ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್ ದಾಳಿ ಮಾಡಿದ ಉಗ್ರರಿಗೆ 51 ಕೋಟಿ ಬಹುಮಾನ!

|
Google Oneindia Kannada News

ನವದೆಹಲಿ, ಜ, 8: ಫ್ರೆಂಚ್ ವಾರ ಪತ್ರಿಕೆ ಚಾರ್ಲಿ ಹೆಡ್ಬೊ ಕಚೇರಿ ಮೇಲೆ ಗುಂಡಿನ ದಾಳಿ ನಡೆಸಿ 12 ಜನರನ್ನು ಹತ್ಯೆ ಮಾಡಿದ ಉಗ್ರರಿಗೆ ಬಹುಮಾನ ಘೋಷಿಸಲಾಗಿದೆ! ಯಾವುದೋ ಪಾಕಿಸ್ತಾನದ ಉಗ್ರ ಸಂಘಟನೆ ಪ್ರಶಸ್ತಿ, ಘೋಷಿಸಿದ್ದರೆ ಆಶ್ಚರ್ಯವಿರುತ್ತಿರಲಿಲ್ಲ. ಆದರೆ ಉಗ್ರರಿಗೆ 51 ಕೋಟಿ ರೂ. ನೀಡುತ್ತೇನೆ ಎಂದು ಹೇಳಿರುವುದು ಉತ್ತರ ಪ್ರದೇಶದ ಮಾಜಿ ಮಂತ್ರಿ ಹಾಜಿ ಯಾಕೂಬ್ ಖುರೇಷಿ.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಖುರೇಷಿ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉಗ್ರಗಾಮಿಗಳು ಎದುರಿಗೆ ಬಂದು ಹಣ ಸ್ವೀಕರಿಸುವುದಾರೆ ಬಹುಮಾನ ನೀಡುತ್ತೇನೆ ಎಂದು ಬಿಎಸ್ ಪಿ ನಾಯಕ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.[ವ್ಯಂಗ್ಯಚಿತ್ರ ಪತ್ರಿಕೆ ಕಚೇರಿ ಮೇಲೆ ಉಗ್ರರ ದಾಳಿ ; 11 ಸಾವು]

uttar pradesh

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಪೊಲೀಸ್ ಇಲಾಖೆ, ಹೇಳಿಕೆಯ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಇಂಥ ಹೇಳಿಕೆಯನ್ನು ನಿಜವಾಗಿ ಸಮರ್ಥಿಸಿಕೊಂಡಿದ್ದೇ ಆದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದೆ.[ಮತ್ತೆ ಗುಂಡಿನ ಮೊರೆತ, ಬಾಂಬ್ ಸ್ಫೋಟ]

ನಿಜಕ್ಕೂ ಇದೊಂದು ದೇಶದ ಆಂತರಿಕ ಭದ್ರತೆಗೆ ಪೆಟ್ಟು ನೀಡುವ ಹೇಳಿಕೆ. ಭಾರತದಲ್ಲಿನ ಉಗ್ರಗಾಮಿ ಸಂಘಟನೆಗಳ ಬೆಂಬಲಿಗ ಗುಂಪುಗಳಿಗೆ ಹೇಳಿಕೆ ಪ್ರಚೋದನೆ ನೀಡುತ್ತದೆ ಎಂದು ನ್ಯಾಶನಲ್ ಇನ್ ವೆಸ್ಟಿಗೆಟಿಂಗ್ ಏಜೆನ್ಸಿ ಹೇಳಿದೆ. 2006ರಲ್ಲೂ ಖುರೇಷಿ ಇಂಥದ್ದೇ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಆದರೆ ಖುರೇಷಿ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

English summary
The statement by Haji Yakub Qureshi, former minister in Uttar Pradesh, announcing a reward of Rs 51 crore for the attackers of Charlie Hebdo is being viewed very seriously by New Delhi even as the police are looking into the statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X