ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನಾ ನಿಷೇಧಕ್ಕಾಗಿ ಜಾಗತಿಕ ಸಮರ ಸಾರಿದ ಪಾಕಿಸ್ತಾನ

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಅ.26: ಪಾಕಿಸ್ತಾನಿ ಕಲಾವಿದರ ವಿರುದ್ಧ ಶಿವಸೇನಾ ಸಾರಿರುವ ಸಮರಕ್ಕೆ ಪ್ರತಿಯಾಗಿ ಪಾಕಿಸ್ತಾನ ಜಾಗತಿಕವಾಗಿ ಶಿವಸೇನಾ ನಿಷೇಧ ಹೇರಲು ಆಗ್ರಹಿಸಿ ಅಭಿಯಾನ ಆರಂಭಿಸಲು ಮುಂದಾಗಿದೆ.

ಘಜಲ್ ಗಾಯಕ ಗುಲಾಂ ಅಲಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದ ಶಿವಸೇನಾ ಕಾರ್ಯಕರ್ತರು ಇತ್ತೀಚೆಗೆ ಬಿಸಿಸಿಐ ಕಚೇರಿಗೆ ದಾಳಿ ಮಾಡಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಟೂರ್ನಿ ಆಯೋಜನೆಗೆ ಮುಂದಾಗದಂತೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಗೆ ಎಚ್ಚರಿಕೆ ನೀಡಿದ್ದರು. [ಪಾಕಿಸ್ತಾನಿ ನಟಿ, ಕಲಾವಿದರ ವಿರುದ್ಧ ಶಿವಸೇನೆ ಘರ್ಜನೆ]

ನಂತರ ಪ್ರಸ್ತುತ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಕಿಸ್ತಾನ ಅಂಪೈರ್ ಅಲೀಂ ದಾರ್ ರನ್ನು ಕೂಡಾ ಉಳಿದ ಪಂದ್ಯಗಳಿಂದ ಕೈಬಿಡಲಾಯಿತು. ಪಾಕಿಸ್ತಾನದ ನಾಟಕ ತಂಡವನ್ನು ವಾಪಸ್ ಕಳಿಸಲಾಯಿತು.

ಪಾಕಿಸ್ತಾನ ಮೂಲದ ಕಲಾವಿದರು, ನಟ, ನಟಿಯರು, ಕ್ರಿಕೆಟರ್ಸ್ ಮುಂಬೈ ನೆಲಕ್ಕೆ ಕಾಲಿಡಬಾರದು, ಶಾರುಖ್ ಖಾನ್ ಚಿತ್ರವಿರಲಿ, ಯಾರದ್ದೇ ಆಯೋಜನೆಯಿರಲಿ, ನಾವು ಬಗ್ಗುವುದಿಲ್ಲ ಎಂದು ಶಿವಸೇನೆಯ ಹುಲಿಗಳು ಘರ್ಜಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಪಾಕಿಸ್ತಾನ ಕೂಡಾ ತನ್ನ ಗುಡುಗಿದ್ದು, ಶಿವಸೇನೆಯನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿ, ನಿಷೇಧ ಹೇರುವಂತೆ ವಿಶ್ವದೆಲ್ಲೆಡೆ ಅಭಿಮಾನ ಕೈಗೊಳ್ಳಲು ನಿರ್ಧರಿಸಿದೆ ಎಂದು ದಿ ನೇಷನ್ ಪತ್ರಿಕೆ ವರದಿ ಮಾಡಿದೆ.

Pakistan to launch worldwide campaign seeking ban on Shiv Sena

ಅಲ್ಪಸಂಖ್ಯಾತರನ್ನು ರಕ್ಷಿಸಿ: nation.com.pk ವರದಿಯಂತೆ ಶಿವಸೇನಾ ಕಾರ್ಯಕರ್ತರು ಭಾರತದಲ್ಲಿರುವ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲೇ ಶಿವಸೇನಾ ಕಾರ್ಯಾಚರಣೆ ಅಧಿಕವಾಗಿದ್ದರೂ ಇದರ ಪರಿಣಾಮ ದೇಶದೆಲ್ಲೆಡೆ ಹರಡಲಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹೇಳಲಾಗಿದೆ.

1970ರಲ್ಲಿ ಕೋಮು ಗಲಭೆ, 1984ರಲ್ಲಿ ಭಿವಾಂಡಿ ಗಲಭೆ, ಹಾಗೂ ಗಲಭೆ, 1992-93ರ ಮುಂಬೈ ಗಲಭೆಗೆ ಶಿವಸೇನೆ ಕಾರಣ ಎನ್ನಲಾಗಿದೆ. [ಪಾಕಿಸ್ತಾನದಿಂದ ತಾಯಿ ನಾಡಿಗೆ 'ಗೀತಾ' ಆಗಮನ]

ಶಿವಸೇನಾ ತನ್ನ ಎಲ್ಲೆ ಮೀರಿದೆ: ಪಾಕಿಸ್ತಾನದ ಸಂಘಟನೆಗಳಿಗೆ ಭಾರತದಲ್ಲಿ ನಿಷೇಧ ಹೇರಬಹುದಾದರೆ ಶಿವಸೇನೆಗೆ ವಿಶ್ವದೆಲ್ಲೆಡೆ ನಿಷೇಧ ಹೇರಬೇಕು. ಭಯೋತ್ಪಾದನೆ ವಿರುದ್ಧ ಉಭಯ ದೇಶಗಳು ಹೋರಾಟ ಬೇಕಾದರೆ ಇಂಥ ಸಮಾಜ ಘಾತುಕ ಶಕ್ತಿಗಳನ್ನು ನಿಗ್ರಹಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನದ ಸಂಸತ್ತಿನಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಿಂದ ಶಿವಸೇನಾ ನಿಷೇಧಕ್ಕೆ ಆಗ್ರಹಿಸಿ ವಿಧೇಯಕ ಮಂಡಿಸಲಾಗಿದೆ. ಶಿವಸೇನೆಯನ್ನು ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿ ನಿಷೇಧ ಹೇರುವಂತೆ ಕೋರಿ ಪಾಕಿಸ್ತಾನ ತನ್ನ ಅಭಿಯಾನ ಆರಂಭಿಸಲಿದೆ. (ಒನ್ ಇಂಡಿಯಾ ಸುದ್ದಿ)

English summary
While the Shiv Sena in Maharashtra continues to target Pakistan in every possible way, a campaign has now been launched in Pakistan seeking a ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X