ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪಾ ನಂಗೆ ನೀನು ಬೇಕಪ್ಪಾ ಅನಲು ತಂದೆಯೇ ಇಲ್ಲ

By Vanitha
|
Google Oneindia Kannada News

ಬೆಂಗಳೂರು, ಫೆಬ್ರವರಿ,17: ಸಿಯಾಚಿನ್ ದುರಂತ, ಅಪಘಾತ, ಉಗ್ರರ ದಾಳಿ ಹೀಗೆ ಹಲವಾರು ದುರ್ಘಟನೆಯಿಂದ ನಮ್ಮ ನಾಡು 10ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿದೆ. ಅವರ ಕುಟುಂಬ ದುಃಖ ಸಾಗರದಲ್ಲಿ ಮುಳುಗಿ ಅವರ ಮಮತೆ, ವಾತ್ಸಲ್ಯ, ಪ್ರೀತಿಯ ಮಾತುಗಳನ್ನೇ ಮೆಲುಕು ಹಾಕುತ್ತಿವೆ.

'ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ' ಎನ್ನುವ ಗಂಡನಿಲ್ಲ, 'ಅಪ್ಪ ಅಪ್ಪಾ ನನಗೆ ನೀನು ಬೇಕಪ್ಪಾ' ಎನ್ನಲು ತಂದೆಯೇ ಇಲ್ಲ, 'ಊರೇನೇ ಅಂದರೂ ನೀ ನನ್ನ ದೇವರು' ಎನ್ನುವ ಮಗನೂ ಇಲ್ಲ ಈ ಎಲ್ಲಾ ಭಾವದ ಕೊರತೆ ಕಾಡುತ್ತಿರುವುದು ಮೈಸೂರು, ಹಾಸನ, ಧಾರವಾಡದ ವೀರ ಯೋಧರ ಮನೆಯಲ್ಲಿ.

ನಮ್ಮ ನಾಡಿನ ಯೋಧರು ಪ್ರಾಣತೆತ್ತರೂ ಅವರ ಆತ್ಮಸ್ಥೈರ್ಯ, ವಿಶ್ವಾಸ, ಹೋರಾಟದ ಭಾವ ಅವರವರ ಮನೆಯಲ್ಲಿ, ದೇಶದಲ್ಲಿ ಉಳಿದಿದೆ. ಇದಕ್ಕೆ ಸಾಕ್ಷಿ ಹಾಸನ ಹಾಗೂ ಧಾರವಾಡ ಯೋಧರ ಹೆಂಡತಿಯ ಮಾತುಗಳು. 'ಮುಂದೆ ನಾನು ನನ್ನ ಮಕ್ಕಳನ್ನು ಸೇನೆಗೆ ಸೇರಿಸುತ್ತೇನೆ, ಅವಕಾಶ ಸಿಕ್ಕರೆ ನಾನು ದೇಶ ಸೇವೆ ಮಾಡುತ್ತೇನೆ'.[ಸಿಯಾಚಿನ್ ಪವಾಡ: ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]

ನಾಡು ಒಂದೆಡೆ ದುಃಖ ಸಾಗರದಲ್ಲಿ ಮುಳುಗಿದರೆ, ಇನ್ನೊಂದೆಡೆ ದೇಶ ವಿರೋಧಿ ಘೋಷಣೆಗಳ ಗದ್ದಲ, ಪ್ರತಿಭಟನೆಯ ಕಾವಿನಲ್ಲಿಯೇ ಮುಳುಗಿದೆ. ದಿನಕ್ಕೊಂದು ತಿರುವು ಪಡೆದು ದೇಶದ ಶಾಂತಿ ಹದಗೆಡಿಸುವ ಕೆಲಸವಾಗುತ್ತಿದೆ. ಯೋಧರಿಗೆ ಒಂದು ನಮನ ಸಲ್ಲಿಸಿ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದನ್ನು ಬಿಟ್ಟು ನೆಮ್ಮದಿಗೆ ಧಕ್ಕೆ ತರುತ್ತಿವೆ. ಇದರ ಜೊತೆಗೆ ಇನ್ನಷ್ಟು ಸುದ್ದಿಗಳು ಇಲ್ಲಿವೆ. [ಪಿಟಿಐ]

ದುಃಖತಪ್ತ ವಿದಾಯ

ದುಃಖತಪ್ತ ವಿದಾಯ

ವೀರಮರಣವನ್ನಪ್ಪಿದ ಯೋಧ ಸುನೀಲ್ ಸೂರ್ಯವಂಶಿ ಪತ್ನಿ ರೇಖಾ ತನ್ನ ಮಗು ತಾನ್ಯ ಜೊತೆ ಗಂಡನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಾಗ ದುಃಖ ತಡೆದು ನಿಂತು ಶ್ರದ್ದಾಂಜಲಿ ಸಲ್ಲಿಸಿದರು. ಈ ಯೋಧನ ಅಂತ್ಯ ಸಂಸ್ಕಾರ ಮಹಾರಾಷ್ಟ್ರದ ಸಾತಾರಾದಲ್ಲಿ ನಡೆಯಿತು. ಮಗುವಿನ ಮೊಗದಲ್ಲಿ ಅಪ್ಪಾ..ಅಪ್ಪಾ..ನನಗೆ ನೀನು ಬೇಕಪ್ಪಾ ಎಂಬ ಭಾವವಿತ್ತು.

ಗಂಡನನ್ನು ಕಳೆದುಕೊಂಡ ಪತ್ನಿ ನೋವು ಕೇಳುವವರು ಯಾರು?

ಗಂಡನನ್ನು ಕಳೆದುಕೊಂಡ ಪತ್ನಿ ನೋವು ಕೇಳುವವರು ಯಾರು?

ವೀರಯೋಧ ಧಾರವಾಡದ ಹನುಮಂತಪ್ಪ ಕೊಪ್ಪದ ಅವರ ಹೆಂಡತಿ ತಮ್ಮ ಮಗಳಾದ ನೇತ್ರಾಳನ್ನು ಹಿಡಿದುಕೊಂಡು ಗಂಡನ ಪ್ರೀತಿ, ವಾತ್ಸಲ್ಯ, ಸಂತೋಷದ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ, ಮುಂದಿನ ಬದುಕಿನ ಹಾದಿಯನ್ನು ಯೋಚಿಸುತ್ತಿದ್ದಾಳೆ.

ಮಹೇಶ್ ಅಂತ್ಯ ಸಂಸ್ಕಾರ

ಮಹೇಶ್ ಅಂತ್ಯ ಸಂಸ್ಕಾರ

ಸಿಯಾಚಿನ್ ದುರಂತದಲ್ಲಿ ವೀರಮರಣವನ್ನಪ್ಪಿದ್ದ ಯೋಧ ಮಹೇಶ್ ಅವರ ಅಂತ್ಯ ಸಂಸ್ಕಾರ ಹುಟ್ಟೂರಾದ ಪಶುಪತಿಯಲ್ಲಿ ನಡೆಯಿತು. ಈತನ ಇವರ ಹೆಸರಿನಲ್ಲಿ ಎಚ್ ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಾಜ ಬಹುದ್ದೂರ್ ರಾಹುಲ್

ರಾಜ ಬಹುದ್ದೂರ್ ರಾಹುಲ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸ್ಸಾಂನಲ್ಲಿ ನಡೆದ ಜನ ಜಾಗರಣ ಸಮಾರಂಭದಲ್ಲಿ ಅಹೋಮ್ ಎಂಬ ಬುಡಕಟ್ಟು ಜನಾಂಗದ ವೇಷಭೂಷಣ ತೊಟ್ಟು ಕೈಯಲ್ಲಿ ಖಡ್ಗ ಹಿಡಿದು ಖುಷಿಪಟ್ಟರು. ಇವರ ಜೊತೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ತರೂಣ್ ಗೊಗೊಯ್ ಇದ್ದಾರೆ.

 ಸ್ವಿಸ್ ವಾಚ್ ಸರದಾರ

ಸ್ವಿಸ್ ವಾಚ್ ಸರದಾರ

ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಸೋಟ್ ಕಂಪನಿಯ ಸ್ವಿಸ್ ವಾಚ್ ಧರಿಸಿ ಜನರೆದುರು ನಿಂತದ್ದು ಹೀಗೆ.

ನಾನೀಗ ಪದವೀಧರ

ನಾನೀಗ ಪದವೀಧರ

ಬಾಲಿವುಡ್ ನಟ ಶಾರುಖ್ ಖಾನ್ ಅವರು ಹನ್ಸರಾಜ್ ಕಾಲೇಜಿನಲ್ಲಿ ತಮ್ಮ ಪದವಿ ಮುಗಿಸಿದ್ದು, 28 ವರ್ಷಗಳ ನಂತರ ಪ್ರಮಾಣ ಪತ್ರ ಪಡೆದಿದ್ದಾರೆ. ಇದು ಅತ್ಯಂತ ವಿಶೇಷ ಸಂದರ್ಭ. 1988ರಲ್ಲಿ ಕಾಲೇಜು ಬಿಟ್ಟ ನಂತರ ಕಾಲೇಜಿನ ಆವರಣಕ್ಕೆ ಕಾಲಿಟ್ಟು ಸಂಭ್ರಮಿಸಿದರು.

ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ವಿರೋಧ

ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ವಿರೋಧ

ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರು ಜೆಎನ್ ಯು ವಿಶ್ವವಿದ್ಯಾಲಯದ ಉಪಕುಲಪತಿ ವಿರುದ್ಧ ನವದೆಹಲಿಯಲ್ಲಿ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ದೆಹಲಿ ಪೊಲೀಸರ ಬಂಧನದಲ್ಲಿ ಎಸ್ಎಆರ್ ಗಿಲಾನಿ

ದೆಹಲಿ ಪೊಲೀಸರ ಬಂಧನದಲ್ಲಿ ಎಸ್ಎಆರ್ ಗಿಲಾನಿ

ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್ಎಆರ್ ಗಿಲಾನಿ ಅವರನ್ನು ಮಂಗಳವಾರ ಬಂಧಿಸಿದ ದೆಹಲಿ ಪೊಲೀಸರು ಅವರನ್ನು ಪಟಿಯಾಲದ ಕೋರ್ಟ್ ಗೆ ಕರೆದುಕೊಂಡು ಹೋಗುವ ಕ್ಷಣ.

English summary
Relatives paying their last respects to Mahesh, one of the soldiers killed in the recent avalanche at Siachen, during his funeral procession in Mysuru. Actor Shahrukh Khan showing his graduation degree of 1989 which he received at Hansraj College on Tuesday at the launch of his new film song at the college in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X