ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವತ್ತು ಸಾವಿರ ರು. ವ್ಯವಹಾರಕ್ಕೂ ಪ್ಯಾನ್ ಕಡ್ಡಾಯ?

ಪ್ಯಾನ್ ಸಂಖ್ಯೆ ಬಳಕೆಯ ಕನಿಷ್ಠ ಮೌಲ್ಯದ ವ್ಯವಹಾರದ ಮಿತಿಯನ್ನು 50 ಸಾವಿರ ರು.ದಿಂದ 30 ಸಾವಿರ ರು.ಗಳಿಗೆ ಇಳಿಸಲು ಕೇಂದ್ರ ಹಣಕಾಸು ಇಲಾಖೆ ಚಿಂತನೆ ನಡೆಸಿದೆ.

|
Google Oneindia Kannada News

ನವದೆಹಲಿ, ಜನವರಿ 19: ಸದ್ಯಕ್ಕಿರುವ 50 ಸಾವಿರ ರು. ಹಾಗೂ ಅದರ ಮೇಲ್ಪಟ್ಟ ವ್ಯವಹಾರಗಳಿಗೆ ಪ್ಯಾನ್ ಸಂಖ್ಯೆ ಕಡ್ಡಾಯ ಎಂದಿರುವ ನಿಯಮ ಶೀಘ್ರದಲ್ಲೇ ಬದಲಾಗಲಿದ್ದು, 30 ಸಾವಿರ ರು. ಹಾಗೂ ಅದರ ಮೇಲ್ಪಟ್ಟ ವ್ಯವಹಾರಗಳಿಗೂ ಅದು ಕಡ್ಡಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇದೇ ಮಾಸಾಂತ್ಯಕ್ಕೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು 2017-18ರ ವಿತ್ತೀಯ ಬಜೆಟ್ ಮಂಡಿಸುವ ಸಾಧ್ಯತೆಗಳಿದ್ದು, ಅದರಲ್ಲಿ ಈ ಹೊಸ ನಿಯಮಗಳನ್ನು ಸೇರಿಸಲು ಕೇಂದ್ರ ಹಣಕಾಸು ಇಲಾಖೆ ನಿರ್ಧರಿಸಲಾಗಿದೆ. ಇನ್ನು, ಮರ್ಚೆಂಟ್ ವ್ಯವಹಾರಗಳಲ್ಲಿ ಪ್ಯಾನ್ ಕಡ್ಡಾಯ ಮಿತಿಯನ್ನು 2 ಲಕ್ಷ ರು.ಗೆ ಇಳಿಸಲೂ ಯೋಜಿಸಲಾಗಿದೆ.[ಫೆಬ್ರವರಿ 28ರಿಂದ ಪ್ರತಿ ಬ್ಯಾಂಕ್ ಖಾತೆಗೂ ಪ್ಯಾನ್ ಕಾರ್ಡ್ ಕಡ್ಡಾಯ]

PAN may necessary for above Rs 30,000 cash transactions

ಪ್ಯಾನ್ ಕಾರ್ಡ್ ಇಲ್ಲದಿರುವವರು, ತಮ್ಮ ದೊಡ್ಡ ಮೊತ್ತದ ವ್ಯವಹಾರಗಳಿಗೆ ಆಧಾರ್ ಕಾರ್ಡ್ ಅನ್ನೂ ಬಳಸಲು ಅನುವು ಮಾಡಿಕೊಡಲು ಚಿಂತನೆ ನಡೆಸಲಾಗಿದೆ.

ಕಳೆದ ವರ್ಷ ಬಜೆಟ್ ಮಂಡಿಸುವಾಗ ಅರುಣ್ ಜೇಟ್ಲಿಯವರು, 50 ಸಾವಿರ ರು. ಮೇಲ್ಪಟ್ಟ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿದ್ದರು.

English summary
In Budget 2017, finance minister Arun Jetly may implement the rule to make PAN number mandatory for the cash transactions above Rs. 30,000 says sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X