ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಲಿದ 'ಶಕ್ತಿಮಾನ್' ಹೆಸರಲ್ಲಿ ಪೆಟ್ರೋಲ್ ಬಂಕ್

|
Google Oneindia Kannada News

ಡೆಹರಾಡೂನ್, ಏಪ್ರಿಲ್, 29: ಉತ್ತರಾಖಂಡದ ಬಿಜೆಪಿ ಮುಖಂಡರಿಂದ ಹಲ್ಲೆಗೊಳಗಾಗಿ ಪ್ರಾಣ ಕಳೆದುಕೊಂಡಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಲಾಗುತ್ತಿದೆ.

ಉತ್ತರಾಖಂಡದ ಡಿಜಿಪಿ ಬಿಎಸ್ ಸಿಂಧು ಶಕ್ತಿಮಾನ್ ಹೆಸರಿನ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಈ ಮೂಲಕ ಅಗಲಿದ ಪೊಲೀಸ್ ಕುದುರೆಯ ನೆನಪನ್ನು ಚಿರಸ್ಥಾಯಿ ಮಾಡಲು ಇಲಾಖೆ ಮುಂದಾಗಿದೆ.[ಯಮಯಾತನೆ ಅನುಭವಿಸಿ ನಮ್ಮನ್ನಗಲಿದ 'ಶಕ್ತಿಮಾನ್']

uttarakhand

ಪೊಲೀಸ್ ಜನ ಕಲ್ಯಾಣ ಸಮಿತಿಯಿಂದ ಪೆಟ್ರೋಲ್ ಬಂಕ್ ನಿರ್ವಹಣೆ ಮಾಡಲಾಗುತ್ತದೆ. ಪೊಲೀಸ್ ಪ್ರಧಾನ ಕಚೇರಿಯಿಂದ 250 ಮೀಟರ್ ದೂರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.[ಕಾಲು ಮುರಿದು ಕೊಂದವರಿಗೆ 'ಶಕ್ತಿಮಾನ್' ಪತ್ರ]

ಡೆಹರಾಡೂನ್ ನಲ್ಲಿ ಮಾರ್ಚ್ 14 ರಂದು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಬಿಜೆಪಿ ಮುಖಂಡ ಗಣೇಶ್ ಜೋಶಿ ಸೇರಿದಂತೆ ಅನೇಕರು ಪೊಲೀಸ್ ಕುದುರೆ ಶಕ್ತಿಮಾನ್ ಮೇಲೆ ಅಮಾನವೀಯ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಕುದುರೆಯ ಕಾಲು ಮುರಿದು ಗಂಭೀರ ಗಾಯವಾಗಿತ್ತು. ನಿರಂತರ 45 ದಿನಗಳ ಕಾಲ ಯಮಯಾತನೆ ಅನುಭವಿಸಿದ ಕುದುರೆ ಚಿಕಿತ್ಸೆಗೆ ಸ್ಪಂದಿಸದೆ ಏಪ್ರಿಲ್ 20 ರಂದು ಸಾವನ್ನಪ್ಪಿತ್ತು.

English summary
Uttarakhand DGP B S Sidhu today laid the foundation stone of a petrol pump at the police lines here to be named after Shaktiman, the police horse who died recently of injuries sustained during a BJP protest rally in the city last month. Located about 250 metres from the police lines, the petrol pump will be run by Police Jana Kalyan Samiti, a police lines staff said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X