ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಸ್ಟ್ ಗಾರ್ಡ್ ಡಿಐಜಿ ವಿರುದ್ಧ ತನಿಖೆಗೆ ಆದೇಶ

By ವಿಕಾಸ್ ನಂಜಪ್ಪ
|
Google Oneindia Kannada News

ಪಾಕಿಸ್ತಾನ ಮೂಲದ ದೋಣಿಯನ್ನು ಸ್ಫೋಟಿಸಿದ್ದು ಭಾರತೀಯ ಕೋಸ್ಟ್ ಗಾರ್ಡ್ ಸೈನಿಕರು. ಈ ದೋಣಿ ಸ್ಫೋಟಿಸಲು ಆದೇಶ ನೀಡಿದವರಲ್ಲಿ ತಾವೂ ಒಬ್ಬರು ಎಂದು ಹೇಳಿಕೆ ನೀಡಿರುವ ಕೋಸ್ಟ್ ಗಾರ್ಡ್ ಡಿಐಜಿ ಬಿ.ಕೆ. ಲೋಶಾಲಿ ಅವರ ವಿರುದ್ಧ ತನಿಖೆ ನಡೆಸಲು ಭಾರತ ಸರ್ಕಾರ ಆದೇಶ ನೀಡಿದೆ.

ಈ ಬೋಟ್‌ನಲ್ಲಿದ್ದವರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆಂದು ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆ ನೀಡಿತ್ತು. ಆದರೆ, ಡಿಐಜಿ ಅವರ ಈ ಹೇಳಿಕೆಯಿಂದ ಸಾಕಷ್ಟು ಗೊಂದಲ ಮೂಡಿಸಿದೆ. ಆದ್ದರಿಂದ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. [ಡಿಐಜಿ ಕೊಟ್ಟ ಸ್ಪಷ್ಟೀಕರಣ ಏನು?]

pak

ಬಿ.ಕೆ. ಲೋಶಾಲಿ ಅವರು ತಾವು ಈ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಅವರು ಮಾತನಾಡಿರುವ ವಿಡಿಯೋ ಸಿಕ್ಕಿದ್ದು, ಆರೋಪವನ್ನು ಪುಷ್ಠೀಕರಿಸುತ್ತಿದೆ. [ಕೋಸ್ಟ್ ಗಾರ್ಡ್ ಕಣ್ಣಿಗೆ ಪಾಕ್ ಹಾವು ಬಿದ್ದಿದ್ದು]

ಈ ಕುರಿತು ಎಲ್ಲ ಅಂಕಿ-ಅಂಶಗಳನ್ನು ಸಂಗ್ರಹಿಸಿರುವ ಸರ್ಕಾರ ಲೋಶಾಲಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಂಭವನೀಯತೆ ಇದೆ. ಆರೋಪ ಸಾಬೀತಾದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸೂಚನೆಯನ್ನೂ ನೀಡಿದೆ.

ಪ್ರಕರಣ ಕುರಿತು ಕೇಂದ್ರ ಸರ್ಕಾರ ಈಗಾಗಲೇ ನೀಡಿರುವ ಹೇಳಿಕೆಗೆ ಬದ್ಧವಾಗಿದೆ. ದೋಣಿಯಲ್ಲಿದ್ದ ಉಗ್ರರು ಸಿಕ್ಕಿಬೀಳುವ ಭಯದಲ್ಲಿ ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆಂದು ತಿಳಿಸಿದೆ.

English summary
The government of India has ordered an inquiry against Coast Guard DIG B K Loshali after he said that he was the one who ordered shooting down the Pakistan boat. Loshali had said that he had ordered the Pakistani boat of terror to be shot down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X