ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೈನಂದಿನ ಪರಿಷ್ಕರಣೆ: ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ

By Mahesh
|
Google Oneindia Kannada News

ನವದೆಹಲಿ, ಜೂನ್ 25: ದೈನಂದಿನ ಪರಿಷ್ಕರಣೆಯಂತೆ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಮಾಡಲಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 1.77 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 88 ಪೈಸೆ ಇಳಿಕೆ ಮಾಡಲಾಗಿದೆ.

ಎಸ್ಸೆಮ್ಮೆಸ್ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯ ತಿಳಿಯೋದು ಹೀಗೆ...ಎಸ್ಸೆಮ್ಮೆಸ್ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯ ತಿಳಿಯೋದು ಹೀಗೆ...

ಕಳೆದ ವಾರದಿಂದ ದೈನಂದಿನ ಇಂಧನ ದರ ಪರಿಷ್ಕರಣೆ ಜಾರಿಗೆ ಬಂದಿದೆ. ಕಳೆದ 15 ವರ್ಷಗಳಿಂದ ಇದ್ದ ವ್ಯವಸ್ಥೆಯಾದ ತಿಂಗಳ ಮೊದಲ ದಿನ 16ನೇ ದಿನ ದರ ಪರಿಷ್ಕರಣೆಯನ್ನು ಬದಿಗೊತ್ತಿ ಪ್ರತಿದಿನ ದರ ಪರಿಷ್ಕರಣೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇತ್ತೀಚೆಗೆ ನಿರ್ಧಾರ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Petrol, diesel prices dip in daily revision

ಜೂನ್ 16ರಂದು ದೆಹಲಿಯಲ್ಲಿ ಪೆಟ್ರೋಲ್ ದರ 65.48ರು ಪ್ರತಿ ಲೀಟರ್ ನಂತೆ ಇತ್ತು. ಈಗ 63.71 ರು ಪ್ರತಿ ಲೀಟರ್ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 68.03 ಪ್ರತಿ ಲೀಟರ್ ಗಿದೆ. ಡೀಸೆಲ್ ದರ ಪ್ರತಿ ಲೀಟರ್ ಗೆ 57.19ರು ನಂತೆ ಇದೆ.

ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಹೋಮ್ ಡೆಲಿವರಿ, ಇಲ್ಲಿವೆ ಪ್ರಶ್ನೋತ್ತರಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಹೋಮ್ ಡೆಲಿವರಿ, ಇಲ್ಲಿವೆ ಪ್ರಶ್ನೋತ್ತರ

ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ದಿನ ಬೆಳಗ್ಗೆ 6ಗಂಟೆಗೆ ವ್ಯತ್ಯಾಸ ಕಾಣಲಿದೆ. ಮೇ 1ರಿಂದ ಪುದುಚೇರಿ, ಚಂಡೀಗಢ, ಜೆಮ್ಷೆಡ್ ಪುರ, ಉದಯ್ ಪುರ ಹಾಗೂ ವಿಶಾಖಪಟ್ಟಣಂನಲ್ಲಿ ಈ ಹೊಸ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದು ಯಶಸ್ವಿಯಾಗಿದ್ದು ಜೂ. 16ರಿಂದ ದೇಶಾದ್ಯಂತ ಜಾರಿಗೊಳಿಸಲಾಗಿದೆ.

English summary
Petrol prices have been cut by Rs 1.77 per litre and diesel by 88 paise a litre ever since the daily revision in rates was implemented just over a week back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X