ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರು ಪೆಟ್ರೋಲ್ ಗೆ 70 ರೂ. ಕೊಟ್ರೆ ಸಾಕು

|
Google Oneindia Kannada News

ನವದೆಹಲಿ, ನ. 1: ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸತತ ಆರನೇ ಬಾರಿಗೆ ಪೆಟ್ರೋಲ್ ದರದಲ್ಲಿ ಇಳಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ದರವನ್ನು ಲೀಟರಿಗೆ 2.41 ರೂ. ಮತ್ತು ಡೀಸೆಲ್‌ ದರವನ್ನು 2.25 ರೂ. ಇಳಿಕೆ ಮಾಡಲಾಗಿದೆ.

ಪರಿಷ್ಕೃತ ಅಕ್ಟೋಬರ್ 31 ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಮುಖ್ಯವಾಗಿ ಡಿಸೇಲ್ ದರ 12 ದಿನದ ಅವಧಿಯಲ್ಲಿ ಎರಡನೇ ಸಾರಿ ಇಳಿಕೆಯಾಗಿದೆ[ಐದು ವರ್ಷದಲ್ಲೇ ಮೊದಲ ಬಾರಿ ಡಿಸೇಲ್ ದರ ಇಳಿಕೆ]

petrol

ಬೆಂಗಳೂರಿನಲ್ಲಿ ಬೆಲೆ ಎಷ್ಟಾಗುತ್ತೆ?
ಬೆಂಗಳೂರಿಗರು ಇಲ್ಲಿಯವೆರೆಗೆ ಲೀಟರ್ ಪಟ್ರೋಲ್‌ಗೆ 73. ರೂಪಾಯಿ ನೀಡಬೇಕಿತ್ತು. ಅಂತೆಯೇ ಡಿಸೇಲ್‌ಗೆ 6೦ ರೂ. ನೀಡಬೇಕಿತ್ತು. ಆದರೆ ಇಳಿಕೆಯ ನಂತರ ಬೆಂಗಳೂರಿಗರು ಪೆಟ್ರೋಲ್ ಗೆ 70.45 ರೂ. ಮತ್ತು ಡಿಸೇಲ್ ಗೆ 57.94 ನೀಡಿದರೆ ಸಾಕು. ಕಳೆದ ವರ್ಷ ನವೆಂಬರ್ ವೇಳೆಗೆ 77 ರೂ, ಇದ್ದ ಪೆಟ್ರೋಲ್ ಈಗ 70 ರೂಪಾಯಿಗೆ ಬಂದು ನಿಂತಿದೆ.[ತೈಲಕ್ಕೆ ಇಳಿಕೆ ಭಾಗ್ಯ]

ಇಳಿಕೆಗೇನು ಕಾರಣ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಿರುವುದು, ಡಾಲರ್‌ ಎದುರು ಸ್ಥಿರತೆ ಕಾಯ್ದುಕೊಂಡ ರೂಪಾಯಿ, ಹೆಚ್ಚಿದ ಜಿಡಿಪಿ ದರ ಎಲ್ಲವೂ ತೈಲ ಬೆಲೆ ಇಳಿಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಬಹುದು.

English summary
Petrol price was cut by Rs 2.41 a litre, the sixth reduction since August, and diesel by Rs 2.25 per litre on back of falling international oil rates. The reduction in rates of petrol and diesel, which was deregulated for the first time in more than a decade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X