ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಪಿ ಸಲ್ವಿಂದರ್ ಸಿಂಗ್ ಉತ್ತರಿಸಬೇಕಾದ ಮೂರು ಪ್ರಶ್ನೆಗಳು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 06 : ರಾಷ್ಟ್ರೀಯ ತನಿಖಾ ದಳ ಮತ್ತು ಕೇಂದ್ರ ಗುಪ್ತಚರ ಇಲಾಖೆ ಪಠಾಣ್ ಕೋಟ್ ದಾಳಿಯ ಬಗ್ಗೆ ಮತ್ತೊಮ್ಮೆ ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್ ವಿಚಾರಣೆ ನಡೆಸಲಿವೆ. ಎನ್‌ಐಎ ಸಿಂಗ್‌ರಿಂದ ಹಲವು ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸುತ್ತಿದ್ದು, ಅವು ತನಿಖೆಗೆ ಸಹಕಾರಿಯಾಗಲಿವೆ.

ಉಗ್ರರು ಪಠಾಣ್ ಕೋಟ್ ವಾಯುನೆಲೆಗೆ ನುಗ್ಗುವ ಮೊದಲು ಎಸ್ಪಿ ಸಲ್ವಿಂದರ್ ಸಿಂಗ್ ಹಾಗೂ ಅವರ ಸಹಾಯಕ ಮದನ್ ಗೋಪಾಲ್ ಅವರನ್ನು ಅಪಹರಣ ಮಾಡಿದ್ದರು. ಇಬ್ಬರನ್ನು ಕಾಡಿನಲ್ಲಿ ಬಿಟ್ಟು, ಅವರ ಕಾರನ್ನು ಅಪಹರಿಸಿಕೊಂಡು ವಾಯುನೆಲೆ ತಲುಪಿದ್ದರು. [ಟ್ಯಾಕ್ಸಿ ಚಾಲಕನ ಕೊಂದು ಪಾಕಿಸ್ತಾನಕ್ಕೆ ಕರೆ ಮಾಡಿದ ಉಗ್ರರು]

punjab

ಸಿಂಗ್‌ಗೆ ಮೂರು ಪ್ರಶ್ನೆ : ಸಲ್ವಿಂದರ್ ಸಿಂಗ್ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ. ಮುಖ್ಯವಾಗಿ ಜಲಂಧರ್‌ಗೆ ವರ್ಗಾವಣೆಯಾಗಿದ್ದರು ಗುರುದಾಸ್‌ಪುರದಲ್ಲಿ ಏನು ಮಾಡುತ್ತಿದ್ದರು? ಎಂಬುದಕ್ಕೆ ಉತ್ತರಬೇಕಾಗಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಉಗ್ರರು ಮುಂಜಾನೆ 3 ಗಂಟೆ ಸುಮಾರಿಗೆ ವಾಯುನೆಲೆಗೆ ನುಗ್ಗಿದರು. ಅದಕ್ಕೂ ಮೊದಲು ಅವರು ಸಿಂಗ್‌ ಅವರನ್ನು ಅಪಹರಣ ಮಾಡಿದ್ದರು. ತಡರಾತ್ರಿಯಲ್ಲಿ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಸಿಂಗ್ ಏನು ಮಾಡುತ್ತಿದ್ದರು? ಎಂದು ಎನ್‌ಐಎ ಪ್ರಶ್ನೆ ಮಾಡಲಿದೆ.

ಭಾರತ-ಪಾಕ್ ಗಡಿ ಸೂಕ್ಷ್ಮ ಪ್ರದೇಶವೆಂಬುದು ಎಲ್ಲರಿಗೂ ಗೊತ್ತು. ಆದರೂ, ಎಸ್ಪಿ ಅವರು ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆ ಅಲ್ಲಿಗೆ ಹೋಗಿದ್ದರೆ? ಎಂದು ಎನ್‌ಐಎ ಪ್ರಶ್ನಿಸಲಿದ್ದು, ಸಿಂಗ್ ಮತ್ತು ಮದನ್ ಗೋಪಾಲ್ ಅವರಿಂದ ವಿವರಣೆ ಪಡೆಯಲಿದೆ.

ಮೂರು ಪ್ರಕರಣಗಳು : ಪಠಾಣ್ ಕೋಟ್ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಮೂರು ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ. ಅಪರಿಚಿತರಿಂದ ಟ್ಯಾಕ್ಸಿ ಚಾಲಕ ಇಕಾಗರ್ ಸಿಂಗ್ ಹತ್ಯೆ, ಐಪಿಎಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಅಪಹರಣ ಮತ್ತು ವಾಯುನೆಲೆ ಮೇಲೆ ಉಗ್ರರ ದಾಳಿಯ ಕುರಿತು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದೆ.

20 ಮಂದಿ ಎನ್‌ಐಎ ಅಧಿಕಾರಿಗಳ ತಂಡ ಪಠಾಣ್‌ಕೋಟ್‌ನಲ್ಲಿನ ವಾಯುನೆಲೆ ಮೇಲಿನ ದಾಳಿಯ ಬಗ್ಗೆ ಜನವರಿ 2ರಿಂದ ತನಿಖೆ ನಡೆಸುತ್ತಿವೆ. ಎಸ್‌ಪಿ ದರ್ಜೆಯ ಅಧಿಕಾರಿ ಈ ತನಿಖಾ ತಂಡದ ನೇತೃತ್ವ ವಹಿಸಿದ್ದಾರೆ. [ಪಿಟಿಐ ಚಿತ್ರ]

English summary
The National Investigating Agency and the Central Intelligence Bureau will question the Superintendent of Police, Gurdaspur, Salwinder Singh once again in connection with the Pathankot terror attack case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X