ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ ಅಂತ್ಯಕ್ಕೆ ಬಂಪರ್ : ಪೆಟ್ರೋಲ್ 2 ರು. ಕಡಿಮೆ

|
Google Oneindia Kannada News

ನವದೆಹಲಿ, ಆಗಸ್ಟ್. 31: ನಿರೀಕ್ಷೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿದ್ದು ಪ್ರತಿ ಲಿಟರ್ ಪೆಟ್ರೋಲ್ ದರ 2 ರೂಪಾಯಿ ಇಳಿಕೆಯಾಗಿದ್ದರೆ ಡೀಸೆಲ್ ದರ 50 ಪೈಸೆ ಇಳಿಕೆಯಾಗಿದೆ.

ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಸ್ವಾತಂತ್ರ್ಯ ದಿನದಂದು ಕೊನೆಯ್ದಾಗಿ ತೈಲ ದರ ಇಳಿಕೆ ಮಾಡಲಾಗಿತ್ತು. ಲೀಟರ್ ಪೆಟ್ರೋಲ್ 1.27 ಮತ್ತು ಡೀಸೆಲ್ 1.17 ರುಪಾಯಿ ಕಡಿಮೆ ಮಾಡಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಇದು ಮೂರನೇ ಬಾರಿ ಇಳಿಕೆ ಮಾಡಿದಂತೆ ಆಗಿದೆ.[ಏ‍ಷ್ಯಾ ಮಾರ್ಕೆಟ್‌ನಲ್ಲಿ ಬ್ಯಾರಲ್ ಕಚ್ಚಾ ತೈಲಕ್ಕೆ 39 ಡಾಲರ್!]

petrol

ಬೆಂಗಳೂರಿಗರು ಎಷ್ಟು ನೀಡಬೇಕು?
ಬೆಂಗಳೂರಿಗರು ಪೆಟ್ರೋಲ್ ಗೆ 65 ರು. ನೀಡಿದರೆ ಸಾಕು. ಡೀಸೆಲ್ ಗೆ 47.32ರು. ನೀಡಿದರೆ ಸಾಕು. 70 ರ ಗಡಿಯಿಂದ ಕೆಳಕ್ಕೆ ಬಂದಿದ್ದ ಪೆಟ್ರೋಲ್ ಕಡಿಮೆಯಾಗಿದ್ದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.[ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!]

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲ ದರ ಗಣನೀಯ ಇಳಿಕೆಯಾಗಿತ್ತು. ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲ 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಕಳೆದ ವಾರ ವಹಿವಾಟಿನಲ್ಲಿ ಬ್ಯಾರೆಲ್‌ ಕಚ್ಚಾತೈಲದ 13 ಸೆಂಟ್‌ ಗಳಷ್ಟು ಕಡಿಮೆಯಾಗಿ 39 ಡಾಲರ್ ಗೆ ಇಳಿದಿತ್ತು.

ಚೀನಾ ಅರ್ಥ ವ್ಯವಸ್ಥೆಯ ಮಂದಗತಿ, ಇರಾನ್ ಪರಮಾಣು ಒಪ್ಪಂದ, ಅಮೆರಿಕ ಡಾಲರ್ ಬಲವರ್ಧನೆ ಕಚ್ಚಾತೈಲ ಬೆಲೆ ಇಳಿಕೆಗೆ ಕಾರಣವಾಗಿತ್ತು. ಈ ಬೆಳವಣಿಗೆಳು ಕೇಂದ್ರ ಸರ್ಕಾರಕ್ಕೆ ಅಪಾರ ಪ್ರಮಾಣದ ಆರ್ಥಿಕ ಉಳಿತಾಯ ತಂದುಕೊಡಲಿದೆ.

English summary
Petrol price on Monday was cut by Rs 2 per litre while diesel rate was reduced by 50 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X