ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೀಟರ್ ಪೆಟ್ರೋಲ್‌ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ

|
Google Oneindia Kannada News

ನವದೆಹಲಿ, ಡಿಸೆಂಬರ್, 04: ಪೆಟ್ರೋಲ್ ಗೆ ಲೀಟರ್ ಗೆ ಎಷ್ಟು ಕೊಡುತ್ತಿದ್ದೀರಿ? ಬೆಂಗಳೂರಿಗರು ಇಂದು 64 ರು. ಎಂದು ಥಟ್ಟನೇ ಉತ್ತರ ಹೇಳಬಹುದು. ಬೇರೆ ಬೇರೆ ನಗರದವರು ಬೇರೆ ಬೇರೆ ದರ ಹೇಳ್ತಾರೆ ಬಿಡಿ.

ಆದರೆ ನಿಜಕ್ಕೂ ನಾವು ಪೆಟ್ರೋಲ್ ಗೆ ಎಷ್ಟು ನೀಡಬೇಕು, ನೀಡುತ್ತಿದ್ದೇವೆ..! ಅರೇ ಇದೆಂಥ ಪ್ರಶ್ನೆ ಅಂದುಕೊಂಡ್ರಾ... ಸುಮ್ಮನೆ ಒಂದು ಲೆಕ್ಕಾಚಾರ ಹಾಕ್ಕೊಂಡು ಬರೋಣ..[ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!]

petrol

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲಕ್ಕೆ 2014ರಲ್ಲಿ ಎಷ್ಟಿತ್ತು? ಉತ್ತರ 110 ಡಾಲರ್‌. ಈಗ ಎಷ್ಟಿದೆ ಅಂದ್ರೆ 42 ಡಾಲರ್‌. ಅಂದರೆ ಕುಸಿತದ ಪ್ರಮಾಣ ಸರಿ ಸುಮಾರು ಶೇ.60. ಆದರೆ ಇದೇ ಮಟ್ಟದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿದಿಲ್ಲ. ಇಳಿದಿದ್ದರೆ ಎಷ್ಟಾಗುತ್ತಿತ್ತು? ಆಶ್ಚರ್ಯವಾದರೂ ಸತ್ಯ ಇದೇ ಪ್ರಮಾಣದಲ್ಲಿ ಇಳಿದಿದ್ದರೆ ಲೀಟರ್‌ಗೆ 23 ರು. ಕೊಟ್ಟರೆ ಸಾಕಿತ್ತು!

ಹಾಗಾದರೆ 64 ರು. ಯಾಕೆ? ಅದಕ್ಕೂ ಉತ್ತರ ಹೇಳ್ತೆವೆ. ಭಾರತವು ಶೇ.80ರಷ್ಟು ಪ್ರಮಾಣದ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ಆಮದು ವೆಚ್ಚವನ್ನು ಭಾರತವು ಡಾಲರ್‌ ಮೂಲಕವೇ ಪಾವತಿಸಬೇಕಾಗುತ್ತದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಇದು ನಮ್ಮ ದೇಶ ಆಮದು ಮಾಡಿಕೊಳ್ಳುವುದರ ಮೇಲೆ ದೊಡ್ಡ ಹೊರೆ ಹಾಕುತ್ತದೆ.[ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]

ತೆರಿಗೆ ಲೆಕ್ಕವೂ ಇದೆ
ಎನ್ ಡಿಎ ಅಧಿಕಾರಕ್ಕೆ ಬಂದ ನಂತರ ಆದಾಯ ಸಂಗ್ರಹ ಹೆಚ್ಚು ಮಾಡುವ ಉದ್ದೇಶದಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪದೇ ಪದೇ ಹೆಚ್ಚು ಮಾಡುತ್ತಲೇ ಇದೆ. 2014ರ ಏಪ್ರಿಲ್‌ನಲ್ಲಿ ಲೀಟರ್‌ ಪೆಟ್ರೋಲ್‌ ಮೇಲಿದ್ದ ಅಬಕಾರಿ ಸುಂಕ 9.48 ರು ಇದ್ದಿದ್ದು, ಇದೀಗ 5 ಸಾರಿ ಏರಿಕೆಯಾಗಿದ್ದು ಅದು ಈಗ ಲೀಟರ್‌ಗೆ 19.06 ರೂ.ಗಳ ಮಟ್ಟಕ್ಕೆ ಬಂದು ತಲುಪಿದೆ. ಡೀಸೆಲ್‌ ಲೀಟರ್‌ ಮೇಲಿನ ಅಬಕಾರಿ ಸುಂಕ 2014ರ ಎಪ್ರಿಲ್‌ನಲ್ಲಿ 3.65 ರೂ. ಇದ್ದದ್ದು ಈಗ 10.66 ರು. ಆಗಿದೆ.

ಈಗ ಲೆಕ್ಕ ಮಾಡೋಣ
ಡಾಲರ್ ಎದುರಿನ ಅಪಮೌಲ್ಯ, ಅಬಕಾರಿ ಸುಂಕ, ಲೀಟರ್ ಗೆ 12.10 ವ್ಯಾಟ್, ಕಂಪನಿಗಳ ಕಮಿಷನ್, ಲಾಭ, ತೆರಿಗೆ ಎಲ್ಲವೂ ಸೇರಿಕೊಂಡು 60 ರು. ನೀಡಬೇಕಾಗುತ್ತಿದೆ.

English summary
Petrol prices in India have fallen by 20 per cent from Rs 75 per litre in June 2014 to Rs 60 per litre in December 2015. During the same time, Brent crude prices have crashed over 60 per cent from $110 per barrel to around $42 per barrel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X