ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗ್ ಸುಳ್ಳುಪತ್ತೆ ಪರೀಕ್ಷೆಗಾಗಿ ಎನ್‌ಐಎ ಕೋರ್ಟ್‌ಗೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 18 : ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಗುರುದಾಸ್‌ಪುರ ಎಸ್ಪಿ ಸಲ್ವಿಂದರ್‌ ಸಿಂಗ್‌ಗೆ ಸುಳ್ಳುಪತ್ತೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪರೀಕ್ಷೆಗೆ ಅನುಮತಿ ನೀಡುವಂತೆ ಕೋರ್ಟ್‌ ಮೆಟ್ಟಿಲೇರಲಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಉಗ್ರರು ಎಸ್ಪಿ ಸಲ್ವಿಂದರ್ ಸಿಂಗ್ ಮತ್ತು ಆತನ ಅಡುಗೆ ಸಹಾಯಕ ಮತ್ತು ಸ್ನೇಹಿತನನ್ನು ಅಪಹರಣ ಮಾಡಿದ್ದರು. ನಂತರ ಅವರನ್ನು ಕಾಡಿನಲ್ಲಿ ಬಿಟ್ಟು, ಅವರ ಕಾರಿನಲ್ಲಿ ವಾಯುನೆಲೆ ಸಮೀಪಕ್ಕೆ ಆಗಮಿಸಿದ್ದರು. [ಸಿಂಗ್, ಗೋಪಾಲ್, ವರ್ಮಾ ಮುಖಾಮುಖಿ ವಿಚಾರಣೆ]

salwinder singh

ಉಗ್ರರು ಅಪಹರಣ ಮಾಡಿರುವ ಬಗ್ಗೆ ಸಿಂಗ್‌ನನ್ನು ಎರಡು ಬಾರಿ ಎನ್‌ಐಎ ವಿಚಾರಣೆ ನಡೆಸಿದೆ. ಆದರೆ, ಅವರ ಹೇಳಿಕೆಗಳಲ್ಲಿ ಗೊಂದಲಗಳು ಇರುವುದರಿಂದ ಸುಳ್ಳುಪತ್ತೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಸಿಂಗ್ ಅಡುಗೆ ಸಹಾಯಕ ಮದನ್ ಗೋಪಾಲ್ ಮತ್ತು ಸ್ನೇಹಿತ ರಾಜೇಶ್‌ ವರ್ಮಾ ವಿಚಾರಣೆ ನಡೆಸಲು ಎನ್‌ಐಎ ನಿರ್ಧರಿಸಿದೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

ಗೃಹ ಸಚಿವಾಲಯ ಒಪ್ಪಿಗೆ : ರಾಷ್ಟ್ರೀಯ ತನಿಖಾ ದಳ ಸಲ್ವಿಂದರ್ ಸಿಂಗ್ ಅವರ ವಿಚಾರಣೆಯ ವಿವರಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದ್ದು, ಸುಳ್ಳು ಪತ್ತೆ ಪರೀಕ್ಷೆ ಅಗತ್ಯವಿದೆ ಎಂದು ಮಾಹಿತಿ ನೀಡಿದೆ. ಪರೀಕ್ಷೆಗೆ ಸಚಿವಾಲಯ ಒಪ್ಪಿಗೆ ನೀಡಿದ್ದು, ಕೋರ್ಟ್ ಅನುಮತಿ ಪಡೆಯಲು ಸೂಚನೆ ನೀಡಿದೆ. [ಸಿಂಗ್ ಉತ್ತರಿಸಬೇಕಾದ ಮೂರು ಪ್ರಶ್ನೆಗಳು]

ಕಾನೂನಿನ ಅನ್ವಯ ಯಾವುದೇ ವ್ಯಕ್ತಿಯ ಸುಳ್ಳುಪತ್ತೆ ಪರೀಕ್ಷೆ ನಡೆಸುವ ಮುನ್ನ ನ್ಯಾಯಾಲಯದ ಒಪ್ಪಿಗೆ ಪಡೆಯುವುದು ಅನಿವಾರ್ಯವಾಗಿದೆ. ಆದ್ದರಿಂದ, ಎನ್‌ಐಎ ಸಿಂಗ್ ಸುಳ್ಳುಪತ್ತೆ ಪರೀಕ್ಷೆಗೆ ಅವಕಾಶ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ. [ಪಿಟಿಐ ಚಿತ್ರ]

English summary
The National Investigating Agency (NIA) will approach the court seeking permission to conduct a lie detector or polygraph test on Salwinder Singh, the Gurdapur Superintendent of Police who was abducted by the terrorists prior to the Pathankot attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X