ಮದುರೈನಲ್ಲಿ ಜಲ್ಲಿಕಟ್ಟು, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್...ಮುಂದೇನು?

Subscribe to Oneindia Kannada

ಎಷ್ಟೆಲ್ಲ ವಿರೋಧ, ಆಕ್ಷೇಪ, ಅಸಮಾಧಾನದ ಮಧ್ಯೆ ಕೂಡ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿವ ದಿನ ಬಂದೇ ಬಿಟ್ಟಿತು. ಇನ್ನು ನಾಲ್ಕು ವರ್ಷದ ಅವಧಿಯಲ್ಲಿ ಅಮೆರಿಕ ಭವಿಷ್ಯ, ಅದರ ಜತೆಗೆ ಜಗತ್ತಿನ ಇತರ ದೇಶಗಳ ಜತೆಗೆ ಅಮೆರಿಕದ ಸಂಬಂಧ ಹೇಗಿರುತ್ತದೆ ಎಂಬ ಕುತುಹೂಲ ಸಹಜವಾಗಿ ಎಲ್ಲೆಡೆ ಇದೆ.

ಗುರುವಾರವಷ್ಟೇ ಗಣ್ಯರ ಔತಣ ಕೂಟದಲ್ಲಿ ಟ್ರಂಪ್ ದಂಪತಿ ಪಾಲ್ಗೊಂಡಿದ್ದಾರೆ. ಇನ್ನು ಮುಂದೆ ಅಮೆರಿಕದಲ್ಲಿ ಟ್ರಂಪ್ ಯುಗಾರಂಭ. ಜಲ್ಲಿಕಟ್ಟು ಕ್ರೀಡೆ ನಿಷೇಧ ವಿರೋಧಿಸಿ ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗಳಾಗುತ್ತಿವೆ. ಅದರಲ್ಲೂ ಮದುರೈನಲ್ಲಿ ಪರಿಸ್ಥಿತಿ ತೀರಾ ಬಿಗಡಾಯಿಸಿದೆ. ಅಲ್ಲಿನ ಚಿತ್ರರಂಗ ಕೂಡ ಹೋರಾಟದಲ್ಲಿ ಭಾಗವಹಿಸಿದೆ.[ಟ್ರಂಪ್ ಮೇಲಿನ ಸಿಟ್ಟು ಬಟ್ಟೆ ಮೇಲೆ ಯಾಕೆ ಚೆಲುವೆ?]

ಭಾರತದ ಗಣರಾಜ್ಯೋತ್ಸವ ಆಚರಣೆಗೆ ಇನ್ನು ವಾರಗಳ ಕಾಲವಷ್ಟೇ ಇದೆ. ಆ ಅದ್ಧೂರಿ ಅಚರಣೆಗಾಗಿ ಅದ್ಭುತ ತಯಾರಿ ನಡೆಯುತ್ತಿದೆ. ಆ ಸಿದ್ಧತೆಯ ಚಿತ್ರ ಇಲ್ಲಿದೆ. ಇದರ ಜತೆಗೆ ಮಕ್ಕಳು ಕೂಡ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ದೆಹಲಿಯಲ್ಲಿ ಹಿಂದೂ ಸೇನೆ ಸಂಭ್ರಮಪಟ್ಟಿದೆ. ಅದಕ್ಕೆ ಕಾರಣ ಏನು ಗೊತ್ತೆ? ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಕಾರ್ಯಕ್ರಮ. ಬೆಟ್ಟದ ಮೇಲಿನ ನೆಲ್ಲಿ, ಸಮುದ್ರದ ಉಪ್ಪಿನ ನಂಟು ಅಂದರೆ ಇದೇ ಇರಬೇಕು.

ಔತಣ ಕೂಟದಲ್ಲಿ ಡೊನಾಲ್ಡ್ ಟ್ರಂಪ್ ದಂಪತಿ

ಅಮೆರಿಕದಲ್ಲಿ ಹೊಸ ಚಕ್ರ ಉರುಳುತಿದೆ. ಜನವರಿ 20ರಿಂದ ಅಮೆರಿಕ ಅಧ್ಯಕ್ಷ ಗಾದಿ ಮೇಲೆ ಡೊನಾಲ್ಡ್ ಟ್ರಂಪ್ ವಿರಾಜಮಾನರಾಗಲಿದ್ದಾರೆ. ವಾಷಿಂಗ್ಟನ್ ನಲ್ಲಿ ಗುರುವಾರ ಗಣ್ಯರು ಹಾಗೂ ದಾನಿಗಳಿಗಾಗಿ ನಡೆದ ಔತಣ ಕೂಟದಲ್ಲಿ ನಿಯೋಜಿತ ಉಪಾಧ್ಯಕ್ಷ ಮೈಕ್ ಪೆನ್ಸ್, ಮತ್ತವರ ಪತ್ನಿ ಕರೇನ್, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲನಿಯಾ ಭಾಗವಹಿಸಿದ್ದರು.

ದಕ್ಷಿಣ ಕೊರಿಯಾದಲ್ಲೂ ಚಳಿಗಾಲ

ದಕ್ಷಿಣ ಕೊರಿಯಾದ ಪ್ರಖ್ಯಾತ ಸ್ಥಳಗಳಲ್ಲೊಂದಾದ ಸೋಲ್ ನಲ್ಲಿರುವ ಹದಿನಾಲ್ಕನೇ ಶತಮಾನದ ಗ್ಯೇನ್ಗೋಬಾಕ್ ಅರಮನೆ ಸುತ್ತ ಮಂಜು ಆವರಿಸಿದೆ. ಅದರ ಗೇಟ್ ಎದುರು ಛತ್ರಿ ಆಶ್ರಯದಲ್ಲಿ ವ್ಯಕ್ತಿಯೊಬ್ಬರು ನಿಂತಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ರೈಲ್ ರೋಕೋ ಚಳವಳಿ

ಜಲ್ಲಿಕಟ್ಟು ನಿಷೇಧ ಮಾಡಿದ ಕ್ರಮ ವಿರೋಧಿಸಿ ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆಗಳಾಗುತ್ತಿವೆ. ಜಲ್ಲಿಕಟ್ಟು ನಿಷೇಧ ಖಂಡಿಸಿ ಯುವಕರು ಮದುರೈನ ತಮುಕ್ಕಂನಲ್ಲಿ ರೈಲ್ ರೋಕೋ ಚಳವಳಿ ನಡೆಸಿದರು.

ಮಕ್ಕಳ ಸಂಭ್ರಮ

ಗಣರಾಜ್ಯೋತ್ಸವ ಆಚರಣೆಗೆ ಇನ್ನು ಐದು ದಿನ ಬಾಕಿ ಇದೆ. ಪಶ್ಚಿಮ ಬಂಗಾಲದ ಬಿರ್ ಭುಮ್ ಜಿಲ್ಲೆಯಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದು ಮಕ್ಕಳು ಸಂಭ್ರಮ ಪಟ್ಟ ಪರಿ ಇದು.

ಹಿಂದೂ ಸೇನಾ ಸಂಭ್ರಮಾಚರಣೆ

ಅಮೆರಿಕ ಅಧ್ಯಕ್ಷ ಸ್ಥಾನ ಏರಲಿರುವ ಡೊನಾಲ್ಡ್ ಭಾವಚಿತ್ರಕ್ಕೆ ಮಾಲೆ ಹಾಕಿ, ಅದಕ್ಕೆ ಸಿಹಿ ಅರ್ಪಿಸಿ ಗುರುವಾರ ದೆಹಲಿಯಲ್ಲಿ ಹಿಂದೂ ಸೇನಾ ಸಂಘಟನೆ ಸದಸ್ಯರು ಸಂಭ್ರಮಾಚರಣೆ ಮಾಡಿದರು.

ಗಣರಾಜ್ಯೋತ್ಸವ ತಯಾರಿ

ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿರುವ ಪೂರ್ವ ತಯಾರಿಯ ಚಿತ್ರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

English summary
Jallikattu protest in Madurai and other national and international events represnt through PTI photos.
Please Wait while comments are loading...