ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತವರಿಗೆ ಮರಳಿದ ಪಾಕಿಸ್ತಾನದ ಹೈಕಮಿಷನ್ ಸಿಬ್ಬಂದಿ

ಭಾರತದಲ್ಲಿನ ಪಾಕಿಸ್ತಾನ ಹೈ ಕಮೀಷನ್ ಕಚೇರಿಯ ಆರು ಸಿಬ್ಬಂದಿಗಳು ಬುಧವಾರ ತಮ್ಮ ದೇಶಕ್ಕೆ ಮರಳಿದಿದ್ದಾರೆ. ಗೂಢಚರ್ಯೆ ಪ್ರಕರಣದಲ್ಲಿ ಆರೋಪ ಹೊತ್ತ ಅಧಿಕಾರಿಗಳು ಪಾಕಿಸ್ತಾನಕ್ಕೆ ಬುಧವಾರ ತೆರಳಿರುವ ಸುದ್ದಿ ಬಂದಿದೆ.

By Mahesh
|
Google Oneindia Kannada News

ನವದೆಹಲಿ, ನವೆಂಬರ್ 02: ಭಾರತದಲ್ಲಿನ ಪಾಕಿಸ್ತಾನ ಹೈ ಕಮೀಷನ್ ಕಚೇರಿಯ ಆರು ಸಿಬ್ಬಂದಿಗಳು ಬುಧವಾರ ತಮ್ಮ ದೇಶಕ್ಕೆ ಮರಳಿದಿದ್ದಾರೆ. ಗೂಢಚರ್ಯೆ ಪ್ರಕರಣದಲ್ಲಿ ಆರೋಪ ಹೊತ್ತ ಅಧಿಕಾರಿಗಳು ಪಾಕಿಸ್ತಾನಕ್ಕೆ ಬುಧವಾರ ತೆರಳಿರುವ ಸುದ್ದಿ ಬಂದಿದೆ.

ಈ ಎಲ್ಲ ಅಧಿಕಾರಿಗಳು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ತಿಳಿದು ಬಂದಿದೆ. ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಹದಗೆಡವುತ್ತಿರುವ ಹಿನ್ನೆಲೆಯಲ್ಲಿ ಈ ಅಧಿಕಾರಿಗಳು ತಮ್ಮ ದೇಶಕ್ಕೆ ಮರಳುವುದು ಅನಿವಾರ್ಯವಾಗಿತ್ತು.

ಪಾಕಿಸ್ತಾನಿ ರಾಯಭಾರ ಕಚೇರಿಯ ನೌಕರನೊಬ್ಬ ಗೂಢಚರ್ಯೆ ಜಾಲದಲ್ಲಿ ಷಾಮೀಲಾಗಿರುವುದಾಗಿ ಭಾರತೀಯ ಪೊಲೀಸರು ಪ್ರಕಟಿಸಿದ ಬಳಿಕ ಉಭಯ ರಾಷ್ಟ್ರಗಳೂ ಅಕ್ಟೋಬರ್ 27ರಂದು ಸೇಡಿನ ಕ್ರಮವಾಗಿ ತಮ್ಮ ತಮ್ಮ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಪ್ರಕಟಿಸಿದ್ದವು.

Six Pakistani High Commission officials leave India

ರಾಜತಾಂತ್ರಿಕ ರಕ್ಷಣೆಗಳನ್ನು ಹೊಂದಿದ್ದ ಪಾಕಿಸ್ತಾನಿ ಹೈ ಕಮೀಷನ್ ನ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೆಹಮೂದ್ ಅಖ್ತರ್ ಅವರ ಮೇಲೆ ಗೂಢಚರ್ಯೆ ಮಾಡಿದ ಆರೋಪ ಎದುರಾಗಿತ್ತು.

ಭಾರತ ಪಾಕ್ ಗಡಿಯಲ್ಲಿ ಬಿಎಸ್ಎಫ್ ಸಿಬ್ಬಂದಿ ನಿಯೋಜನೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಇಬ್ಬರು ಸಹಚರರ ಮೂಲಕ ಪಡೆದು, ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪ ಹೊತ್ತಿದ್ದರು.(ಪಿಟಿಐ)

English summary
As many as six officials in the Pakistani High Commission here today returned home amidst growing tension between the two countries after a Pakistani Mission staffer was caught in an espionage ring and expelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X