ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರ ಕುಸಿತ, ಪೆಟ್ರೋಲ್ ಬೆಲೆ 1 ರೂ.ಇಳಿಕೆ

|
Google Oneindia Kannada News

ನವದೆಹಲಿ, ಅ. 15 : ನಿರೀಕ್ಷೆಯಂತೆ ಪೆಟ್ರೋಲ್ ದರದಲ್ಲಿ ಕಡಿತ ಮಾಡಲಾಗಿದೆ. ಪೆಟ್ರೋಲ್ ಲೀಟರ್‌ಗೆ 1 ರೂ. ಇಳಿಕೆಯಾಗಿದ್ದು ಡಿಸೇಲ್‌ ದರದಲ್ಲಿ ಯಾವುದೇ ಇಳಿಕೆಯಾಗಿಲ್ಲ.

ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಕಡಿಮೆಯಾದ ಕಾರಣ ಪೆಟ್ರೋಲ್ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ.['ಮಹಾ' ಚುನಾವಣೆ ಫಲಿತಾಂಶದ ನಂತರ ತೈಲ ಇಳಿಕೆ]

petrol

ಹೊಸ ದರದ ಅನ್ವಯ ಬೆಂಗಳೂರು ನಾಗರಿಕರು ಲೀಟರ್ ಪೆಟ್ರೋಲ್‌ಗೆ 73 ರೂ. ನೀಡಬೇಕಿದೆ. ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆ ಫಲಿತಾಂಶದ ನಂತರ ಡಿಸೇಲ್ ಬೆಲೆ ಸಹ ಇಳಿದರೆ ಆಶ್ಚರ್ಯವಿಲ್ಲ.

ಇರಾಕ್‌ ಮತ್ತು ಲಿಬಿಯಾ ತಮ್ಮ ಸಾಮರ್ಥ್ಯಕ್ಕೂ ಮೀರಿ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಚೀನಾ ಆರ್ಥಿಕ ವ್ಯವಸ್ಥೆಯ ದಿಢೀರ್‌ ಬೆಳವಣಿಗೆ, ರಷ್ಯಾ ಮತ್ತು ಅಮೆರಿಕದ ಇಬ್ಬಗೆಯ ನೀತಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತಕ್ಕೆ ಕಾರಣವಾಗಿತ್ತು.[ಐದು ವರ್ಷದಲ್ಲೇ ಅತಿ ಕಡಿಮೆ ಹಣದುಬ್ಬರ ದಾಖಲು]

ಅಸ್ತಿತ್ವ ಕಾಯ್ದುಕೊಂಡ ಭಾರತೀಯ ರೂಪಾಯಿ, ಹಣದುಬ್ಬರ ಇಳಿಕೆ, ಮಾರುಕಟ್ಟೆಯಲ್ಲಿ ಹೆಚ್ಚಿದ ಬಂಡವಾಳ ವಹಿವಾಟು, ರಿಸರ್ವ್ ಬ್ಯಾಂಕ್ ಕ್ರಮಗಳು ಪೆಟ್ರೋಲ್ ಬೆಲೆ ಇಳಿಕೆಗೆ ಕಾರಣವಾದವು. ಅಲ್ಲದೇ ತೈಲವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ರಾಷ್ಟ್ರಗಳ ನಡುವೆ ಹೆಚ್ಚಿದ ಪೈಪೋಟಿಯೂ ದರ ಇಳಿಕೆಗೆ ಕಾರಣವಾಯಿತು.

ಕಳೆದ ಒಂದೂವರೆ ತಿಂಗಳಲ್ಲಿ ಒಟ್ಟು ನಾಲ್ಕು ಸಾರಿ ಪೆಟ್ರೋಲ್ ದರ ಇಳಿಕೆಯಾಗಿದೆ. 2014ರ ಆಗಸ್ಟ್‌ 1 ರಂದು ಲೀಟರ್‌ಗೆ 79 ರೂ ನೀಡುತ್ತಿದ್ದ ಬೆಂಗಳೂರು ನಾಗರಿಕ ಈಗ 73 ರೂ. ನೀಡಿದರೆ ಸಾಕು. ಅಂದರೆ 6 ರೂಪಾಯಿಗಳಷ್ಟು ಇಳಿಕೆಯಾಗಿದೆ.

English summary
Petrol price has been cut by Rs. 1 per litre, but the first reduction in diesel rates in over five years will have to wait till completion of assembly polls. The revised prices will be applicable from the midnight of 14th and 15th October. The price revision was due on Wednesday evening but was announced a day before ahead of polling in Maharashtra and Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X