ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಗಲಭೆಗೆ ಪಾಕ್ ನಿಂದ ಕೋಟಿ ಕೋಟಿ ಹಣ?

|
Google Oneindia Kannada News

ನವದೆಹಲಿ: ಕಳೆದ ಕೆಲವಾರು ತಿಂಗಳುಗಳಿಂದ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಗಲಭೆಗೆ ಪಾಕಿಸ್ತಾನದಲ್ಲಿರುವ ಲಷ್ಕರ್- ಎ- ತೊಯ್ಬಾ ಹಾಗೂ ಕೆಲವಾರು ಉಗ್ರ ಸಂಘಟನೆಗಳಿಂದ ಕೋಟಿ ಕೋಟಿ ಹಣವು ನಿರಂತರವಾಗಿ ಸರಬರಾಜು ಆಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹೇಳಿದೆ.

ಈ ಉಗ್ರ ಸಂಘಟನೆಯ ನಾಯಕರಾದ ಹಫೀಜ್ ಸಯೀದ್ , ಫಾರೂಕ್ ಅಹ್ಮದ್ ದಾರ್, ಸಯ್ಯಲ್ ಅಲಿ ಷಾ ಗಿಲಾ, ಗಾಜಿ ಜಾವೇಬ್ ಬಾಬಾ ಸೇರಿದಂತೆ ಹಲವಾರು ನಾಯಕರು ತಮ್ಮನ್ನು ಬೆಂಬಲಿಸುವ ವ್ಯಕ್ತಿಗಳು, ಸಂಘಟನೆಗಳಿಂದ ಹಣ ವಸೂಲಿ ಮಾಡಿ ಅದನ್ನು ಕಾಶ್ಮೀರದಲ್ಲಿರುವ ಯುವ ಜನರನ್ನು ಎತ್ತಿ ಕಟ್ಟಲು ಬಳಸಿಕೊಳ್ಳುತ್ತಿವೆ ಎಂಬುದು ಎನ್ಐಎ ವಾದ.

Pak's Lashkar-e-taiba funds for Kashmir violence: NIA

ಇದರ ಜತೆಯಲ್ಲೇ ಕಾಶ್ಮೀರದಲ್ಲಿರುವ ಜನತೆಯನ್ನು, ಅದರಲ್ಲೂ ಹೆಚ್ಚಾಗಿ ಯುವ ಜನತೆಯನ್ನು ಭಾರತೀಯ ಯೋಧರ ವಿರುದ್ಧ ಎತ್ತಿ ಕಟ್ಟುವ ಕುತಂತ್ರವನ್ನೂ ಈ ಉಗ್ರ ಸಂಘಟನೆಗಳು ಮಾಡುತ್ತಿವೆ ಎಂದು ಎನ್ಐಎ ಹೇಳಿದೆ.

ಈ ಬಗ್ಗೆಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದು, ಈಗಾಗಾಲೇ ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಎಂದು ಎನ್ಐಎ ಹೇಳಿದೆ.

{promotion-urls}

English summary
Pakistan based terror group Lashkar-e-Taiba leaders funds Kashmiri youth to protest against the government and the Indian military, says National Investigating Agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X