ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಿಕರ ಸಾವು: ಪಾಕ್ ಕೈವಾಡ ಸಾಬೀತು ಮಾಡುವ ಸಾಕ್ಷ್ಯ ಲಭ್ಯ

ಅಮೆರಿಕಾ ಸರಕಾರದ ಮುದ್ರೆಯಿರುವ ಒಂದು ಜೊತೆ ರಾತ್ರಿ ಬಳಸುವ ಕನ್ನಡಕ, ಮತ್ತೊಂದು ವಸ್ತುವಿನಲ್ಲಿ ಪಾಕಿಸ್ತಾನದ ಗುರುತಿದೆ. ಆ ಫೋಟೋಗಳನ್ನು ಸೇನೆಯು ಟ್ವಿಟ್ಟರ್ ನಲ್ಲಿ ಹಾಕಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು-ಕಾಶ್ಮೀರ, ನವೆಂಬರ್ 29: ಮೂವರು ಭಾರತೀಯ ಯೋಧರ ಸಾವಿನಲ್ಲಿ ಪಾಕ್ ಕೈವಾಡ ಇರುವುದನ್ನು ರುಜುವಾತು ಪಡಿಸುವಂಥ ಸಾಕ್ಷ್ಯಗಳು ದೊರೆತಿವೆ. ಜಮ್ಮು-ಕಾಶ್ಮೀರದ ಮಚಿಲ್ ವಲಯದ ಮೂವರು ಭಾರತೀಯ ಸೈನಿಕರನ್ನು ಕೊಲ್ಲಲಾಗಿತ್ತು. ಅದರಲ್ಲಿ ಒಬ್ಬ ಸೈನಿಕನ ದೇಹವನ್ನು ಹೇಗೆಂದರೆ ಹಾಗೆ ಕಡಿಯಲಾಗಿತ್ತು.

ಪಾಕ್ ನ ಇಂಥ ಹೇಡಿ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಭಾರತೀಯ ಸೇನೆ ಕೂಡ ಟ್ವಿಟ್ಟರ್ ನಲ್ಲಿ ಹೇಳಿತ್ತು. ಇದರ ಜತೆಗೆ ಶೋಧದ ವೇಳೆ ದಾಳಿಯಲ್ಲಿ ಪಾಕ್ ಕೈವಾಡ ಇರುವುದನ್ನು ಖಚಿತಪಡಿಸುವಂಥ ಸಾಕ್ಷ್ಯಗಳು ದೊರೆತಿದ್ದರಿಂದ ಅದರ ಎರಡು ಫೋಟೋಗಳನ್ನು ಪೋಸ್ಟ್ ಮಾಡಲಾಗಿತ್ತು.[ಭಾರತೀಯ ಯೋಧನ ರುಂಡ ಕತ್ತರಿಸಿ ಬಿಸಾಕಿದ ಪಾಕ್ ಉಗ್ರರು]

ಅಮೆರಿಕಾ ಸರಕಾರದ ಮುದ್ರೆಯಿರುವ ಒಂದು ಜೊತೆ ರಾತ್ರಿ ಬಳಸುವ ಕನ್ನಡಕ, ಮತ್ತೊಂದು ವಸ್ತುವಿನಲ್ಲಿ ಪಾಕಿಸ್ತಾನದ ಗುರುತಿದೆ. ಆ ಫೋಟೋಗಳನ್ನು ಸೇನೆಯು ಟ್ವಿಟ್ಟರ್ ನಲ್ಲಿ ಹಾಕಿದೆ.

Pak proof

ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವಂಥ ದಾಳಿ ಭಾರತೀಯ ಸೇನೆಯಿಂದ ನವೆಂಬರ್ 22ರಂದು ನಡೆಯಿತು. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಭಾರತೀಯ ಸೇನೆಯ ಭಾರಿ ಗುಂಡಿನ ದಾಳಿಯಲ್ಲಿ ಹನ್ನೊಂದು ನಾಗರಿಕರು, ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕ್ ಹೇಳಿತ್ತು.[ಪಾಕ್ ಕ್ರೌರ್ಯಕ್ಕೆ ಸಾಕ್ಷಿಯಾದ ಮಚಿಲ್ ನಲ್ಲಿ ಪಹರೆ ಸುಲಭವಲ್ಲ!]

ಆ ನಂತರ ಪಾಕ್ ನ ಡಿಜಿಎಂಒ ಸ್ವತಃ ಕರೆ ಮಾಡಿ ಗಡಿಯ ಉದ್ವಿಗ್ನ ಸ್ಥಿತಿ ಕಡಿಮೆ ಮಾಡುವಂತೆ ಕೇಳಿದ್ದರು. ಆ ನಂತರ ಎರಡೂ ದೇಶಗಳ ಡಿಜಿಎಂಒ ಮಧ್ಯೆ ನಡೆದ ಮಾತುಕತೆ ವೇಳೆ, ಭಾರತ ಸ್ಪಷ್ಟವಾಗಿ ಹೇಳಿತ್ತು: ಪಾಕಿಸ್ತಾನ ಸರಿಯಾಗಿ ವರ್ತಿಸಬೇಕು. ಅಪ್ರಚೋದಿತ ಗುಂಡಿನ ದಾಳಿಯನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿತ್ತು.

English summary
On the army's twitter page, it was posted that search leads and recoveries indicate Pakistan's complicity in the attack. in which 3 Indian soldiers were killed. The army posted two photographs on its Twitter handle to suggest Pakistan's role in this gory attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X