ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನ್ಯದ ಲ್ಯಾಪ್ ಟಾಪ್ ಕದ್ದರೆ 10 ಲಕ್ಷ ಬಹುಮಾನ!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂ. 22: ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳಿರುವ ಲ್ಯಾಪ್ ಟಾಪ್ ಗಳನ್ನು ಕದಿಯಲು ಪಾಕಿಸ್ತಾನದ ಐಎಸ್ ಐ 10 ಲಕ್ಷ ರು. ಗಳ ಆಫರ್ ನೀಡಿತ್ತು.

ಗುಪ್ತಚರದಳ ಇಂಥದ್ದೊಂದು ಆತಂಕಕಾರಿ ಮಾಹಿತಿಯನ್ನು ಬಹಿರಂಗ ಮಾಡಿದೆ. ಸೈನ್ಯದ ಕೆಳಮಟ್ಟದ ಅಧಿಕಾರಿಗಳಿಗೆ ಐಎಸ್ ಐ ಹಣದ ಆಮಿಷ ಒಡ್ಡಿತ್ತು ಎನ್ನಲಾಗಿದೆ.[ಬಿರಿಯಾನಿಗೆ ಹೆಸರಾಗಿದ್ದ ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]

pakistan

ಕೊಲಂಬೋ ಮಾರ್ಗದಲ್ಲಿ ದಕ್ಷಿಣ ಭಾರತದ ಮೇಲೆ ದಾಳಿ ನಡೆಸಲು ಐಎಸ್ ಐ ಹೊಂಚು ಹಾಕಿದ್ದು ಫಲ ನೀಡಿರಲಿಲ್ಲ. ಹಾಗಾಗಿ ಭಾರತೀಯ ಸೇನೆಗೆ ಸಂಬಂಧಿಸಿದ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹಣದ ಆಮಿಷ ನೀಡುವ ಕ್ರಮಕ್ಕೆ ಮುಂದಾಯಿತು.

ಲ್ಯಾಪ್ ಟಾಪ್ ಕದಿಯಿರಿ 10 ಲಕ್ಷ ಪಡೆಯಿರಿ!
ಮಾಹಿತಿ ಬೆನ್ನು ಹತ್ತಿದ ಗುಪ್ತಚರ ದಳಕ್ಕೆ ಒಂದೊಂದೆ ವಿಚಾರಗಳು ತಿಳಿಯುತ್ತ ಹೋಯಿತು. ಬಾಲು ಎಂಬಾತನಿಗೆ ಐಎಸ್ ಐ ಲ್ಯಾಪ್ ಟ್ಯಾಪ್ ಕದಿಯುವ ಜವಾಬ್ದಾರಿಯನ್ನು ಒದಗಿಸಿತ್ತು. ಇದಕ್ಕೂ ಮುನ್ನ ಶ್ರೀಲಂಕಾದ ಪ್ರಜೆ ಸಕೀರ್ ಹುಸೇನ್ ಎಂಬಾತನಿಗೆ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿಕೊಡಲಾಗಿತ್ತು. ಆದರೆ ಹುಸೇನ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.[ಅಬ್ಬಾ... ಜೀಹಾದಿಗಳು ಎಂಥೆಂತಾ ಜೋಕ್ ಮಾಡ್ತಾರಪ್ಪಾ!]

ಇಲ್ಲಿಂದ ತನ್ನ ಕುತಂತ್ರದ ದಿಕ್ಕು ಬದಲಿಸಿದ ಐಎಸ್ ಐ ಹನಿ ಟ್ರ್ಯಾಪ್ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ನಂತರ ಹಣದ ಆಮಿಷ ನೀಡುವ ತೀರ್ಮಾನಕ್ಕೆ ಬಂದಿತು.

ಮಾಹಿತಿ ಪಡೆದುಕೊಂಡು ಐಎಸ್ ಐ ಏನು ಮಾಡುವುದಿತ್ತು ?
ಮೊದಲಿಗೆ ಐಎಸ್ ಐ ಗುರಿ ಇದ್ದದ್ದು ದಕ್ಷಿಣ ಭಾರತದ ಮೇಲೆ. ಇಲ್ಲಿನ ಸ್ಮಗ್ಲಿಂಗ್ ಜಾಲ ಮತ್ತು ಖೋಟಾ ನೋಟು ಜಾಲವನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪುಸುವುದರಲ್ಲಿತ್ತು.

ನಕ್ಸಲ್ ಹಾವಳಿಯೂ ದಕ್ಷಿಣ ಭಾರತವನ್ನು ಕಾಡುತ್ತಿದ್ದು ಕೇರಳದ ನಕ್ಸಲ್ ನಾಯಕರನ್ನು ಸಂಪರ್ಕಕ್ಕೆ ತಂದುಕೊಳ್ಳುವ ಉದ್ದೇಶವನ್ನು ಹೊಂದಿತ್ತು. ತಮಿಳು ನಾಡಿನ ಬಂದರುಗಳ ಮೂಲಕ ಕೇರಳದ ತುದಿಯವರೆಗೆ ಸಂಪರ್ಕ ಸಾಧಿಸುವ ಉದ್ದೇಶ ಯೋಜನೆಯ ಹಿಂದೆ ಅಡಗಿತ್ತು.

ಸೇನೆ ಮಾರ್ಗಗಳ ಮೇಲೆ ತನ್ನ ನಿಯಂತ್ರಣವನ್ನು ಯಾವ ರೀತಿಯಲ್ಲಿ ಹೊಂದಿದೆ? ಎಂಬುದನ್ನು ತಿಳಿದುಕೊಳ್ಳಬೇಕಾದ್ದರಿಂದ ಐಎಎಸ್ ಏನು ಮಾಡಲು ಸಿದ್ಧವಾಗಿತ್ತು. ಹನಿಟ್ರ್ಯಾಪ್ ನಲ್ಲಿ ಸಿಕ್ಕ ಮಾಹಿತಿಗಳು ಕಡಿಮೆ ಇದ್ದುದರಿಂದ ಹಣದ ಆಮಿಷ ನೀಡಿ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ಇಳಿದಿತ್ತು.

ಸುರಕ್ಷಾ ತಂತ್ರಗಳು
ಇಂಥ ಕೆಲಸಗಳನ್ನು ಹೇಳಿದಂತೆ ಮಾಡುವುದು ಅಷ್ಟು ಸುಲಭವಲ್ಲ. ಇಂಥ ಘಟನಾವಳಿಗಳಿಗೆ ಆಸ್ಪದ ನೀಡಬಾರದು ಎಂಬ ಕಾರಣಕ್ಕೆ ಸೈನ್ಯ ಹಲವಾರು ಸುರಕ್ಷತಾ ಕ್ರಮಗಳನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದೆ. ಅಲ್ಲದೇ ತನ್ನ ಸಿಬ್ಬಂದಿಗೆ ಲ್ಯಾಪ್ ಟಾಪ್ ನ್ನು ಮನೆಗೆ ತೆಗೆದುಕೊಂಡು ಹೋದದಂತೆಯೂ ಸೂಚನೆ ನೀಡಲಾಗಿದೆ.

ಇಂಥ ಮಾಹಿತಿ ಸೋರಿಕೆಯಾಗದೇ ಇದ್ದಾಗಲೂ ಭಾರತ ಮುಜುಗರಕ್ಕೆ ಈಡಾದ ಸಂದರ್ಭಗಳು ಇದ್ದವು. ಚೀನಾ ಭಾರತೀಯ ಸೈನ್ಯದ ಸಾಫ್ಟ್ ವೇರ್ ನ್ನೇ ಹ್ಯಾಕ್ ಮಾಡಿತ್ತು. ಸೈಬರ್ ಅಪರಾಧ ದಳದ ಎಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲವೂ ತಹಬದಿಗೆ ಬಂದಿತ್ತು. ಈಗ ಪಾಕಿಸ್ತಾನ ನಮ್ಮ ಸೈನ್ಯದ ಮಾಹಿತಿ ಪಡೆಯಲು ತಂತ್ರ ಬಳಸಲು ಹೋಗಿ ಸಾಧ್ಯವಾಗದೇ ಕೈ ಕೈ ಹಿಸುಕಿಕೊಳ್ಳುತ್ತಿದೆ.

English summary
The ISI which has been notorious for several nefarious activities carried on Indian soil has now offered Rs 10 lakhs to steal laptops of army personnel, as per the investigation conducted by the National Investigating Agency. After the honey traps laid by the ISI to get information from low ranking officials of the army has been by and large controlled, the new modus operandi is now to steal laptops belonging to army officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X