡುವೆ ಬಿಡುವು ಸಿಗುವುದಿಲ್ಲ. ಒಂದೆರಡು ದಿನ ಕೆಲಸಕ್ಕೆ ಬಿಡುವು ಮಾಡಿಕೊಂಡು ವಿಹರಿಸೋಣ ಎಂದರೆ ಎಲ್ಲಿಗೆ ಹೋಗುವುದು? ಎಂಬ ಪ್ರಶ್ನೆ.

ಒಂದೆರಡು ದಿನದ ಪ್ರವಾಸಕ್ಕಾಗಿ ನೀಲ ಕಡಲಿಗೆ ವಿಶಾಲವಾಗಿ ತೆರೆದುಕೊಂಡಿರುವ ಬೇಕಲ ಕೋಟೆಗೆ ಭೇಟಿ ನೀಡಬಹುದು. ಹಿರಿಯರು, ಕಿರಿಯರು ಮತ್ತು ಯುವಕರನ್ನು ಆಕರ್ಷಿಸುವ ಪ್ರವಾಸಿ ತಾಣ ಬೇಕಲ ಕೋಟೆ. ವಿಶಾಲವಾದ ನೀಲಿ ಕಡಲು, ಅಲ್ಲಲ್ಲಿ ಸಾಗುವ ದೋಣಿ, ಸೂರ್ಯ ಅಸ್ತಮಿಸುವ ರಮಣೀಯ ದೃಶ್ಯಗಳನ್ನು ನೋಡಲು ಕೋಟೆಗೆ ಭೇಟಿ ನೀಡಬಹುದು.

bekal fort

ಕೇರಳ ರಾಜ್ಯದ ಕಾಸರಗೋಡಿನಿಂದ 9 ಕಿ.ಮೀ.ದೂರದಲ್ಲಿರುವ ಬೇಕಲ ಕೋಟೆ, ಕರ್ನಾಟಕದ ಕೊಡಗು ಜಿಲ್ಲೆಗೂ ಹತ್ತಿರವಾಗಿದೆ. ಮಂಗಳೂರಿನಿಂದ 63 ಕಿ.ಮೀ.ದೂರದಲ್ಲಿದೆ. ಒಂದೆರಡು ದಿನ ವಾಸ್ತವ್ಯ ಹೂಡಲು ಪ್ರವಾಸಿಗರಿಗಾಗಿ ಕೇರಳದ ಪ್ರವಾಸೋದ್ಯಮ ಇಲಾಖೆ ಇಲ್ಲಿ ಸುಂದರ ಬೀಚ್ ಕ್ಯಾಂಪ್ ರೆಸಾರ್ಟ್ ನಿರ್ಮಾಣಮಾಡಿದೆ. ಅದರಲ್ಲಿ ರೆಸ್ಟೋರೆಂಟ್ ಮತ್ತು ಅತ್ಯಾಧುನಿಕ ಕಾಟೇಜ್‌ಗಳಿವೆ.

ವಿಶೇಷತೆ ಏನು? : ಪ್ರಕೃತಿ ರಮಣೀಯ, ಇತಿಹಾಸ ಸ್ಮರಣೀಯ ಬೇಕಲ ಕೋಟೆ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಲ್ಲೊಂದು. ಇಲ್ಲಿ ಸಿನಿಮಾ ಮತ್ತು ಧಾರವಾಹಿಯ ಅನೇಕ ಚಿತ್ರೀಕರಣಗಳು ನಡೆದಿವೆ. 385 ವರ್ಷಗಳ ಚಾರಿತ್ರಿಕ ಬೇಕಲ ಕೋಟೆಯನ್ನು ಕಟ್ಟಿದವನು ಬಿದನೂರಿನ ಕನ್ನಡಿಗ ಅರಸ ಶಿವಪ್ಪ ನಾಯಕ. ಇಂದಿಗೂ ಈ ಅತ್ಯಂತ ಮನೋಹರವಾದ ಕೋಟೆಯನ್ನು ನೋಡುವಾಗ ಸಿಗುವ ಖುಷಿಯೇ ಬೇರೆ .

ಬೇಕಲ ಕೋಟೆಯ ವಿಹಂಗಮ ನೋಟದ ಜೊತೆಗೆ ಕೋಟೆ ಮೇಲೆ ನಿಂತು ನೀಲಿಗೆಂಪು ಕಡಲಂಚಿನಲ್ಲಿ ಸೂರ್ಯಾಸ್ತ ವೀಕ್ಷಣೆಯ ಸೊಬಗನ್ನು ಸವಿಯುವುದೇ ಅದ್ಭುತ ಅನುಭವ. ಕೋಟೆಯ ಪಕ್ಕದಲ್ಲೇ ಬೀಚ್ ಪಾರ್ಕ್ ಇದೆ. ಮಕ್ಕಳಿಗಾಗಿ ಚಿಲ್ಡ್ರನ್ಸ್ ಪಾರ್ಕ್, ಒಂಟೆ ಸವಾರಿ, ರೆಸ್ಟೋರೆಂಟ್, ಐಸ್ ಕ್ರೀಮ್ ಪಾರ್ಲರ್ ಎಲ್ಲವೂ ಇದೆ

ಪ್ರಯಾಣ ಹೇಗೆ? : ಬೇಕಲ ಕೋಟೆಗೆ ಹೋಗುವುದು ಬಲು ಸುಲಭ. ಬಸ್ ಅಥವ ರೈಲಿನ ಮೂಲಕ ಕಾಸರಗೋಡಿಗೆ ಬಂದರೆ ಸ್ಥಳೀಯ ಬಸ್ಸಿನ ಮೂಲಕ 20 ನಿಮಿಷದಲ್ಲಿ ಕೋಟೆ ತಲುಪಬಹುದು. ಸ್ವಂತ ಅಥವ ಖಾಸಗಿ ವಾಹನದಲ್ಲಿ ಮಂಗಳೂರಿನ ಪುತ್ತೂರು, ಸುಳ್ಯ ಭಾಗದಿಂದ ಬರುವ ಪ್ರವಾಸಿಗರು ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೇಕಲ ಕೋಟೆಗೆ ತೆರಳಬಹುದು.

English summary
The 300-year-old Bekal Fort in Kasaragod, Kerala is one of the largest and best-preserved forts in Kerala. Its best place for one day trip. Shivappa Nayaka of Bednore constructed the fort in 1650 AD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X