ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮಾಡಿ ಮರೆಯಾಗಿರುವ ಮಲ್ಯಗೆ ಜೇಟ್ಲಿ ಎಚ್ಚರಿಕೆ

|
Google Oneindia Kannada News

ನವದೆಹಲಿ, ,ಮಾರ್ಚ್, 28: ಸಾಲ ಪಡೆದ ರೈತರ ಮನೆ ಬಾಗಿಲಿಗೆ ಬ್ಯಾಂಕುಗಳು ದಾಳಿ ಇಟ್ಟು ವಸ್ತುಗಳನ್ನು ಜಪ್ತಿ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಅಂಥ ಪರಿಸ್ಥಿತಿ ವಿಜಯ ಮಲ್ಯಗೂ ಬಂದಿದೆ.

ಸಾಲ ಮಾಡಿ ಮರೆಯಾಗಿರುವ ವಿಜಯ್ ಮಲ್ಯಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ರವಾನಿಸಿದ್ದಾರೆ. ಮರ್ಯಾದೆಯಿಂದ ಸಾಲ ಮರುಪಾವತಿ ಮಾಡಿ, ಇಲ್ಲವಾದರೆ ಕಠಿಣ ಕ್ರಮ ಎದುರಿಸಿ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಲ್ಯಗೆ ಹೇಳಿದ್ದಾರೆ.['ನಾನು ದಂಡ ಕಟ್ಬೇಕಿದ್ರೆ ಮಲ್ಯ ಸಾಲ ಪಾವತಿಯಾಗ್ಬೇಕ್!']

Pay dues honourably or face coercive action: Arun Jaitley to Mallya

ಸಾಲ ಪಡೆದಿರುವ 9 ಸಾವಿರ ಕೋಟಿಗೆ ಯಾರು ಹೊಣೆ? ಹೇಗೆ ಸಾಲ ತೀರಿಸುತ್ತೀರಿ ಎಂದು ಸ್ಪಷ್ಟನೆ ನೀಡಿ ಇಲ್ಲವಾದಲ್ಲಿ ಬ್ಯಾಂಕ್ ಹಾಗೂ ತನಿಖಾ ಸಂಸ್ಥೆಗಳಿಂದ ಕಠಿಣ ಕ್ರಮ ಎದುರಿಸಬೇಕಾಗುತ್ತದ ಎಂದು ಜೇಟ್ಲಿ ಎಚ್ಚರಿಸಿದ್ದಾರೆ. ಅಲ್ಲದೇ ಮಲ್ಯ ಒಡೆತನದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಸಾಕಷ್ಟು ಸಾಲ ಮಾಡಿ ಲಂಡನ್ ಗೆ ಪರಾರಿಯಾಗಿರುವ ಮಲ್ಯಗೆ ಜಾರಿ ನಿರ್ದೇಶನಾಲಯ ನೋಟಿಸ್ ಸಹ ನೀಡಿದೆ. ಏಪ್ರಿಲ್ 2 ರೊಳಗೆ ಹಾಜರಾಗಬೇಕು ಎಂದು ತಿಳಿಸಿದೆ. ಐಡಿಬಿಐ ಬ್ಯಾಂಕ್ ಗೆ ವಂಚಿಸಿದ ಆರೋಪದಡಿ ಹೈದರಾಬಾದಿನ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಸಹ ನೀಡಿದೆ. ಮಲ್ಯ ವಿದೇಶಕ್ಕೆ ಹಾರಲು ಬಿಜೆಪಿ ಕಾರಣ ಎಂದು ವಿಪಕ್ಷಗಳು ಆರೋಪ ಮಾಡಿದ್ದವು. ಇದೀಗ ಸ್ವತಃ ಕೇಂದ್ರ ಹಣಕಾಸು ಸಚಿವರೇ ಮಲ್ಯಗೆ ಎಚ್ಚರಿಕೆ ರವಾನಿಸಿದ್ದಾರೆ.

English summary
In a stern warning to wilful defaulters like Vijay Mallya, Finance Minister Arun Jaitley said they should settle their dues honourably with the banks or else be ready to face "coercive action" by lenders and investigative agencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X