ತೈಲ ದರ ಅಲ್ಪ ಇಳಿಕೆ: ಪೆಟ್ರೋಲ್ 89 ಪೈಸೆ ಕಡಿಮೆ

Written by:
Subscribe to Oneindia Kannada

ನವದೆಹಲಿ, ಜೂನ್, 30 : ಕೇಂದ್ರ ಸರ್ಕಾರ ವಾಹನ ಸವಾರರ ಬಾಯನ್ನು ಕೊಂಚ ಸಿಹಿ ಮಾಡಿದೆ. ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ 89 ಪೈಸೆ ಕಡಿಮೆಯಾಗಿದ್ದರೆ ಡೀಸೆಲ್ ದರವನ್ನು 49 ಪೈಸೆ ಕಡಿತ ಮಾಡಲಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಗಳು ಇಳಿಕೆಯಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕಳೆದ ಎರಡು ತಿಂಗಳಿನಿಂದ ತೈಲ ದರ ಏರಿಕೆಯ ಹಾದಿಯಲ್ಲೇ ಸಾಗಿತ್ತು. ಆದರೆ ಕೇಂದ್ರ ಸರ್ಕಾರ ಅಂತಿಮವಾಗಿ ಸಿಹಿ ಸುದ್ದಿ ನೀಡಿದೆ.[ಸಿದ್ದರಾಮಯ್ಯ ಅವ್ರೇ, ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ]

petrol

ಪ್ರತಿ 15 ದಿನಗಳಿಗೆ ಒಮ್ಮೆ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಕಳೆದ ಎರಡು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ತೈಲ ದರ ಇಳಿಕೆ ಭಾಗ್ಯ ಕಂಡಿದೆ.[ಲೀಟರ್ ಪೆಟ್ರೋಲ್‌ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

ಬೆಂಗಳೂರಲ್ಲಿ ಎಷ್ಟು ನೀಡಬೇಕು?
ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ನಂತರ ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಗೆ 69.56 ರು. ನೀಡಬೇಕು ಮತ್ತು ಡೀಸೆಲ್ ಗೆ 58.51 ರು, ನೀಡಬೇಕಾಗಿದೆ.

English summary
Petrol price was on Thursday cut by 89 paise a litre and diesel by 49 paise a litre, the first decrease in rates in two months.
Please Wait while comments are loading...