ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ನಾಸಿಕ್ ಕುಂಭಮೇಳದಲ್ಲಿ ಪವಿತ್ರ ಸ್ನಾನ

By Mahesh
|
Google Oneindia Kannada News

ನಾಸಿಕ್, ಸೆ.14: ಕುಂಭಮೇಳ ಪ್ರಯುಕ್ತ ಗೋದಾವರಿ ನದಿ ತೀರದಲ್ಲಿ ಎರಡನೇ ಶಾಹಿ ಸ್ನಾನ್ (ಪವಿತ್ರ ಸ್ನಾನ) ಸಂಪನ್ನವಾಗಿದೆ. ನಾಸಿಕ್ ಮತ್ತು ತ್ರಿಂಬಕೇಶ್ವರದಲ್ಲಿ ನಡೆದ ಶಾಹಿ ಸ್ನಾನಕ್ಕೆ ದೇಶದ ವಿವಿಧ ಭಾಗಗಳಿಂದ ಮಠಾಧೀಶರು, ಸಾಧು-ಸಂತರು ಸೇರಿದಂತೆ ಭಕ್ತಾದಿಗಳು ಆಗಮಿಸಿದ್ದರು.

ಇವರಲ್ಲದೆ ನಿರ್ಮೋಹಿ, ನಿರ್ವಾಣಿ, ದಿಗಂಬರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ನದಿಯಲ್ಲಿ ಮಿಂದೆದ್ದು ಪುನೀತರಾದರು. ಭಕ್ತರ ಪವಿತ್ರಸ್ನಾಕ್ಕಾಗಿ ಮೂರು ಕಡೆ ಸ್ನಾನ ಘಟ್ಟಗಳನ್ನು ನಿರ್ಮಿಸಲಾಗಿತ್ತು.

ಮೊದಲಿಗೆ ನಿರ್ಮೋಹಿ, ನಿರ್ವಾಣಿ, ದಿಗಂಬರ್, ತಪೋವನದಿಂದ ರಾಮ ಕುಂಡದವರೆಗೂ ಭಕ್ತಾದಿಗಳು ಸ್ನಾನದಲ್ಲಿ ಮಿಂದೆದ್ದು ಪುನೀತರಾದರು. ತ್ರಿಂಬೇಶ್ವರ, ಮಹಂತ ಮತ್ತು ಮಠಾಧಿಪತಿಗಳು ಶಿವನ ಭಕ್ತರಾಗಿದ್ದು, ತಪೋವನದಲ್ಲಿ ಪವಿತ್ರ ಸ್ನಾನ ಮಾಡಿದರೆ ಕೆಲವರು ರಾಮಕುಂಡದಲ್ಲಿ ಶಾಹಿ ಸ್ನಾನ ಮಾಡಿದರು.

ಮಹಾ ಸಿಎಂರಿಂದ ವೀಕ್ಷಣೆ: ದೇಶದ ನಾನಾ ಭಾಗಗಳಿಂದ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಭದ್ರತಾ ವ್ಯವಸ್ಥೆ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಖುದ್ದು ಪರಿಶೀಲನೆ ನಡೆಸಿದರು.

ಸಿಐಎಸ್‌ಎಫ್, ಸಿಆರ್‌ಪಿಎಫ್, ಬಿಎಸ್‌ಎಫ್ , ಕ್ಷಿಪ್ರ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಮೊದಲ ಪವಿತ್ರ ಸ್ನಾನ ಆಗಸ್ಟ್ 29ರಂದು ನಡೆದಿತ್ತು, ಮೂರನೇನೆ ಮತ್ತು ನಾಲ್ಕನೇ ಶಾಹಿ ಸ್ನಾನ ಇದೇ 18 ಮತ್ತು 25ರಂದು ನಡೆಯಲಿದೆ.

ಎರಡನೇ ಶಾಹಿ ಸ್ನಾನ್ (ಪವಿತ್ರ ಸ್ನಾನ) ಸಂಪನ್ನ

ಎರಡನೇ ಶಾಹಿ ಸ್ನಾನ್ (ಪವಿತ್ರ ಸ್ನಾನ) ಸಂಪನ್ನ

ಕುಂಭಮೇಳ ಪ್ರಯುಕ್ತ ಗೋದಾವರಿ ನದಿ ತೀರದಲ್ಲಿ ಎರಡನೇ ಶಾಹಿ ಸ್ನಾನ್ (ಪವಿತ್ರ ಸ್ನಾನ) ಸಂಪನ್ನವಾಗಿದೆ.

ರಾಮಕುಂಡದಲ್ಲಿ ಶಾಹಿ ಸ್ನಾನ

ರಾಮಕುಂಡದಲ್ಲಿ ಶಾಹಿ ಸ್ನಾನ

ತ್ರಿಂಬೇಶ್ವರ, ಮಹಂತ ಮತ್ತು ಮಠಾಧಿಪತಿಗಳು ಶಿವನ ಭಕ್ತರಾಗಿದ್ದು, ತಪೋವನದಲ್ಲಿ ಪವಿತ್ರ ಸ್ನಾನ ಮಾಡಿದರೆ ಕೆಲವರು ರಾಮಕುಂಡದಲ್ಲಿ ಶಾಹಿ ಸ್ನಾನ ಮಾಡಿದರು.

ಮಹಾ ಸಿಎಂರಿಂದ ವೀಕ್ಷಣೆ

ಮಹಾ ಸಿಎಂರಿಂದ ವೀಕ್ಷಣೆ

ದೇಶದ ನಾನಾ ಭಾಗಗಳಿಂದ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಭದ್ರತಾ ವ್ಯವಸ್ಥೆ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಖುದ್ದು ಪರಿಶೀಲನೆ ನಡೆಸಿದರು.

ಬಂದೋಬಸ್ತ್ ನಲ್ಲಿ ನಡೆದ ಪವಿತ್ರಸ್ನಾನ

ಬಂದೋಬಸ್ತ್ ನಲ್ಲಿ ನಡೆದ ಪವಿತ್ರಸ್ನಾನ

ಸಿಐಎಸ್‌ಎಫ್, ಸಿಆರ್‌ಪಿಎಫ್, ಬಿಎಸ್‌ಎಫ್, ಕ್ಷಿಪ್ರ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸ್ ಬಂದೋಬಸ್ತ್ ನಲ್ಲಿ ಪವಿತ್ರಸ್ನಾನ ನಡೆಸಲಾಯಿತು.

ಮೊದಲ ಪವಿತ್ರ ಸ್ನಾನ ಆಗಸ್ಟ್ 29ರಂದು

ಮೊದಲ ಪವಿತ್ರ ಸ್ನಾನ ಆಗಸ್ಟ್ 29ರಂದು

ಮೊದಲ ಪವಿತ್ರ ಸ್ನಾನ ಆಗಸ್ಟ್ 29ರಂದು ನಡೆದಿತ್ತು, ಮೂರನೇನೆ ಮತ್ತು ನಾಲ್ಕನೇ ಶಾಹಿ ಸ್ನಾನ ಇದೇ 18 ಮತ್ತು 25ರಂದು ನಡೆಯಲಿದೆ.

ಗೋದಾವರಿ ನದಿ ತೀರದಲ್ಲಿ ಸ್ನಾನ

ಗೋದಾವರಿ ನದಿ ತೀರದಲ್ಲಿ ಸ್ನಾನ

ಗೋದಾವರಿ ನದಿ ತೀರದಲ್ಲಿ ಕುಂಭಮೇಳ ಅಂಗವಾಗಿ ಪವಿತ್ರ ಸ್ನಾನ ನಡೆಸಲಾಯಿತು.

English summary
Braving sporadic heavy rain, lakhs of pilgrims took a holy dip during the second 'shahi snan' (royal bath) at the ongoing Simhastha Kumbh Mela in Nashik-Trimbakeshwar here, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X