ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ ಟಿಐ ಪವರ್: ಸೋನಿಯಾ, ಅನಂತ್, ರಾಜನಾಥ್ ಗೂ ಬಿಸಿ

By Mahesh
|
Google Oneindia Kannada News

ನವದೆಹಲಿ, ಆ.27: ಮಾಹಿತಿ ಹಕ್ಕು ಕಾಯ್ದೆ ಅರ್ಜಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಪ್ರಧಾನಿ ಮೋದಿ ಅವರು ಯತ್ನಿಸುತ್ತಿರುವ ಬೆನ್ನಲ್ಲೇ ಆಸ್ತಿ ವಿವರಕ್ಕೆ ಸಂಬಂಧಿಸಿದಂತೆ ಆರ್ ಟಿಐ ಮೂಲಕ ಮಹತ್ವದ ಮಾಹಿತಿ ಹೊರಬಂದಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅಲ್ಲದೆ ಗೃಹ ಸಚಿವ ರಾಜನಾಥ್ ಸಿಂಗ್ ಕೂಡಾ ಆಸ್ತಿ ವಿವರ ಸಲ್ಲಿಸಿಲ್ಲ ಎಂಬ ಮಾಹಿತಿ ಲೋಕಸಭಾ ಕಾರ್ಯಾಲಯದಿಂದ ತಿಳಿದು ಬಂದಿದೆ. [ಸೋನಿಯಾಗೆ ಅಚ್ಚರಿ ತಂದ ಪ್ರಧಾನಿ ಮೋದಿ ನಡೆ!]

ಸುಮಾರು 401 ಸಂಸದರು ಇನ್ನೂ ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸಿಲ್ಲ ಎಂದು ಆರ್ ಟಿಐ ಅರ್ಜಿ ಮೂಲಕ ಬಹಿರಂಗಗೊಂಡಿದೆ. ಲೋಕಸಭೆ ಅಸ್ತಿ ಬಹಿರಂಗ ಕಾಯ್ದೆ 2004 ಹಾಗೂ 1951ರ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 75(ಎ) ಅನ್ವಯ ಸಂಸದರು ಪ್ರಮಾಣ ವಚನ ಸ್ವೀಕರಿಸಿದ 90 ದಿನಗಳಲ್ಲಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಅದರೆ, 16ನೇ ಲೋಕಸಭೆಗೆ ಆಯ್ಕೆಯಾಗಿರುವ ಪೈಕಿ 401 ಸಂಸದರು ಇನ್ನೂ ಆಸ್ತಿ ವಿವರ ನೀಡಿಲ್ಲ.

400 MPs yet to declare their assets and liabilities details

ಘಟನಾಘಟಿಗಳಿದ್ದಾರೆ: ಈ ಪಟ್ಟಿಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಿಂದ ಅನಂತ್ ಕುಮಾರ್, ಕಾಂಗ್ರೆಸ್ಸಿನ ವೀರಪ್ಪ ಮೋಯ್ಲಿ ಸೇರಿದ್ದಾರೆ. ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಉಮಾ ಭಾರತಿ, ನಿತಿನ್ ಗಡ್ಕರಿ, ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಹರ್ಷವರ್ಧನ್, ರಾಮ್ ವಿಲಾಸ್ ಪಾಸ್ವಾನ್, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಮುಂತಾದವರ ಹೆಸರಿದೆ.

ಬಿಜೆಪಿ 209 ಸಂಸದರು, ಕಾಂಗ್ರೆಸ್ 31, ಟಿಎಂಸಿ 27, ಬಿಜೆಡಿ 18, ಶಿವಸೇನೆ 15, ಟಿಡಿಪಿ 14, ಎಐಎಡಿಎಂಕೆ 9, ಟಿ.ಆರ್.ಎಸ್ 8, ವೈ.ಎಸ್.ಆರ್ ಕಾಂಗ್ರೆಸ್ 6, ಎಲ್.ಜೆ.ಪಿ 6, ಎನ್.ಸಿ.ಪಿ 4,ಸಿಪಿಎಂ 4, ಎಸ್.ಪಿ 4, ಜೆಡಿಯು 2,ಅಪ್ನಾ ದಳ 2,ಅಕಾಲಿದಳ 1 ಎಎಪಿ1.(ಪಿಟಿಐ)

English summary
Over 400 incumbent Lok Sabha members including Rahul Gandhi, Sonia Gandhi, Lal Krishna Advani and Rajnath Singh have not yet declared their assets and liability details, according to an RTI reply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X