ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರಿಗೆ ಆಗಸ್ಟ್ ಗಿಫ್ಟ್: ಇಂಧನ ದರ ಗಣನೀಯ ಇಳಿಕೆ

|
Google Oneindia Kannada News

ನವದೆಹಲಿ, ಆ. 01: ಗ್ರಾಹಕರಿಗೆ ತೈಲ್ ಕಂಪನಿಗಳುಜುಲೈ ತಿಂಗಳ ಅಂತ್ಯಕ್ಕೆ ಭರ್ಜರಿ ಗಿಫ್ಟ್ ನೀಡಿವೆ. ಪೆಟ್ರೋಲ್ ದರವನ್ನು ಲೀಟರ್​ಗೆ 2.43 ರೂ.ನಷ್ಟು ಕಡಿಮೆ ಮಾಡಲಾಗಿದ್ದು, ಡೀಸೆಲ್ ದರ ಲೀಟರ್​ಗೆ 3.60 ರೂ.ನಷ್ಟು ಇಳಿಕೆಯಾಗಿದೆ.

ನೂತನ ದರಗಳು ಜುಲೈ 31 ರ ಮಧ್ಯರಾತ್ರಿಯಿಂದಲೇ ಜಾರಿಯಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲದ ಬೆಲೆ ಗಣನೀಯವಾಗಿ ಕುಸಿದ ಪರಿಣಾಮ ತೈಲ ದರದಲ್ಲಿ ಇಳಿಕೆ ಮಾಡಲಾಗಿದೆ.[ಗ್ರಾಹಕರಿಗೆ ಬಂಪರ್, ಲೀಟರ್ ಪೆಟ್ರೋಲ್ 4 ರು. ಕಡಿತ ಸಾಧ್ಯತೆ]

petrol

ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಗಳು ಈಮ ಬಗ್ಗೆ ಅಧಿಕೃತ ಘೋಷಣೆ ಮಾಡಿವೆ. ಜುಲೈ 16 ರಂದು ಪೆಟ್ರೋಲ್ ದರವನ್ನು 2 ರು. ಇಳಿಕೆ ಮಾಡಲಾಗಿತ್ತು. ಜುಲೈ ತಿಂಗಳಲ್ಲಿ ಮೂರು ಸಾರಿ ದರ ಪರಿಷ್ಕರಣೆ ಮಾಡಿದಂತೆ ಆಗಿದೆ.

ಬೆಂಗಳೂರಿಗರು ಎಷ್ಟು ನೀಡಬೇಕು?
ಬೆಂಗಳೂರಿಗರು ಸದ್ಯ ಪೆಟ್ರೋಲ್ ಗೆ 68.27 ನೀಡಿದರೆ ಸಾಕು. ಡೀಸೆಲ್ ಗೆ 48.99 ರು. ನೀಡಿದರೆ ಸಾಕು. ಒಟ್ಟಿನಲ್ಲಿ ಪೆಟ್ರೋಲ್ 70 ರ ಗಡಿಯಿಂದ ಕೆಳಕ್ಕೆ ಬಂದಿದ್ದು ಡೀಸೆಲ್ ಸಹ 50 ರ ಗಡಿಯಿಂದ ಕೆಳಕ್ಕೆ ಇಳಿದಿದೆ.[ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]

ಎಲ್ ಪಿಜಿ ಗ್ರಾಹಕರಿಗೂ ಸಿಹಿಸುದ್ದಿ
ಇದೇ ವೇಳೆ ಸಬ್ಸಿಡಿಯೇತರ ಸಿಲೆಂಡರ್​ಗಳ ಬೆಲೆ ಕೂಡ ಪರಿಷ್ಕೃತಗೊಂಡಿದ್ದು, 14.2 ಕೆಜಿ ಎಲ್​ಪಿಜಿ ಸಿಲೆಂಡರ್​ನ ಬೆಲೆ 23.50 ರೂ.ನಷ್ಟು ಇಳಿಕೆಯಾಗಿದೆ. ಆದರೆ ಸಬ್ಸಿಡಿ ಸಿಲೆಂಡರ್​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

English summary
The government on Friday cut the petrol prices by Rs 2.43 per litre and diesel by Rs 3.60 per litre. This is the third reduction in rates this month, with effect from midnight tonight. Petrol in Delhi will cost Rs 64.47 per litre from tomorrow instead of Rs 66.90 at present, while a litre of diesel will cost Rs 46.12 as against Rs 49.72 currently, Indian Oil Corp (IOC) said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X