ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಮದುವೆ ನೋಡಿ, ಮನುಷ್ಯತ್ವ ಅಂದರೆ ಇದೇ ಅಲ್ಲವೆ?

ಎಂಥ ಮನುಷ್ಯ ಜೀವದ ಕಲ್ಲು ಹೃದಯವನ್ನೂ ಕರಗಿಸುವ ಘಟನೆಗಳು ನಡೆಯುತ್ತವೆ. ಮಹಾರಾಷ್ಟ್ರದಲ್ಲೂ ಅಂಥದ್ದೊಂದು ವಿಶೇಷ ಘಟಿಸಿದೆ. ಆಸಿಡ್ ದಾಳಿ ಸಂತ್ರಸ್ತೆಯನ್ನು ರವಿಸಿಂಗ್ ಎಂಬಾತ ಕೈ ಹಿಡಿದಿದ್ದಾರೆ. ಆ ಮೂಲಕ ಆದರ್ಶ ಎಂಬುದಕ್ಕೆ ನಿದರ್ಶನವಾಗಿದ್ದಾರೆ

|
Google Oneindia Kannada News

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಥಾಣೆಯಲ್ಲಿ ಆದರ್ಶ ಹಾಗೂ ಮಾನವೀಯತೆ ಬಿಂಬಿಸುವ ಮದುವೆಯೊಂದು ಆಗಿದೆ. ಆಸಿಡ್ ದಾಳಿ ಸಂತ್ರಸ್ತೆ ಲಲಿತಾ ಅಶೋಕ್ ಬೆನ್ ಬನ್ಸಿ ಎಂಬಾಕೆಯನ್ನು ರವಿ ಸಿಂಗ್ ಕೈ ಹಿಡಿದಿದ್ದಾರೆ. ರವಿ ಸಿಂಗ್ ಅಂಥವರ ಸಂತತಿ ಇನ್ನೂ ಸಾವಿರ ಸಾವಿರವಾಗಲಿ. ನಮ್ಮ ಮಧ್ಯೆಯೇ ಬದುಕುತ್ತಿರುವ ಇಂಥ ಹೆಣ್ಣುಮಕ್ಕಳ ಬದುಕಲ್ಲೂ ರವಿ ಸಿಂಗ್ ಅಂತಹವರ ಪ್ರವೇಶವಾಗಲಿ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗಲೇ ಚುನಾವಣೆಯ ಹುರುಪಿನಲ್ಲಿದ್ದಾರೆ. ತೆಲಂಗಾಣ ರಾಜ್ಯದ ನಲ್ಗೊಂಡದಲ್ಲಿ ಮನೆ ಮನೆ ಪ್ರಚಾರದಲ್ಲಿ ನಗು ಬೀರುತ್ತಾ ನೀರು ಸ್ವೀಕರಿಸುತ್ತಿರುವ ಅವರ ಭಂಗಿಯಲ್ಲಿ ಮತ್ತೇನಾದರೂ ವಿಶೇಷ ಕಾಣುತ್ತಿದೆಯಾ? ಪಕ್ಷ ಬಲಪಡಿಸಲು ದೇಶಾದ್ಯಂತ ಪ್ರವಾಸ ಮಾಡುತ್ತಿರುವ ಶಾಗೆ ಸಿಕ್ಕುತ್ತಿರುವ ಸ್ವಾಗತದ ಪರಿಯಿದು.[ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!]

ಆದರೆ, ಇದಕ್ಕೂ ಚುನಾವಣೆ ಫಲಿತಾಂಶಕ್ಕೂ ಸಂಬಂಧ ಇರಬಹುದು ಅಂತ ಅನ್ನಿಸುವುದಿಲ್ಲ. ನಿಮಗೆ ಏನನ್ನಿಸುತ್ತದೆ? ಇನ್ನು ಇಂಗ್ಲೆಂಡ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರಿಗೆ ಅಲ್ಲಿನ ರಾಜ-ರಾಣಿ ಸಂತಾಪ ಸೂಚಿಸಿದ್ದಾರೆ. ಇಷ್ಟು ಮತ್ತಿಷ್ಟು ಸುದ್ದಿ-ಚಿತ್ರಗಳು ನಿಮ್ಮ ಗಮನಕ್ಕಿರಲಿ.

ಹುಬ್ಬಳ್ಳಿ ನಿಲ್ದಾಣದಲ್ಲಿ ಮೈಸೂರ ತಪನೆ

ಹುಬ್ಬಳ್ಳಿ ನಿಲ್ದಾಣದಲ್ಲಿ ಮೈಸೂರ ತಪನೆ

ಹುಬ್ಬಳ್ಳಿಯಿಂದ ರೈಲು ಓಡೋಡಿ ಮೈಸೂರು ಸೇರುವ ಮುನ್ನ ಸಿಂಗಾರ-ಬಂಗಾರ ಆಗಿ ರೈಲು ನಿಲ್ದಾಣದಲ್ಲಿ ಕಂಡುಬಂದಿದ್ದು ಹೀಗೆ. ಮೇ ಇಪ್ಪತ್ಮೂರರಂದು ಮೈಸೂರಿಗೆ ಮೊದಲ ಪ್ರಯಾಣಕ್ಕೆ ಸಿದ್ಧವಾಗಿದ್ದ ಹೊಸ ರೈಲು ಮೊದಲಿಗೆ ಹುಬ್ಬಳ್ಳಿಯಿಂದ ಬೆಗಳೂರು ತಲುಪುತ್ತದೆ. ಆ ನಂತರ ಮೈಸೂರಿಗೆ ಪ್ರಯಾಣ ಮುಂದುವರಿಸುತ್ತದೆ.

ಮೃತರಿಗೆ ಸಂತಾಪ

ಮೃತರಿಗೆ ಸಂತಾಪ

ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಐಎಸ್ ಐಎಸ್ ಹೊತ್ತುಕೊಂಡಿದೆ. ಇಪ್ಪತ್ತಕ್ಕೂ ಹೆಚ್ಚು ಮಂದಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು. ಮೃತರ ಗೌರವಾರ್ಥವಾಗಿ ಬ್ರಿಟನ್ ನ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್ ಬಕಿಂಗ್ ಹ್ಯಾಮ್ ನ ಅರಮನೆಯಲ್ಲಿ ಗಾರ್ಡನ್ ಸಿಟಿ ಔತಣಕೂಟಕ್ಕೂ ಮುನ್ನ ಒಂದು ನಿಮಿಷ ಮೌನ ಆಚರಿಸಿದರು.

ಕಮಲ ಕಹಳೆ

ಕಮಲ ಕಹಳೆ

ತೆಲಂಗಾಣದ ನಲ್ಗೊಂಡದಲ್ಲಿ ಮನೆಮನೆ ಪ್ರಚಾರ ಕೈಗೊಂಡಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಪಾಕಿಸ್ತಾನಕ್ಕೆ ಪಕ್ಕಾ ಒದೆ

ಪಾಕಿಸ್ತಾನಕ್ಕೆ ಪಕ್ಕಾ ಒದೆ

ಜಮ್ಮು-ಕಾಶ್ಮೀರದ ನೌಶೇರಾದಲ್ಲಿ ಪಾಕಿಸ್ತಾನದ ಒಳನುಸುಳುಕೋರರ ವಿರುದ್ಧದ ಕ್ರಮದ ಭಾಗವಾಗಿ ಭಾರತೀಯ ಸೇನೆ ನಡೆಸಿದ ದಾಳಿಯ ವಿಡಿಯೋದಿಂದ ಸೆರೆ ಹಿಡಿಯಲಾದ ದೃಶ್ಯವಿದು.

ಮಾನವೀಯ ಮದುವೆ

ಮಾನವೀಯ ಮದುವೆ

ಆಸಿಡ್ ದಾಳಿ ಸಂತ್ರಸ್ತೆ ಲಲಿತಾ ಅಶೋಕ್ ಬೆನ್ ಬನ್ಸಿ ಎಂಬಾಕೆಯನ್ನು ರವಿ ಸಿಂಗ್ ಮುಂಬೈನ ಥಾಣೆಯಲ್ಲಿ ಮದುವೆಯಾದ ನಂತರ ನವದಂಪತಿ ಪ್ರೇಮದ ಚಿಹ್ನೆಯನ್ನು ತೋರಿದ ರೀತಿಯಿದು.

English summary
Here is the photos from PTI about various national and International events. Such as BJP national president Amit Shah visit to Telanagana..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X